ಖಾಸಗಿ ರೈಲು: ಪ್ರೀ ಬಿಡ್ಡಿಂಗ್ ಹಂತದಲ್ಲೇ 23 ಖಾಸಗಿ ಸಂಸ್ಥೆಗಳು ಎಂಟ್ರಿ

ನವದೆಹಲಿ, ಆ. 12: ದೇಶಿ ಸಂಸ್ಥೆಗಳಾದ ಬಿಎಚ್​​ಇಎಲ್​, ಎನ್​ಐಐಎಫ್​ ಅಲ್ಲದೆ ವಿಮಾನ ಹಾಗೂ ರೈಲ್ವೆ ತಯಾರಿಕಾ ಕಂಪನಿ ಕೆನಡಾದ ಬೊಂಬಾರ್ಡಿಯರ್​, ಫ್ರಾನ್ಸ್​ನ ರೈಲ್ವೆ ದಿಗ್ಗಜ ಅಲ್​ಸ್ಟಾಮ್​ ಹಾಗೂ ಜರ್ಮ ನಿಯ ದೈತ್ಯ ಸೀಮನ್ಸ್​ ಕಂಪನಿಗಳು ಭಾರತದಲ್ಲಿ ರೈಲು ಸಂಚಾರ ನಿರ್ವಹಣೆ ಪ್ರೀ ಬಿಡ್ಡಿಂಗ್ ಸಭೆಯಲ್ಲಿ ಪಾಲ್ಗಂಡಿವೆ. ಒಟ್ಟಾರೆ, 23 ಸಂಸ್ಥೆಗಳಿಂದ ಪೂರ್ವಭಾವಿ ಬಿಡ್ಡಿಂಗ್ ನಲ್ಲಿ ಪಾಲ್ಗೊಂಡಿದ್ದವು ಎಂದು ಭಾರತೀಯ ರೈಲ್ವೆ ಹೇಳಿದೆ.

ಖಾಸಗಿ ಸಂಸ್ಥೆಗಳಿಗೆ ರೈಲು ಸಂಚಾರ, ನಿರ್ವಹಣೆ ನೀಡಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ. ಇದಕ್ಕಾಗಿ ಟೆಂಡರ್ ಕರೆಯಲಾಗಿದೆ. ಪ್ರೀ ಬಿಡ್ಡಿಂಗ್ ಹಂತದಲ್ಲಿದ್ದು, 23ಕ್ಕೂ ಕಂಪನಿಗಳು ಆಸಕ್ತಿ ತೋರಿಸಿವೆ. ಇನ್ನಷ್ಟು ಸಂಸ್ಥೆಗಳು ಬಿಡ್ ಸಲ್ಲಿಸುವ ಸಾಧ್ಯತೆಯೂ ಇದೆ.

ರೈಲು ನಿರ್ವಹಣೆಯಲ್ಲದೆ ಪ್ರಯಾಣದ ಟಿಕೆಟ್​ ದರವನ್ನು ನಿಗದಿಪಡಿಸುವ ಸ್ವಾತಂತ್ರ್ಯವೂ ಖಾಸಗಿ ಸಂಸ್ಥೆಗೆ ಸಿಗಲಿದೆ. ಬಿಡ್ ಸಲ್ಲಿಸಿದ ಸಂಸ್ಥೆಗಳ ಪೈಕಿ ಇಎಂಎಲ್​, ಐಆರ್​ಸಿಟಿಸಿ, ಸಿಎಎಫ್​, ಸ್ಟರ್ಲೈಟ್​, ಭಾರತ್​ ಫೋರ್ಜ್​, ಜೆಕೆಬಿ ಇನ್​ಫ್ರಾ, ತಿತಾಘರ್​ ವ್ಯಾಗನ್ಸ್​ ಲಿಮಿಟೆಡ್, ಮೇಘಾ ಇಂಜಿನಿಯರ್ಸ್, ಹಿಂದ್ ರಿಕ್ಟಿಫೈಯರ್ಸ್ ಲಿಮಿಟೆಡ್​ ಪ್ರಮುಖವಾಗಿವೆ ಎಂದು ಎಂದು ರೈಲ್ವೆ ಸಚಿವಾಲಯ ಹೇಳಿದೆ.

23 players show interest for running private trains in India

ಖಾಸಗಿಯವರಿಗೆ 109 ಮಾರ್ಗಗಳಲ್ಲಿ ಅವಕಾಶ ನೀಡುವ ಮೂಲಕ ಈ ಕ್ಷೇತ್ರದಲ್ಲಿ 30 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದೆ. ಬೆಂಗಳೂರು, ಚಂಡಿಗಢ್​, ಜೈಪುರ, ದೆಹಲಿ, ಮುಂಬೈ, ಪಾಟ್ನ, ಪ್ರಯಾಗ್​ರಾಜ್​, ಸಿಕಂದರಾಬಾದ್​, ಹೌರಾ, ಚೆನ್ನೈ ವಲಯಗಳಲ್ಲಿ ಖಾಸಗಿ ರೈಲುಗಳು ಸಂಚರಿಸಲಿವೆ. 2023ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಖಾಸಗಿ ರೈಲು ಸಂಚಾರ ಸಾಧ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+