ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಾದ್ಯಂತ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆ

|
Google Oneindia Kannada News

ನವದೆಹಲಿ, ಜುಲೈ1: ಶುಕ್ರವಾರ, ಜುಲೈ 1 ರಿಂದ ಜಾರಿಗೆ ಬರುವಂತೆ ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 198 ರೂ ಕಡಿತಗೊಳಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಚಿಲ್ಲರೆ ವ್ಯಾಪಾರಿಗಳು ದಿನದ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಕೋಲ್ಕತ್ತಾದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 182 ರೂಪಾಯಿ ಇಳಿಕೆಯಾಗಿದೆ. ಮತ್ತೊಂದೆಡೆ ಮುಂಬೈನಲ್ಲಿ ರೂ.190.50 ಮತ್ತು ಚೆನ್ನೈನಲ್ಲಿ ರೂ.187 ಇಳಿಕೆಯಾಗಿದೆ. ಪೆಟ್ರೋಲಿಯಂ ಕಂಪನಿ ಇಂಡಿಯನ್ ಆಯಿಲ್ ಸಹ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಿದೆ. ಈ ಮೊದಲು ಜೂನ್ 1 ರಿಂದ ಅನ್ವಯವಾಗುವಂತೆ 135 ರೂ. ಕಡಿಮೆ ಮಾಡಲಾಗಿತ್ತು.

ಜೂ.16ರಿಂದ ಹೊಸ ಎಲ್‌ಪಿಜಿ ಸಂರ್ಪಕ ದರ ಏರಿಕೆಜೂ.16ರಿಂದ ಹೊಸ ಎಲ್‌ಪಿಜಿ ಸಂರ್ಪಕ ದರ ಏರಿಕೆ

ಆದರೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಗ್ರಾಹಕರು ಹೆಚ್ಚಿನ ಬೆಲೆಯ ಸಂಕಷ್ಟವನ್ನು ಎದುರಿಸುತ್ತಲೇ ಇದ್ದಾರೆ. 14.2 ಕೆಜಿಯ ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲವಾಣೆ ಆಗಿಲ್ಲ.

19 Kg LPG Cylinder Price Has Come Down Across India

ಆದರೆ ಮೇ ತಿಂಗಳಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಎರಡು ಬಾರಿ ಏರಿಕೆಯಾಗಿದೆ. ಗ್ರಾಹಕರು ಎರಡು ಬೆಲೆ ಏರಿಕೆ ಆಘಾತಕ್ಕೊಳಗಾಗಿದ್ದರು. ಮೇ 7 ರಂದು ಮೊದಲ ಬಾರಿಗೆ ಗೃಹಬಳಕೆಯ ಸಿಲಿಂಡರ್‌ನ ದರವನ್ನು 50 ರುಪಾಯಿ ಹೆಚ್ಚಿಸಲಾಯಿತು ಮತ್ತು ಮೇ 19 ರಂದು ಮತ್ತೆ ಬೆಲೆ ಹೆಚ್ಚಿಸಿದ್ದರು.

ಮೇ ತಿಂಗಳಲ್ಲಿ ಹೆಚ್ಚಾಯ್ತು ಪೆಟ್ರೋಲ್, ಡೀಸೆಲ್ ಮಾರಾಟಮೇ ತಿಂಗಳಲ್ಲಿ ಹೆಚ್ಚಾಯ್ತು ಪೆಟ್ರೋಲ್, ಡೀಸೆಲ್ ಮಾರಾಟ

ಏರಿಳಿತ ಕಾಣದ ಪೆಟ್ರೋಲ್, ಡೀಸೆಲ್ ಬೆಲೆ

ಭಾರತದಲ್ಲಿ ಇಂಧನ ಬೆಲೆಗಳು ಈಗ ಒಂದು ತಿಂಗಳಿನಿಂದ ಸ್ಥಿರವಾಗಿವೆ. ಜುಲೈ 1 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಯಥಾಸ್ಥಿತಿಯಲ್ಲಿದ್ದು, ಜನರಿಗೆ ಸಮಾಧಾನ ತಂದಿದೆ. ಇಂಧನ ಬೆಲೆಯಲ್ಲಿನ ಸಣ್ಣದೊಂದು ಏರಿಳಿತ ಕೂಡ ಜನರ ದೈನಂದಿನ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ , ಮೇ 21 ರಂದು ಇಂಧನದ ಅಬಕಾರಿ ಸುಂಕವನ್ನು ಕಡಿತಗೊಳಿಸುವುದಾಗಿ ಘೋಷಿಸಿದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆಯಾಗಿತ್ತು. ಪೆಟ್ರೋಲ್ ಬೆಲೆ ಲೀಟರ್‌ಗೆ 8 ರೂಪಾಯಿ ಇಳಿಕೆಯಾಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 6 ರುಪಾಯಿ ಇಳಿಕೆಯಾಗಿದೆ.

19 Kg LPG Cylinder Price Has Come Down Across India

ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 96.72 ರು. ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 89.62ರು.ಗೆ ಮಾರಾಟವಾಗುತ್ತಿದೆ. ಮತ್ತೊಂದೆಡೆ, ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 111.35 ರು.ಗಳಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 97.28 ರುಪಾಯಿ ಆಗಿದೆ. ಕೋಲ್ಕತ್ತಾದಲ್ಲಿ, ಪೆಟ್ರೋಲ್ ಬೆಲೆ ಲೀಟರ್‌ಗೆ 106.03 ರು ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 92.76 ರು ಆಗಿದ್ದರೆ, ಚೆನ್ನೈನಲ್ಲಿ ಪೆಟ್ರೋಲ್‌ಗೆ 102.63 ರು. ಮತ್ತು ಡೀಸೆಲ್‌ಗೆ 94.24 ರು. ಬೆಲೆ ಇದೆ.

ಉಜ್ವಲ ಯೋಜನೆಯಡಿ ಉಚಿತ ಸಂಪರ್ಕ ಪಡೆದ 9 ಕೋಟಿ ಬಡ ಕುಟುಂಬಗಳು ಮತ್ತು ಇತರ ಫಲಾನುಭವಿಗಳಿಗೆ ಮಾತ್ರ ಅಡುಗೆ ಅನಿಲ ಎಲ್‌ಪಿಜಿಗೆ ಸೀಮಿತ ಸಬ್ಸಿಡಿ ಇದೆ ಮತ್ತು ಕುಟುಂಬಗಳು ಸೇರಿದಂತೆ ಉಳಿದ ಬಳಕೆದಾರರು ಮಾರುಕಟ್ಟೆ ಬೆಲೆಯನ್ನು ಪಾವತಿಸುತ್ತಾರೆ ಎಂದು ಕಳೆದ ತಿಂಗಳು ಸರ್ಕಾರ ಹೇಳಿತ್ತು.

Recommended Video

England ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ವಿಶೇಷ ಪ್ರಯೋಗ | *Cricket | OneIndia Kannada

English summary
The prices of a 19-kg LPG cylinder price has come down across india from July 1, state-owned retailers said in a notification on the day. the price of a 14.2-kg domestic cooking cylinder has remained unchanged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X