• search
  • Live TV
ಭುವನೇಶ್ವರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಡಿಶಾ ವಿಧಾನಸಭೆ ಚುನಾವಣೆ: ಐದನೇ ಬಾರಿಗೆ ಜನರ ಮುಂದೆ ನವೀನ್ ಪಟ್ನಾಯಕ್

|

ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ದಾಖಲೆಯ ಐದನೇ ಬಾರಿಗೆ ಪಕ್ಷದ ಗೆಲುವಿಗಾಗಿ ಯತ್ನಿಸಿದ್ದಾರೆ. ಬಿಜೆಪಿಗೆ ಮುಖಾಮುಖಿಯಾಗಿ ಬಿಜು ಜನತಾ ದಳ್ (ಬಿಜೆಡಿ) ಇದೆ. ಎರಡೂ ಪಕ್ಷಗಳು ಮಾಜಿ ಮಿತ್ರರು. ಎಪತ್ತೆರಡು ವರ್ಷದ ನವೀನ್ ಪಟ್ನಾಯಕ್- ಅತಿ ದೀರ್ಘ ಕಾಲದಿಂದ ಮುಖ್ಯಮಂತ್ರಿ ಆಗಿರುವವರು ವಿಧಾನಸಭಾ ಚುನಾವಣೆಯಲ್ಲಿ ಗುರುವಾರದ ಫಲಿತಾಂಶ ತಮ್ಮ ಪರ ಇರುತ್ತದೆ ಎಂಬ ವಿಶ್ವಾಸದಲ್ಲಿ ಇದ್ದಾರೆ.

ಲೋಕಸಭೆ- ವಿಧಾನಸಭೆಗೆ ಚುನಾವಣೆ ನಡೆಯುವಾಗಲೇ ನವೀನ್ ಪಟ್ನಾಯಕ್ ತಮ್ಮ ಪದವಿ ಪ್ರಮಾಣಕ್ಕೆ ನರೇಂದ್ರ ಮೋದಿಗೆ ಆಹ್ವಾನ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಪಟ್ನಾಯಕ್ ಸ್ಪರ್ಧಿಸಿದ್ದಾರೆ. ದಕ್ಷಿಣ ಒಡಿಶಾದ ಹಿಂಜಿಲಿ, ಅಲ್ಲಿ ಕಳೆದ ಹತ್ತೊಂಬತ್ತು ವರ್ಷಗಳಿಂದ ಗೆಲ್ಲುತ್ತಲೇ ಬಂದಿದ್ದಾರೆ. ಇನ್ನು ಪಶ್ಚಿಮ ಒಡಿಶಾದ ಬಿಜೆಪುರ್ ನಿಂದಲೂ ಕಣದಲ್ಲಿ ಇದ್ದಾರೆ.

ಈ ಚುನಾವಣೆಯಲ್ಲಿ ನವೀನ್ ಪಟ್ನಾಯಕ್ ಆರೋಗ್ಯದ ವಿಚಾರ ಬಹಳ ಚರ್ಚೆಗೆ ಒಳಗಾಯಿತು. ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಒಡಿಶಾ ಸರಕಾರ ಹತ್ತು ಹೆಜ್ಜೆ ಇಡುವುದಕ್ಕೆ ಹತ್ತು ನಿಮಿಷ ತೆಗೆದುಕೊಳ್ಳುತ್ತಿದೆ ಎಂದಿದ್ದರು.

ಒಡಿಶಾ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ

1998ರಿಂದ 2009ರ ತನಕ ನವೀನ್ ಪಟ್ನಾಯಕ್ ಅವರು ಎನ್ ಡಿಎ ಭಾಗವಾಗಿಯೇ ಇದ್ದರು. ಕಾಂಗ್ರೆಸ್ ಸೇರಿ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಸಮಾನ ಅಂತರ ಕಾಯ್ದುಕೊಂಡಿದ್ದಾರೆ. ಫೋನಿ ಚಂಡಮಾರುತದ ನಂತರ ಒಡಿಶಾದ ಅಭಿವೃದ್ಧಿಗೆ ಯಾವ ಪಕ್ಷ ಪೂರಕವಾಗಿ ಕೆಲಸ ಮಾಡುತ್ತದೋ ಅದಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ದೇಶದ ಇತರ ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ನವೀನ್ ಪಟ್ನಾಯಕ್ ಅವರಿಗೆ ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವ, ಪ್ರಮುಖ ಪಾತ್ರ ವಹಿಸಬೇಕು ಎಂಬ ಆಸಕ್ತಿ ಏನಿಲ್ಲ. ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಮಗ ನವೀನ್ ಪಟ್ನಾಯಕ್ 1997ರಲ್ಲಿ ಜನತಾದಳ ತೊರೆದ ನಂತರ ಬಿಜು ಜನತಾದಳ ಆರಂಭಿಸಿದರು.

ಮತ್ತೆ ಬಿಜೆಪಿ ಜೊತೆ ಕೈ ಜೋಡಿಸಲಿದ್ದಾರೆಯೇ ನವೀನ್ ಪಟ್ನಾಯಕ್?

1997ರಲ್ಲಿ ಅಸ್ಕಾ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ನವೀನ್, 2000ನೇ ಇಸವಿ ತನಕ ಪ್ರತಿನಿಧಿಸಿದರು. ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಸಚಿವರಾಗಿದ್ದರು. ಆ ನಂತರ ಒಡಿಶಾದ ಮುಖ್ಯಮಂತ್ರಿಯಾದರು. ಡೂನ್ ಶಾಲೆಯಲ್ಲಿ ಓದಿರುವ ನವೀನ್ ಪಟ್ನಾಯಕ್, ತಮ್ಮ ಯೌವನದ ದಿನಗಳನ್ನು ಒಡಿಶಾದಿಂದ ಹೊರಗೆ ಕಳೆದವರು. ಒಡಿಶಾ ಭಾಷೆಯಲ್ಲಿ ಸಲೀಸಾಗಿ ಮಾತನಾಡಲಾರರು ಎಂದು ಅವರು ಗೇಲಿಗೆ ಒಳಗಾಗಿದ್ದೂ ಇದೆ.

ಆದರೆ, ಕಳೆದ ಎರಡು ದಶಕದಲ್ಲಿ ನವೀನ್ ತುಂಬ ಬೆಳೆದಿದ್ದಾರೆ. ಬಿಳಿ ಕುರ್ತಾ-ಪೈಜಾಮಾದಲ್ಲಿ ಕಾಣಿಸಿಕೊಳ್ಳುವ ಅವರಿ ಸ್ವಚ್ಛ ಹಾಗೂ ಸಮರ್ಥ ಆಡಳಿತಗಾರ ಎಂಬ ಹೆಸರು ಪಡೆದಿದ್ದಾರೆ. 147 ಸದಸ್ಯ ಬಲದ ಒಡಿಶಾ ವಿಧಾನಸಭೆಯಲ್ಲಿ ಬಹುಮತ ಗಳಿಸಲು 74 ಸ್ಥಾನಗಳಲ್ಲಿ ಜಯ ಪಡೆಯಬೇಕು.

English summary
Odisha chief minister Naveen Patnaik in confidence of wining for record 5th time. Odisha assembly elections result announcing on May 23rd, along with lok sabha election results.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X