ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ವೀಟ್‌ ಮಾಡಿದ ವ್ಯಕ್ತಿಯ ಸಹಾಯಕ್ಕೆ ಬಂದ ಕೊರೊನಾ ಸೈನಿಕರು

|
Google Oneindia Kannada News

ಬೀದರ್, ಏಪ್ರಿಲ್ 14 : ಅನಾರೋಗ್ಯದ ಕಾರಣದ ಔಷಧಿ ಸಿಗದೆ ಪರದಾಡುತ್ತಿದ್ದ ವ್ಯಕ್ತಿಗೆ ಕೊರೊನಾ ಸೈನಿಕರು ಸಹಾಯ ಮಾಡಿದ್ದಾರೆ. ಲಾಕ್ ಡೌನ್ ಹಿನ್ನಲೆಯಲ್ಲಿ ಔಷಧಿ ಪಡೆಯಲು ಸಾಧ್ಯವಾಗದ ವ್ಯಕ್ತಿ ಟ್ವೀಟ್‌ ಮಾಡಿದ್ದರು.

ಕಲಬುರಗಿ ಪಟ್ಟಣದ ಧನರಾಜ್ ಅಡಕಿಲೆ ಎಂಬುವವರಿಗೆ ಔಷಧಿಗಳ ಅಗತ್ಯವಿತ್ತು. ಅದನ್ನು ಪಡೆದುಕೊಳ್ಳಲು ಬೀದರ್‌ ವಾರ್ತಾ ಇಲಾಖೆಯ ಸಿಬ್ಬಂದಿಗಳು ಮತ್ತು ಕೊರೊನಾ ಸೈನಿಕರು ಅನುಕೂಲ ಮಾಡಿಕೊಟ್ಟಿದ್ದಾರೆ.

ಕಲಬುರಗಿಯಿಂದ ಬೀದರ್‌ಗೆ ಮಾತ್ರೆ ತಲುಪಿಸಿದ ಕೊರೊನಾ ಸೈನಿಕರುಕಲಬುರಗಿಯಿಂದ ಬೀದರ್‌ಗೆ ಮಾತ್ರೆ ತಲುಪಿಸಿದ ಕೊರೊನಾ ಸೈನಿಕರು

ವಾಡಿ ಚಿಟ್ಟಾ ರಸ್ತೆಯ ಮನೆಯಲ್ಲಿದ್ದ ಧನರಾಜ ಅವರು ತಮಗೆ ಔಷಧಿ ಪಡೆದುಕೊಳ್ಳಲು ಸಹಾಯ ಬೇಕಿದೆ ಎಂದು ಟ್ವೀಟರ್ ಮೂಲಕ ಮನವಿ ಮಾಡಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿ ನರೇಶಕುಮಾರ ಮತ್ತು ಬಿಂದುಸಾರ ಮತ್ತು ಬೀದರ್ ಜಿಲ್ಲೆಯ ಕೊರೊನಾ ಸೈನಿಕರು ಸಹಾಯ ಮಾಡಿದ್ದಾರೆ.

ದೇಶಾದ್ಯಂತ ಮೇ 3ರವರೆಗೆ ಕೊರೊನಾ ಲಾಕ್‌ಡೌನ್ ವಿಸ್ತರಣೆ: ಮೋದಿ ದೇಶಾದ್ಯಂತ ಮೇ 3ರವರೆಗೆ ಕೊರೊನಾ ಲಾಕ್‌ಡೌನ್ ವಿಸ್ತರಣೆ: ಮೋದಿ

Corona Warriors Helped Man For Medicine

ಏಪ್ರಿಲ್ 13ರಂದು ಧನರಾಜ್ ಅವರು ಬೀದರ್‌ನಲ್ಲಿದ್ದ ಸ್ಥಳಕ್ಕೆ ಹೋಗಿ ಅವರನ್ನು ಸಂಪರ್ಕಿಸಿ, ವಾಹನದ ಮೂಲಕ ಅವರನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಕರೆತಂದರು. ಅವರಿಗೆ ಕಲಬುರಗಿಗೆ ಹೋಗಲು ಪಾಸು ಕೊಡಿಸಿ ಸಹಾಯ ಮಾಡಿದರು.

ಮೇ 3ರ ತನಕ ಪ್ರಯಾಣಿಕ ರೈಲು ಸಂಚಾರ ರದ್ದು ಮೇ 3ರ ತನಕ ಪ್ರಯಾಣಿಕ ರೈಲು ಸಂಚಾರ ರದ್ದು

ಈ ಕುರಿತು ಮಾತನಾಡಿರುವ ಧನರಾಜ್ ಅಡಕಿಲೆ ಅವರು, "ಲಾಕ್‌ ಡೌನ್ ಆದೇಶ ಪಾಲನೆಯಿಂದಾಗಿ ನಾನು ಬೀದರ್‌ನಲ್ಲಿಯೇ ಉಳಿದಿದ್ದೆ. ನನ್ನ ಮನವಿಗೆ ಸ್ಪಂದಿಸಿದ ವಾರ್ತಾ ಇಲಾಖೆಯ ಸಿಬ್ಬಂದಿ ಮತ್ತು ಕೊರೊನಾ ಸೈನಿಕರು ಮತ್ತು ಜಿಲ್ಲಾಡಳಿತಕ್ಕೆ ಧನ್ಯವಾದಗಳು" ಎಂದು ಹೇಳಿದ್ದಾರೆ.

English summary
Bidar distirct corona warriors helped man to travel Kalaburagi for medicine. In the time of lockdown he tweeted for the help.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X