ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2019ರ ಮಾರ್ಚ್ ಹೊತ್ತಿಗೆ ದೇಶದ ಶೇ 50ರಷ್ಟು ಎಟಿಎಂಗಳು ಬಂದ್!

By ಅನಿಲ್ ಆಚಾರ್
|
Google Oneindia Kannada News

Recommended Video

ಮಾರ್ಚ್ 2019 ರ ಸಮಯಕ್ಕೆ ದೇಶದ 50% ಅಷ್ಟು ಎ ಟಿ ಎಂಗಳು ಬಂದ್? | Oneindia Kannada

ಕಾರ್ಯಾಚರಣೆ ಸಾಧ್ಯವಿಲ್ಲದ ಕಾರಣ 2019ರ ಮಾರ್ಚ್ ಹೊತ್ತಿಗೆ ದೇಶದಲ್ಲಿರುವ ಶೇ 50ರಷ್ಟು ಎಟಿಎಂಗಳು ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಬಹುದು. ಇದರಿಂದ ನಗರ ಹಾಗೂ ಗ್ರಾಮೀಣ ಜನತೆಗೆ ಭಾರೀ ತೊಂದರೆ ಆಗಲಿದೆ ಎಂದು ಕಾನ್ ಫೆಡರೇಷನ್ ಆಫ್ ಎಟಿಎಂ ಇಂಡಸ್ಟ್ರಿ (CATMi) ಬುಧವಾರ ಎಚ್ಚರಿಕೆ ನೀಡಿದೆ.

ಭಾರತದಲ್ಲಿ ಅಂದಾಜು 2,38,000 ಎಟಿಎಂಗಳಿವೆ. ಅವುಗಳಲ್ಲಿ 1,13,000 ಎಟಿಎಂಗಳು, 1,00,000 ಆಫ್ ಸೈಟ್ ಹಾಗೂ 15,000 ವೈಟ್ ಲೇಬಲ್ ಎಟಿಎಂಗಳ ಬಾಗಿಲನ್ನು ಮುಚ್ಚುವ ನಿರೀಕ್ಷೆ ಇದೆ ಎಂದು CATMi ವಕ್ತಾರರು ತಿಳಿಸಿದ್ದಾರೆ.

ಭಾರತದ ಮೊಟ್ಟ ಮೊದಲ ಬಿಟ್ ಕಾಯಿನ್ ಎಟಿಎಂ ಬಂದ್ ಭಾರತದ ಮೊಟ್ಟ ಮೊದಲ ಬಿಟ್ ಕಾಯಿನ್ ಎಟಿಎಂ ಬಂದ್

ಇದರಿಂದ ಪ್ರಧಾನಮಂತ್ರಿ ಜನ್ ಧನ್ ಯೋಜನೆಯ ಲಕ್ಷಾಂತರ ಫಲಾನುಭವಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಸಬ್ಸಿಡಿ ಹಣವನ್ನು ಎಟಿಎಂಗಳಿಂದ ವಿಥ್ ಡ್ರಾ ಮಾಡುವುದು ಕಷ್ಟವಾಗುತ್ತದೆ. ಇನ್ನು ನಗರ ಪ್ರದೇಶಗಳಲ್ಲಿ ಅಪನಗದೀಕರಣದ ವೇಳೆ ಕಂಡುಬಂದ ಸನ್ನಿವೇಶ ಪುನರಾವರ್ತನೆ ಆಗಿ, ಎಟಿಎಂಗಳ ಮುಂದೆ ಉದ್ದುದ್ದ ಸಾಲುಗಳು ಕಾಣಿಸಿಕೊಳ್ಳಬಹುದು ಎಂದಿದ್ದಾರೆ.

50 percent ATMs in India may shut down by March, warns CATMi

ಸಂಜೆಯ ಬಳಿಕ ಎಟಿಎಂಗಳಿಗೆ ಹಣ ತುಂಬಿಸುವುದಿಲ್ಲ!ಸಂಜೆಯ ಬಳಿಕ ಎಟಿಎಂಗಳಿಗೆ ಹಣ ತುಂಬಿಸುವುದಿಲ್ಲ!

ಇತ್ತೀಚೆಗೆ ನಗದು ನಿರ್ವಹಣೆ ಹಾಗೂ ನಗದನ್ನು ಎಟಿಎಂಗೆ ತುಂಬುವ ವಿಧಾನದಲ್ಲಿ ಬದಲಾವಣೆ ನಿಯಮ ರೂಪಿಸಿದ ಅನುಸಾರ ಎಟಿಎಂಗಳ ಹಾರ್ಡ್ ವೇರ್ ಹಾಗೂ ಸಾಫ್ಟ್ ವೇರ್ ಮೇಲ್ದರ್ಜೆಗೆ ಏರಿಸಲಾಯಿತು. ಇದರಿಂದ ಈ ಕ್ಷೇತ್ರದಲ್ಲಿ ಭಾರೀ ಉದ್ಯೋಗ ನಷ್ಟವಾಗಿದೆ. ಒಟ್ಟಾರೆ ಇದು ಆರ್ಥಿಕ ಸೇವೆಗಳ ಮೇಲೆ ಹಾಗೂ ಒಟ್ಟಾರೆ ಆರ್ಥಿಕತೆ ಮೇಲೆ ಪ್ರಭಾವ ಬೀರುವ ಅಂಶ.

English summary
Nearly 50 per cent Automated Teller Machines (ATMs) may be shut down by March 2019 due to unviability of operations, hitting hard both urban and rural population, the Confederation of ATM Industry (CATMi) warned on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X