ದೂರು ಕೊಡುವವರಿಗೆ ಹೊಡೆಯಿರಿ ಎಂದ ಸಚಿವ ಪ್ರಭು ಚವ್ಹಾಣ್
ಬೀದರ್, ಜೂನ್ 5: ಸರ್ಕಾರದ ಉನ್ನತ ಹುದ್ದೆಯಲ್ಲಿರುವವರಿಗೆ ಮೈತುಂಬಾ ಕಣ್ಣಿರಬೇಕು. ಆಡುವ ಪ್ರತಿ ನುಡಿ ಬಗ್ಗೆ ಎಚ್ಚರದಿಂದರಬೇಕು. ಇಲ್ಲದೇ ಹೋದರೆ ಎಂಥಾ ಅದ್ವಾನಗಳಾಗುತ್ತವೆ ಎಂಬುದಕ್ಕೆ ಇಲ್ಲೊಂದು ತಾಜಾ ನಿದರ್ಶನ ಇದೆ.
Recommended Video

ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಶುಕ್ರವಾರ ಕಮಲನಗರ ತಾಲೂಕಿನ ದಾಬಕಾ ಗ್ರಾಮಕ್ಕೆ ಕೊರೊನಾ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾದ ಲಾಕ್‌ಡೌನ್ ಹಿನ್ನೆಲೆ ಗ್ರಾಮ ಸಂಚಾರ ಭೇಟಿ ವೇಳೆ ಪಂಚಾಯತ್ ಕಾರ್ಯದ ವಿರುದ್ಧ ದೂರುಗಳನ್ನು ಕೊಡುವವರಿಗೆ ಟೋಕೋ ಸಾಲೇಂಕೋ, ಫಾಲ್ತು ಸಾಲೋಂಕೋ ಎಂದು (ದೂರು ಕೊಡುವವರಿಗೆ ಹೊಡೆಯಿರಿ) ಎಂದು ನಿಂದಿಸಿದ್ದಾರೆ.
ದಾಬಕಾ ಗ್ರಾಮ ಪಂಚಾಯತ್ ಸದಸ್ಯನ್ನೊಬ್ಬ ಗ್ರಾಮದಲ್ಲಿ ನಮಗೆ ಸರಿಯಾಗಿ ಕೆಲಸ ಮಾಡಲು ಬಿಡುತ್ತಿಲ್ಲ, ಕೆಲವರು ಸಹಕರಿಸುತ್ತಿಲ್ಲ. ಎಲ್ಲ ಕಾರ್ಯಕ್ಕೂ ಪದೇಪದೇ ಅಡ್ಡಿಪಡಿಸುತ್ತಿದ್ದಾರೆ. ಸಣ್ಣ-ಸಣ್ಣ ವಿಷಯಗಳಿಗೂ ದೂರು ಕೊಡುತ್ತಿದ್ದಾರೆ. ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಕೊಡುತ್ತಾರೆ ಎಂದಿದಕ್ಕೆ, ಸಚಿವರು ಗರಂ ಆದರು. ದೂರು ಕೊಡುವವರಿಗೆ ಟೋಕೋ ಸಾಲೇಂಕೋ ಎಂದು ಅವಾಚ್ಯವಾಗಿ ನಿಂದಿಸಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇಲ್ಲಿಗೆ ಈ ಸಮಯದಲ್ಲಿ ಯಾರೂ ಬರುವುದಿಲ್ಲ, ನೀವೆಲ್ಲ (ಪಂಚಾಯತ್ ಪ್ರತಿನಿಧಿಗಳು-ಅಧಿಕಾರಿಗಳು) ಒಗ್ಗಟ್ಟಿನಿಂದ ಇರಿ. ಯಾರಾದರೂ ದೂರು ಕೊಟ್ಟರೆ ಹೊಡೆಯಿರಿ ಎಂದು ಗ್ರಾಮ ಪಂಚಾಯತ್ ಸದಸ್ಯನಿಗೆ ಅಭಯ ನೀಡಿದ್ದಾರೆ.
ಗ್ರಾಮಸ್ಥರು, ಅಧಿಕಾರಿಗಳ ಸಮ್ಮುಖದಲ್ಲೇ ಸಚಿವರು ಗ್ರಾಮ ಪಂಚಾಯತ್ ಸದಸ್ಯನಿಗೆ ಉಪದೇಶ ನೀಡಿರುವುದು ನೆರೆದಿದ್ದವರಿಗೂ ಶಾಕ್ ಆಗಿದೆ.
ಜನಸಾಮಾನ್ಯರ ರಕ್ಷಕರಾಗಿರುವ ಸಚಿವರೇ ಹೊಡೆಯಿರಿ ಎಮದು ಹೇಳುವ ಕಾನೂನು ಬಾಹಿರವಾಗಿ ನಡೆದುಕೊಂಡಿದ್ದು, ಬೇಲಿಯೇ ಎದ್ದು ಹೊಲ ಮೇಯ್ದಂತೆ. ಗ್ರಾಮ ಪಂಚಾಯತ್‌ಗಳಲ್ಲಿ ನರೇಗಾ ಯೋಜನೆ ಅಡಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿದೆ.
ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳು ಸೇರಿ ಹಣ ಕೊಳ್ಳೆ ಹೊಡೆಯುತ್ತಿರುವ ಬಗ್ಗೆ ಜನಸಾಮಾನ್ಯರು ಮೇಲಾಧಿಕಾರಿಗಳಿಗೆ ದೂರು ಕೊಡುವುದು ಸಚಿವರ ಪ್ರಕಾರ ತಪ್ಪೇ? ದೂರು ಕೊಡುವವರಿಗೆ ಹೊಡೆಯಿರಿ ಎಂದು ಹೇಳುವುದು ಯಾವ ನ್ಯಾಯ? ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಕೆಲವರು ತಮ್ಮ ಸಮಸ್ಯೆಗಳನ್ನು ಸಚಿವರ ಎದುರು ಹೇಳಿಕೊಂಡರು. ಈ ವೇಳೆಯಲ್ಲಿ ಔರಾದ್ ತಾಲೂಕು ಕಾರ್ಯನಿರ್ವಾಹಕಾಧಿಕಾರಿ ಮಾಣಿಕ್ ಪಾಟೀಲ, ಕಮಲನಗರ ತಹಸೀಲ್ದಾರ್ ರಮೇಶ್ ಪೆದ್ದೆ ಸೇರಿದಂತೆ ಆರೊಗ್ಯಾಧಿಕಾರಿಗಳು ಉಪಸ್ಥಿತರಿದ್ದರು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications