ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರ 32 ವೆಬ್ ತಾಣಗಳಿಗೆ ಬೀಗ ಹಾಕಿದ್ದೇಕೆ?

By Mahesh
|
Google Oneindia Kannada News

ನವದೆಹಲಿ, ಜ.1 : ಉಗ್ರರ ಚಟುವಟಿಕೆ ಮೇಲೆ ನಿಗಾ ಇಡುವುದು, ಕಾನೂನು ಬಾಹಿರ ಕಾರ್ಯಗಳಿಗೆ ನಿಯಂತ್ರಣ ಹೇರಲು ಸುಮಾರು 32 ವೆಬ್ ತಾಣಗಳನ್ನು ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ. ಆದರೆ, ನಿಷೇಧಿತ ಪಟ್ಟಿಯಲ್ಲಿ ಕೆಲವು ಓಪನ್ ಸೋರ್ಸ್ ತಾಣಗಳು ಇರುವುದು ವಿಶೇಷ.ಉಗ್ರಗಾಮಿ ಚಟುವಟಿಕೆಗಳನ್ನ ನಿಯಂತ್ರಿಸುವ ಉದ್ದೇಶದಿಂದ ಸುಮಾರು 32ಕ್ಕೂ ಹೆಚ್ಚು ವೆಬ್ ತಾಣಗಳನ್ನು ನಿಷೇಧಿಸಲಾಗಿದೆ.

ನಿಷೇಧಿತವಾಗಿರುವ ವೆಬ್ ಸೈಟ್ ಗಳಲ್ಲಿ ಗಿತ್'ಹಬ್(gist.github.com), ಸೋರ್ಸ್ ಫೋರ್ಜ್(SourceForge) ಮೊದಲಾದ ಜನಪ್ರಿಯ ಕೋಡಿಂಗ್ ವೆಬ್ ಸೈಟ್ ಗಳು, ವಿಮಿಯೋ(Vimeo) ಮತ್ತು ಡೈಲಿಮೋಶನ್(Dailymotion), ವೀಬ್ಲಿ(weebly.com) ಮೊದಲಾದ ವಿಡಿಯೋ ನೆಟ್ವರ್ಕ್ ಗಳು ಪ್ರಮುಖವಾಗಿವೆ ಎಂದು ದೂರ ಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಹೊರಡಿಸಿರುವ ಪ್ರಕಟಣೆ(114259)ಯಲ್ಲಿ ಹೇಳಲಾಗಿದೆ.

32 websites go blank DoT instruction to ISL

ಓಪನ್ ಸೋರ್ಸ್ ಡೆವಲಪಿಂಗ್ ವೆಬ್ ಸೈಟ್ ಗಳನ್ನು ನಿಷೇಧಿಸಿರುವ ಕ್ರಮವನ್ನು ಖಂಡಿಸಿರುವ ಸಾಫ್ಟ್ ವೇರ್ ಡೆವಲಪರ್ ಗಳು ಸರ್ಕಾರಕ್ಕೆ ಇದರ ಗಂಧ ಗಾಳಿ ಗೊತ್ತಿಲ್ಲ ಎಂದು ಟೀಕಿಸಿದ್ದಾರೆ.

ಭಯೋತ್ಪಾದನೆ ನಿಗ್ರಹ ತಂಡದ ಸಲಹೆ ಮೇರೆಗೆ ವೆಬ್ ಸೈಟ್ ಗಳನ್ನು ಬ್ಲಾಕ್ ಮಾಡಲಾಗಿದೆ. ಇಸೀಸ್ ಉಗ್ರ ಭಾರತ ವಿರೋಧಿ ಸಂದೇಶಗಳು ಬರದಂತೆ ತಡೆಯುವುದು ಇದರ ಉದ್ದೇಶ ಎಂದು ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅರವಿಂದ್ ಗುಪ್ತ ಸ್ಪಷ್ಟನೆ ನೀಡಿದ್ದಾರೆ.

ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ ಪೂರಕವಾಗಿ ಟೆಲಿಕಾಂ ವಿಭಾಗದ ಕಾಯ್ದೆ 69ಎ ಅನ್ವಯ ಈ ಕ್ರಮ ಜರುಗಿಸಲಾಗಿದೆ. ವೆಬ್ ಸೈಟ್ ಗಳು ಬ್ಲಾಕ್ ಆಗಿರುವುದರ ಬಗ್ಗೆ ಪ್ಲೇಸ್ಟ್ ಬಿನ್.ಕಾಂ ಟ್ವೀಟ್ ಮಾಡಿತ್ತು. ಸರ್ಕಾರದ ಕ್ರಮದ ವಿರುದ್ಧ ವ್ಯಾಪಕ ಟೀಕೆಗಳು ಕೇಳಿ ಬಂದಿವೆ.(ಏಜೆನ್ಸೀಸ್)

English summary
Instructions issued by the Department of Telecommunications to Internet service providers in the country directing them to block 32 websites on data archiving, video sharing and software development have evoked criticism on the social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X