ಮಹಾಘಟಬಂಧನಕ್ಕೆ ಬಿಜೆಡಿ ಬೆಂಬಲವಿಲ್ಲ: ನವೀನ್ ಪಟ್ನಾಯಕ್
ಭುವನೇಶ್ವರ, ಜನವರಿ 09: ಮಹಾಘಟಬಂಧನಕ್ಕೆ ಬಿಜೆಡಿ ಬೆಂಬಲವಿಲ್ಲ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸ್ಪಷ್ಟಪಡಿಸಿದ್ದಾರೆ.
"ನಮ್ಮ ಪಕ್ಷದ ಸಿದ್ಧಾಂತದಂತೆ ನಾವು ಬಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಂದ ಸಮಾನ ಅಂತರ ಕಾಯ್ದುಕೊಳ್ಳಲು ಬಯಸುತ್ತೇವೆ" ಎಂದು ಅವರು ಸ್ಪಷ್ಟಪಡಿಸಿದ್ದು, ಯಾವುದೇ ಕಾರಣಕ್ಕೂ ವಿಪಕ್ಷಗಳ ಮಹಾಘಟಬಂಧನ ಒಕ್ಕೂಟದ ಭಾಗವಾಗುವುದಿಲ್ಲ ಎಂದಿದ್ದಾರೆ.
ಒಡಿಶಾದಲ್ಲಿ ಒಟ್ಟು 21(543) ಲೋಕಸಭಾ ಕ್ಷೇತ್ರಗಳಿದ್ದು, ಅವುಗಳಲ್ಲಿ 20 ಕ್ಷೇತ್ರಗಳನ್ನು 2014 ರಲ್ಲಿ ಬಿಜು ಜನತಾದಳವೇ ಗೆದ್ದು ದಾಖಲೆ ಬರೆದಿತ್ತು. ಅಕಸ್ಮಾತ್ ಈ ಪಕ್ಷ ಯಾವುದೇ ಒಂದು ಮೈತ್ರಿಕೂಟದ ಭಾಗವಾದರೂ ಅವರಿಗೆ ಲಾಭ ಖಂಡಿತ.

ಆದರೆ ಬಿಜು ಜನತಾದಳ ಯಾವೊಂದು ಮೈತ್ರಿಕೂಟದೊಂದಿಗೂ ಗುರುತಿಸಿಕೊಳ್ಳದೆ, ಸಮಾನ ಅಂತರ ಕಾಯ್ದುಕೊಳ್ಳಲಿದೆ ಎಂದು ಅವರು ಖಚಿತವಾಗಿ ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರಗಿಟ್ಟು ಸಂಯುಕ್ತ ಕೂಟ ರಚಿಸಬೇಕು ಎಂಬ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಸಲಹೆಗೇನಾದರೂ ಪಟ್ನಾಯಕ್ ಮಣೆಹಾಕುತ್ತಾರಾ ಎಂಬುದನ್ನು ಕಾದುನೋಡಬೇಕು!












Click it and Unblock the Notifications