ಸತ್ತ ಮೇಲೆ ಕೊರೊನಾ ಪರೀಕ್ಷೆ ಏಕೆ?, ಬೇಡ ಎಂದ ಆರೋಗ್ಯ ಇಲಾಖೆ
ಭುವನೇಶ್ವರ, ಸೆಪ್ಟೆಂಬರ್ 23: ಮರಣ ಹೊಂದಿದ ಮೇಲೆ ಕೊರೊನಾ ಪರೀಕ್ಷೆಯ ಅಗತ್ಯವಿಲ್ಲವೆಂದು ಒಡಿಶಾ ಸರ್ಕಾರದ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಆಸ್ಪತ್ರೆಯಲ್ಲಿ ಅನೇಕ ಕಾರಣಗಳಿಂದ ಮೃತಪಟ್ಟ ಪ್ರಕರಣಗಳಲ್ಲಿ ಕೊವಿಡ್-19 ಟೆಸ್ಟ್ನಿಂದಾಗಿ ಶವ ಹಸ್ತಾಂತರ ವಿಳಂಬ ಇತ್ಯಾದಿ ಸಂಕಷ್ಟ ಉಂಟಾಗಿದ್ದು ವರದಿಯಾಗಿದೆ.
ಆಸ್ಪತ್ರೆಯಲ್ಲಿ ತಮ್ಮವರನ್ನು ಕಳೆದುಕೊಂಡ ಸಂಬಂಧಿಕರು ಮೊದಲೇ ನೊಂದಿರುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಶವ ಹಸ್ತಾಂತರ ವಿಳಂಬ ಆಗುವುದು ಮತ್ತಿತರ ಕಾರಣಗಳಿಂದ ಇನ್ನಷ್ಟು ನೋವು ಉಂಟಾಗಬಾರದು ಎಂಬ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಈ ಆದೇಶ ಮಾಡಿರುವುದಾಗಿ ಹೇಳಿಕೊಂಡಿದೆ.

ಸತ್ತ 48 ಗಂಟೆಯೊಳಗಾಗಿ ಡೆತ್ ಸರ್ಟಿಫಿಕೇಟ್
ಜತೆಗೆ ಕೊವಿಡ್ನಿಂದ ಮೃತಪಟ್ಟವರ ಕುಟುಂಬಕ್ಕೆ 48 ಗಂಟೆಯೊಳಗೆ ಡೆತ್ ಸರ್ಟಿಫಿಕೇಟ್ ಕೊಡಬೇಕು ಎಂಬುದಾಗಿಯೂ ತಾಕೀತು ಮಾಡಿದೆ.
ರೋಗಿಗೆ ಮಧುಮೇಹಿತ್ತು ಅಥವಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ, ಅವರ ಸ್ವಾಬ್ ತೆಗೆದು ಕೋವಿಡ್-19 ಪರೀಕ್ಷೆ ಕಳುಹಿಸಲಾಗಿದೆ.
ವರದಿ ಇನ್ನೂ ಬಂದಿಲ್ಲ, ಹಗಾಗಿ ಶವವನ್ನು ಹಸ್ತಾಂತರ ಮಾಡುತ್ತಿಲ್ಲ ಎಂಬ ಎಷ್ಟೋ ದೂರುಗಳು ಕೇಳಿಬಂದಿವೆ.

ಗೊಂದಲದ ಪರಿಸ್ಥಿತಿ
ಕೊರೊನಾ ಹಿನ್ನೆಲೆಯಲ್ಲಿ ಇಂಥ ಹಲವು ಸಂದಿಗ್ಧ ಎದುರಾಗುವುದು ಹೊಸದೇನಲ್ಲ. ಇದೀಗ ಇಂಥ ಸನ್ನಿವೇಶಗಳು ಸೃಷ್ಟಿ ಆಗದಿರಲೆಂದೇ ಸತ್ತ ಮೇಲೆ ಕೊರೊನಾ ಪರೀಕ್ಷೆ ಮಾಡಿಸುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಮೃತದೇಹವನ್ನು ನೋಡಲು ಕುಟುಂಬದವರಿಗೆ ಸಾಧ್ಯವಾಗುತ್ತಿರಲಿಲ್ಲ
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದವರ ಮೃತದೇಹವನ್ನು ನೋಡಲು ಕುಟುಂಬದವರಿಗೆ ಅವಕಾಶ ಮಾಡಿಕೊಡುತ್ತಿರಲಿಲ್ಲ, ಕೆಲವರು ದೂರದಿಂದಲೇ ನೋಡುತ್ತಿದ್ದರು, ಅಂತ್ಯಕ್ರಿಯೆಗೆ ಹೋಗುತ್ತಿರಲಿಲ್ಲ, ಇನ್ನೂ ಕೆಲವು ಪ್ರಕರಣಗಳಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬಗ್ಗೆ ಸುದ್ದಿ ನೀಡದೆಯೇ ಮಣ್ಣಾಗಿಸುತ್ತಿದ್ದರು.
Recommended Video

ಮೃತಪಟ್ಟ ಮೇಲೆ ಕೊರೊನಾ ಪರೀಕ್ಷೆ ಏಕೆ?
ರೋಗಿಯು ಆಸ್ಪತ್ರೆಯಲ್ಲಿ ಮೃತಪಟ್ಟಮೇಲೆ ಮುಗಿಯಿತು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಯೇ ಅವರ ಅಂತ್ಯಕ್ರಿಯೆ ನಡೆಸಲಾಗುತ್ತದೆ, ಹಾಗಿದ್ದಾಗ ಅವರಿಗೆ ಕೊರೊನಾ ಸೋಂಕು ಇತ್ತೇ, ಇಲ್ಲವೇ ಎಂಬುದು ಮುಖ್ಯವಾಗುವುದಿಲ್ಲ ಎಂಬುದು ಆರೋಗ್ಯ ಇಲಾಖೆಯ ಅಭಿಪ್ರಾಯವಾಗಿದೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications