ಬೀದರ್ ನಲ್ಲಿ ಆರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ದಂಪತಿ ಆತ್ಮಹತ್ಯೆ

ಬೀದರ್, ಫೆಬ್ರವರಿ 01: ವ್ಯಕ್ತಿಯೊಬ್ಬನಿಂದ ಆಗುತ್ತಿದ್ದ ನಿರಂತರ ಕಿರುಕುಳಕ್ಕೆ ಬೇಸತ್ತ ನವದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಯನಗುಂದಾ ಗ್ರಾಮದಲ್ಲಿ ನಡೆದಿದೆ.

ಮಹೇಶ್ ಸಜ್ಜನ ಶೆಟ್ಟಿ (25) ಮತ್ತು ವಿಜಯಲಕ್ಷ್ಮಿ (22) ಇವರೇ ಆತ್ಮಹತ್ಯೆ ಮಾಡಿಕೊಂಡವರು. ಆರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಇವರು ನಿನ್ನೆ ರಾತ್ರಿ ನೇಣು ಹಾಕಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ವಿಜಯಲಕ್ಷ್ಮಿ ಡೆತ್ ನೋಟ್ ಬರೆದಿಟ್ಟಿದ್ದಾರೆ. ಅದರಲ್ಲಿ "ನನ್ನ ಸಾವಿಗೆ ಮನೆಯವರು ಯಾರೂ ಕಾರಣರಲ್ಲ. ಇದಕ್ಕೆ ನನ್ನ ತವರು ಮನೆಯಾದ ಜೋಜನಾ ಗ್ರಾಮದ ರಾಜಪ್ಪ ಚಿದಕೆ ಎಂಬಾತ ಕಾರಣ" ಎಂದು ಬರೆದಿದ್ದಾರೆ.

Newly Married Couple Committed Sucide In Yenagunda

"ನನ್ನ ಪತಿಯ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ತಲೆಕೆಡಿಸಿ ನನ್ನ ಸಂಸಾರವನ್ನು ಹಾಳು ಮಾಡುತ್ತಿದ್ದಾನೆ. ತನಿಗೆ ತಕ್ಕ ಶಿಕ್ಷೆಯಾಗಬೇಕು" ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ.

ಆ ವ್ಯಕ್ತಿಯ ಆರೋಪದಿಂದಾಗಿ ದಂಪತಿ ಮಧ್ಯೆ ಮೂರು ದಿನಗಳಿಂದ ಅನವಶ್ಯಕ ಜಗಳ ನಡೆದಿತ್ತು ಎಂದು ತಿಳಿದುಬಂದಿದೆ. ನಿನ್ನೆ ಶುಕ್ರವಾರ ರಾತ್ರಿ ಮನನೊಂದು ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಚಿಂತಾಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+