ಬೀದರ್‌ನಲ್ಲಿ ಮನೆ ಮೇಲ್ಛಾವಣಿ ಕುಸಿದು ಆರು ಮಂದಿ ಸಾವು
ಬೀದರ್, ಜೂನ್ 26: ಮನೆಯ ಮೇಲ್ಛಾವಣಿ ಕುಸಿದು ಆರು ಮಂದಿ ಮೃತಪಟ್ಟಿರುವ ಘಟನೆ ಬೀದರ್ ಸಮೀಪ ನಡೆದಿದೆ.
ಬೀದರ್‌ನ ಬಸವಕಲ್ಯಾಣ ಪಟ್ಟಣದ ಚಿಲ್ಲಾಗಲ್ಲಿಯ ಬಡಾವಣೆಯ ನದೀಂ ಶೇಖ್(45),ಫರೀದಾ ಬೇಗಂ(34), ಆಯಿಷಾ ಬಾನು(15), ಮಹೆತಾಬಿ(15), ಫರ್ಹಾನ್ ಅಲಿ(4) ಮತ್ತು ಫಯಾಜ್‍ಖಾನ್(6) ಮೃತಪಟ್ಟ ದುರ್ದೈವಿಗಳು.
ಅವರು ಸಾಕಷ್ಟು ವರ್ಷಗಳ ಹಿಂದಿನ ಮಣ್ಣಿನ ಮನೆಯಲ್ಲಿ ವಾಸಿಸುತ್ತಿದ್ದರು. ಸ್ವಲ್ಪ ಮಳೆ ಬಂದಿದ್ದ ಕಾರಣ ಮಣ್ಣು ನೆನೆದಿತ್ತು. ಮನೆಯ ಮೇಲ್ಛಾವಣಿ ಮಣ್ಣಿನಿಂದ ನಿರ್ಮಿಸಲಾಗಿತ್ತು.

ಇದರ ಅರಿವಿಲ್ಲದೆ ರಾತ್ರಿ ಮನೆಯಲ್ಲಿ ಮಲಗಿದ್ದ ಕುಟುಂಬದವರ ಮೇಲೆ ಬೆಳಗಿನ ಜಾವ ಮೇಲ್ಛಾವಣಿ ಕುಸಿದು ಸ್ಥಳದಲ್ಲೆ ಆರು ಮಂದಿ ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ಪೊಲೀಸರು ಗ್ರಾಮಸ್ಥರ ನೆರವಿನೊಂದಿಗೆ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಬಸವಕಲ್ಯಾಣ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications