ಬೀದರ್-ತಿರುಪತಿ ನಡುವೆ ಹೊಸ ರೈಲು; ವೇಳಾಪಟ್ಟಿ
ಬೀದರ್, ಅಕ್ಟೋಬರ್ 03; ಬೀದರ್-ತಿರುಪತಿ ನಡುವೆ ಪ್ರಾಯೋಗಿಕವಾಗಿ ಮತ್ತೊಂದು ರೈಲು ಸಂಚಾರ ಆರಂಭವಾಗಿದೆ. ಅಕ್ಟೋಬರ್ ತಿಂಗಳು ಪೂರ್ತಿಯಾಗಿ ಈ ರೈಲು ಸಂಚಾರ ನಡೆಸಲಿದೆ ಎಂದು ಬೀದರ್ ಸಂಸದ ಭಗವಂತ್ ಖೂಬಾ ಹೇಳಿದ್ದಾರೆ.
ಬೀದರ್‌ನಿಂದ ತಿರುಪತಿಗೆ ಮತ್ತೊಂದು ರೈಲು ಓಡಿಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ. ಪ್ರಾಯೋಗಿಕವಾಗಿ ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿದೆ ಎಂದು ಸಂಸದರು ಮಾಹಿತಿ ನೀಡಿದ್ದಾರೆ.
ಹುಬ್ಬಳ್ಳಿ - ಅಂಕೋಲಾ ರೈಲು ಮಾರ್ಗ ಯೋಜನೆ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದೇನು?
ಪ್ರಯಾಣಿಕರು ಈ ಪ್ರಾಯೋಗಿಕ ರೈಲಿನ ಉಪಯೋಗ ಪಡೆದುಕೊಳ್ಳಬೇಕು ಎಂದು ಬೀದರ್ ಸಂಸದ, ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಮನವಿ ಮಾಡಿದ್ದಾರೆ.
ಬೀದರ್-ಬಳ್ಳಾರಿ ಚತುಷ್ಪಥ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣ; ಬಸವರಾಜ ಬೊಮ್ಮಾಯಿ
ತಿರುಪತಿಯಿಂದ ಬೀದರ್‌ಗೆ ಬರಲು ವಿಕಾರಾಬಾದವರೆಗೆ ಹಲವಾರು ರೈಲುಗಳಿವೆ. ವಿಕಾರಾಬಾದ ಬೀದರ್ ತನಕ ಸಹ ನಾಲ್ಕೈದು ರೈಲುಗಳಿವೆ. ಆದ್ದರಿಂದ ಜನರು ಬೀದರ್-ತಿರುಪತಿ ರೈಲಿನಲ್ಲಿ ಆಗಮಿಸಿದರೆ ಬೀದರ್‌ಗೆ ಆಗಮಿಸಲು ಹಲವಾರು ರೈಲುಗಳಿವೆ.
ಬೀದರ್-ಯಶವಂತಪುರ ರೈಲು ಕಲಬುರಗಿ ಮಾರ್ಗವಾಗಿ ಸಂಚಾರ

ಅಕ್ಟೋಬರ್ 2ರ ಭಾನುವಾರ ಬೀದರ್-ತಿರುಪತಿ ವಿಶೇಷ ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಅಕ್ಟೋಬರ್ 31ರ ತನಕ ಪ್ರಾಯೋಗಿಕವಾಗಿ ರೈಲು ಸಂಚಾರ ನಡೆಸಲಿದೆ. ಒಂದು ತಿಂಗಳ ಬಳಿಕ ಜನರ ಪ್ರತಿಕ್ರಿಯೆ ನೋಡಿಕೊಂಡು ರೈಲು ಸಂಚಾರ ಮುಂದುವರೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.
ರೈಲಿನ ವೇಳಾಪಟ್ಟಿ; ಅಕ್ಟೋಬರ್ 2, 9, 16, 23 ಮತ್ತು 30 ಸೇರಿ ಒಟ್ಟು 5 ಭಾನುವಾರ ರೈಲು ರಾತ್ರಿ 11.15ಕ್ಕೆ ಪೂರ್ಣ ಜಂಕ್ಷನ್‌ನಿಂದ ಹೊರಟು ಪರಭಾಣಿ, ಪರಳಿ ವೈಜಿನಾಥ, ಉದಗೀರ ಮೂಲಕ ಭಾಲ್ಕಿಗೆ ಮರುದಿನ ಬೆಳಗ್ಗೆ 5.50ಕ್ಕೆ, ಬೀದರ್‌ಗೆ ಬೆಳಗ್ಗೆ 6.30ಕ್ಕೆ ಬರಲಿದೆ.
ಜಹಿರಾಬಾದ್, ವಿಕಾರಾಬಾದ, ಚಿತ್ತಾಪುರ, ಯಾದಗಿರಿ, ರಾಯಚೂರು, ಮಂತ್ರಾಲು ರಸ್ತೆ, ರೇನಿಗುಂಟಾ ಮಾರ್ಗವಾಗಿ ಸೋಮವಾರ ರಾತ್ರಿ 10.10ಕ್ಕೆ ತಿರುಪತಿಗೆ ತಲುಪಲಿದೆ.
ರೈಲು ಅಕ್ಟೋಬರ್ 3, 10, 17, 24 ಮತ್ತು 31ರ ಐದು ಸೋಮವಾರ ರಾತ್ರಿ 11.50ಕ್ಕೆ ತಿರುಪತಿಯಿಂದ ಹೊರಟು ಮಂಗಳವಾರ ಮಧ್ಯಾಹ್ನ 12ಕ್ಕೆ ಬೀದರ್, 12.45ಕ್ಕೆ ಭಾಲ್ಕಿ ಮತ್ತು ಸಂಜೆ 6.30ಕ್ಕೆ ಪೂರ್ಣ ಜಂಕ್ಷನ್ ತಲುಪಲಿದೆ.
ತಾತ್ಕಾಲಿಕ ನಿಲುಗಡೆ ಮುಂದುವರಿಕೆ; ನೈಋತ್ಯ ರೈಲ್ವೆಯು ಬೆಳಗಾವಿ-ಮೈಸೂರು-ಬೆಳಗಾವಿ ಎಕ್ಸ್‌ಪ್ರೆಸ್ (17325/17326) ಹಾಗೂ ಬೆಂಗಳೂರು-ಹುಬ್ಬಳ್ಳಿ-ಬೆಂಗಳೂರು ಎಕ್ಸ್‌ಪ್ರೆಸ್ (17391/17392) ರೈಲುಗಳಿಗೆ ರಾಮಗಿರಿಯಲ್ಲಿ ಕಲ್ಪಿಸಿದ್ದ ತಾತ್ಕಾಲಿಕ ನಿಲುಗಡೆಯನ್ನು ಮಾರ್ಚ್ 31ರ ತನಕ ವಿಸ್ತರಣೆ ಮಾಡಿದೆ.