ಜಿಎಸ್ಟಿ ತೆರಿಗೆ ದರದಲ್ಲಿ ಭಾರೀ ಇಳಿಕೆ: ಜನಸಾಮಾನ್ಯ ಫುಲ್ ಖುಷ್
ನವದೆಹಲಿ, ಡಿ 22: ಪುದುಚೇರಿಯ ಮುಖ್ಯಮಂತ್ರಿ ನಾರಾಯಣಸ್ವಾಮಿ ಅಧ್ಯಕ್ಷತೆ, ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ 31ನೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಕೌನ್ಸಿಲ್ ಸಭೆ ಮುಕ್ತಾಯಗೊಂಡಿದೆ.
ಐಷಾರಾಮಿ 34 ವಸ್ತುಗಳನ್ನು ಹೊರತು ಪಡಿಸಿ, ಮಿಕ್ಕೆಲ್ಲಾ ವಸ್ತುಗಳನ್ನು ಶೇ. 28ರ ಸ್ಲ್ಯಾಬ್ ನಿಂದ ಶೇ. 18ಕ್ಕೆ ಇಳಿಸಲಾಗಿದೆ ಎಂದು ವಿತ್ತ ಸಚಿವ ಜೇಟ್ಲಿ ಹೇಳಿದ್ದಾರೆ. ಶೇ. 28ರ ಸ್ಲ್ಯಾಬ್ ನಿಂದ ಕೆಲವು ವಸ್ತುಗಳನ್ನು ಕಡೆಮೆ ತೆರಿಗೆ ದರದ ಸ್ಲ್ಯಾಬ್ ಗೆ ಇಳಿಸಿದ್ದಕ್ಕೆ, ಮೂರು ಕಾಂಗ್ರೆಸ್ ರಾಜ್ಯದ ಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಸುಮಾರು ನಲವತ್ತು ವಸ್ತುಗಳ ತೆರಿಗೆ ದರವನ್ನು ಇಳಿಸಿರುವುದರಿಂದ, ಜನಸಮಾನ್ಯರಿಗೆ ತೆರಿಗೆ ದರದ ಭಾರ ಇಳಿಯಲಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಜನಧನ್ ಖಾತೆಯ ಮೇಲಿನ ಬ್ಯಾಂಕ್ ಸೇವಾ ದರದ ತೆರಿಗೆಯನ್ನು ಜಿಎಸ್ಟಿಯಿಂದ ವಿನಾಯತಿ ನೀಡಲಾಗಿದೆ.
32ಇಂಚಿನ ಟಿವಿ, ಸಿನಿಮಾ ಟಿಕೆಟ್ ಮೇಲಿನ ಜಿಎಸ್ಟಿ ದರ, ಟೈರ್ ಮುಂತಾದ ವಸ್ತುಗಳ ತೆರಿಗೆ ದರವನ್ನು ಶೇ. 28ರಿಂದ ಶೇ. 18ಕ್ಕೆ ಇಳಿಸಲಾಗಿದೆ.

ಸಿನಿಮಾ ಟಿಕೆಟ್ ಇನ್ನಷ್ಟು ಅಗ್ಗ
ನೂರು ರೂಪಾಯಿವರೆಗಿನ ಸಿನಿಮಾ ಟಿಕೆಟ್ ಮೇಲಿನ ಜಿಎಸ್ಟಿಯನ್ನು ಶೇ.18ರಿಂದ ಶೇ. 12ಕ್ಕೆ ಇಳಿಸಲಾಗಿದೆ. ನೂರು ರೂಪಾಯಿ ಮೇಲಿನ ತೆರಿಗೆಯನ್ನು ಶೇ. 28 ರಿಂದ ಶೇ.18ಕ್ಕೆ ಇಳಿಸಲಾಗಿದೆ.

ಮಾನಿಟರ್, ಟಿವಿ ಸ್ಕ್ರೀನ್, ಟೈರ್, ಬ್ಯಾಟರಿಯ ಪವರ್ ಬ್ಯಾಂಕ್
ಮಾನಿಟರ್, ಟಿವಿ ಸ್ಕ್ರೀನ್, ಟೈರ್, ಬ್ಯಾಟರಿಯ ಪವರ್ ಬ್ಯಾಂಕ್ ಮೇಲಿನ ತೆರಿಗೆಯನ್ನು ಶೇ. 28 ರಿಂದ ಶೇ.18ಕ್ಕೆ ಇಳಿಸಲಾಗಿದೆ. ದೆಹಲಿಯ ವಿಜ್ಞಾನ ಭವನದಲ್ಲಿ ಶನಿವಾರ (ಡಿ 22) ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.

ವ್ಹೀಲ್ ಚೇರ್ ಮೇಲಿನ ದರ
ಪಾದರಕ್ಷೆಯ ಮೇಲಿನ ತೆರಿಗೆಯನ್ನು ಶೇ. 18ರಿಂದ ಶೇ. 12, ಹೆಪ್ಪುಗಟ್ಟಿದ ತರಕಾರಿಗಳ ಮೇಲಿನ ತೆರಿಗೆಯನ್ನು ಜಿಎಸ್ಟಿಯಿಂದ ವಿನಾಯತಿ ನೀಡಲಾಗಿದೆ. ವ್ಹೀಲ್ ಚೇರ್ ಮೇಲಿನ ದರವನ್ನು ಶೇ. 28 ರಿಂದ ಶೇ. 5ಕ್ಕೆ ಇಳಿಸಲಾಗಿದೆ.

ಹೊಸವರ್ಷದ ಉಡುಗೊರೆ ಎಂದಿರುವ ಜೇಟ್ಲಿ
ಜಿಎಸ್ಟಿ ಹೊಸ ತೆರಿಗೆ ದರ ಹೊಸವರ್ಷದ ಉಡುಗೊರೆ ಎಂದಿರುವ ಜೇಟ್ಲಿ, ಸಿಮೆಂಟ್, ಆಟೋ ಮೇಲಿನ ಬಿಡಿಭಾಗವನ್ನು ಶೇ.28ರ ಸ್ಲ್ಯಾಬಿನಲ್ಲೇ ಉಳಿಸಲಾಗಿದೆ. 32ಇಂಚಿನ ಮೇಲಿನ ಟಿವಿಯ ಮೇಲಿನ ತೆರಿಗೆ ದರವನ್ನು ಶೇ.28ರ ಸ್ಲ್ಯಾಬಿನಲ್ಲೇ ಮುಂದುವರಿಸಲಾಗಿದೆ.

01.01.2019ಕ್ಕೆ ಅನ್ವಯವಾಗುವಂತೆ ಜಾರಿಗೆ
ಮೇಲಿನ ಎಲ್ಲಾ ತೆರಿಗೆ ಬದಲಾವಣೆ 01.01.2019ಕ್ಕೆ ಅನ್ವಯವಾಗುವಂತೆ ಜಾರಿಗೆ ಬರಲಿದೆ. ತೆರಿಗೆ ದರ ಇಳಿಕೆಯಿಂದ ಕೇಂದ್ರ ಸರಕಾರಕ್ಕೆ 5,500 ಕೋಟಿ ರೂಪಾಯಿ ನಷ್ಟವಾಗಲಿದೆ. ಶೇ. 28ರ ಸ್ಲ್ಯಾಬ್ ಅನ್ನು ಹಿಂದಕ್ಕೆ ಪಡೆದುಕೊಂಡರೆ, ಸರಕಾರಕ್ಕೆ ತೀವ್ರ ನಷ್ಟವಾಗಲಿದೆ ಎನ್ನುವ ಕಾರಣಕ್ಕಾಗಿ ಮುಂದುವರಿಸಲಾಗಿದೆ ಎಂದು ವಿತ್ತ ಸಚಿವ ಜೇಟ್ಲಿ ಹೇಳಿದ್ದಾರೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications