ವಿಶ್ವದ ದುಬಾರಿ ಮಾವು: ಕಾವಲು ಎಷ್ಟು ಜನ ಗೊತ್ತಾ?
ಭೋಪಾಲ್ ಜುಲೈ 4: ಹಣ್ಣುಗಳ ರಾಜ ಎಂದು ಖ್ಯಾತಿ ಪಡೆದಿರುವ ಮಾವಿನ ಹಣ್ಣಿನ ಸೀಸನ್ ಬಹುತೇಕ ಮುಗಿಯಲು ಪ್ರಾರಂಭವಾಗಿದೆ. ಹೆಸರಿಗೆ ತಕ್ಕಂತೆ ಹಣ್ಣಿನ ರಾಜನಿಗೆ ಈ ಪ್ರದೇಶದಲ್ಲಿ 3 ಗಾರ್ಡ್‌ಗಳು ಹಾಗೂ 6 ನಾಯಿಗಳು ಕಾವಲು ಇವೆ. ಮಾವಿನ ಹಣ್ಣಿಗೆ ಕಾವಲು ಕಾಯಲು ಬಹುತೇಕ ಗಾರ್ಡ್‌ಗಳನ್ನು ನೇಮಕ ಮಾಡುವುದು ಸಾಮಾನ್ಯ. ಆದರೆ ನಾಯಿ ಯಾಕೆ? ಅನ್ನೋ ಪ್ರಶ್ನೆ ಎದುರಾಗಬಹುದು. ಇದಕ್ಕೆ ಉತ್ತರ ಇಲ್ಲಿದೆ ನೋಡಿ. ಮಾವಿನ ಹಣ್ಣಿನಲ್ಲಿ ಹಲವಾರು ಬಗೆ ಹಣ್ಣುಗಳಿವೆ. ಇದರಲ್ಲಿ ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಅಂದರೆ ಮಿಯಾಝಾಕಿ ಕೂಡ ಒಂದು. ಈ ಹಣ್ಣು ಭಾರತದ ಮಧ್ಯಪ್ರದೇಶದಲ್ಲಿ ಲಭ್ಯವಿದೆ. ಹೀಗಾಗಿ ಇದಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿದೆ.
ಮಧ್ಯಪ್ರದೇಶದ ರೈತನೊಬ್ಬ ಕೆಜಿಗೆ 2.7 ಲಕ್ಷ ರೂ. ಮೌಲ್ಯದ ಮಿಯಾಝಾಕಿ ಮಾವಿನ ಹಣ್ಣನ್ನು ರಕ್ಷಿಸಲು 3 ಗಾರ್ಡ್, 6 ನಾಯಿಗಳನ್ನು ನೇಮಿಸಿರುವುದು ಬೆಳಕಿಗೆ ಬಂದಿದೆ. ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ಇತ್ತೀಚೆಗೆ ಮಧ್ಯಪ್ರದೇಶದ ರೈತರೊಬ್ಬರು ಬೆಳೆಯುತ್ತಿರುವ ನೇರಳೆ ಬಣ್ಣದ ಜಪಾನೀ ತಳಿಯ ಮಾವಿನಹಣ್ಣಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಕೆಜಿಗೆ 2.7 ಲಕ್ಷ ರೂ.ಗೆ ಮಾರಾಟ
ಗೋಯೆಂಕಾ ಪ್ರಕಾರ, ಈ ಮಿಯಾಝಾಕಿ ತಳಿಯ ಮಾವಿನ ಹಣ್ಣುಗಳು ಕೆಜಿಗೆ 2.7 ಲಕ್ಷ ರೂ.ಗೆ ಮಾರಾಟವಾಗುತ್ತವೆ. ಜಬಲ್ಪುರದ ಜಮೀನಿನಲ್ಲಿ ಬೆಳೆಯುತ್ತವೆ. ಈ ಎರಡು ಮರಗಳು ಮೂವರು ಭದ್ರತಾ ಸಿಬ್ಬಂದಿ ಮತ್ತು ಆರು ನಾಯಿಗಳ ರಕ್ಷಣೆಯಲ್ಲಿವೆ. ವರದಿಯ ಪ್ರಕಾರ, ಮಾವು ಹಣ್ಣಿನ ಮರಗಳನ್ನು ಬೆಳೆಸಿದ ಸಂಕಲ್ಪ್ ಪರಿಹಾರ್ ಮತ್ತು ಪತ್ನಿ ರಾಣಿ ದಂಪತಿ ಮೂರು ವರ್ಷಗಳ ಹಿಂದೆ ಸಸಿಗಳನ್ನು ನೆಟ್ಟರು. ಈ ಮರಗಳು ನೇರಳೆ-ಬಣ್ಣದ ಜಪಾನೀಸ್ ಮಾವಿನ ಹಣ್ಣುಗಳದ್ದು ಎಂದು ಅವರಿಗೆ ತಿಳಿದಿರಲಿಲ್ಲ. ಇವರು ಒಡಿಶಾದ ಚಂದ್ರು ಸತ್ಯ ನಾರಾಯಣ ಅವರಿಂದ ಮೂರು ವರ್ಷಗಳ ಹಿಂದೆ ಬಾಂಗ್ಲಾದೇಶದಿಂದ ಬೀಜವನ್ನು ಸಂಗ್ರಹಿಸಿದರು. ಬಳಿಕ ಅದು ಬೆಳೆದ ಬಳಿಕವಷ್ಟೇ ಅದು ವಿದೇಶಿ ಹಣ್ಣು ಎಂಬುದು ಅವರಿಗೆ ಅರಿವಿಗೆ ಬಂದಿದೆ.

ಭದ್ರತೆ ಹೆಚ್ಚಿಸಿದ ಮಾಲೀಕರು
ಅಪರೂಪದ ಹಣ್ಣಿನ ಬಗ್ಗೆ ಸುದ್ದಿ ಹರಡಿದ ನಂತರ ಸ್ಥಳೀಯ ಕಳ್ಳರು ತಮ್ಮ ತೋಟಕ್ಕೆ ನುಗ್ಗಿ ಸಸಿಗಳನ್ನು ಕದಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಹೀಗಾಗಿ ದಂಪತಿಗಳು ಭದ್ರತೆಯನ್ನು ಹೆಚ್ಚಿಸಲು ನಿರ್ಧರಿಸಿದ್ದಾರೆ. ಮಿಯಾಝಾಕಿ ಮಾವನ್ನು ಯಶಸ್ವಿಯಾಗಿ ಬೆಳೆಯಲು ಸಾಧ್ಯವಾಗದ ರೈತರಲ್ಲಿ ಮಧ್ಯಪ್ರದೇಶದ ರೈತ ಇದನ್ನು ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಾವುಗಳನ್ನು ಮಾರುಕಟ್ಟೆಗೆ ತರುವಂತೆ ಮನವಿ
ಈ ತಳಿಯನ್ನು ಭಾರತದಲ್ಲಿ ಪರಿಚಯಿಸಿದ್ದಕ್ಕಾಗಿ 50 ವರ್ಷದ ಚಂದ್ರು ಸತ್ಯ ನಾರಾಯಣ ಸಾಧನೆಯ ಪ್ರಶಸ್ತಿಯನ್ನು ಪಡೆದಿದ್ದಾರೆ. "ನಾನು ಅದನ್ನು ಬಾಂಗ್ಲಾದೇಶದಿಂದ ತಂದಿದ್ದೇನೆ. ಇದರಿಂದ ಅವರು ಮರವನ್ನು ಬೆಳೆಸಲು ಸಾಧ್ಯವಾಯಿತು ಎಂದು ನನಗೆ ತುಂಬಾ ಸಂತೋಷವಾಗಿದೆ. ಮಾವುಗಳನ್ನು ಮಾರುಕಟ್ಟೆಗೆ ತರುವಂತೆ ನಾನು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ'' ಎಂದು ನಾರಾಯಣ್ ಹೇಳಿದರು.

ಭಾರತದಲ್ಲಿ ಬೆಳೆಯುವಲ್ಲಿ ಯಶಸ್ವಿ
ಜಪಾನ್ ತಳಿಯ ಈ ಹಣ್ಣು ಆರೋಗ್ಯಕ್ಕೆ ಹೆಚ್ಚು ಉತ್ತಮ ಎಂದು ಹೇಳಲಾಗುತ್ತದೆ. ಹೀಗಾಗಿ ಈ ತಳಿಗೆ ಅಲ್ಲಿ ಭಾರೀ ಬೇಡಿಕೆ ಇದೆ. ಈ ಕುರಿತು ಪ್ರತಿಕ್ರಿಯಿಸಿದ ಸಹಾಯಕ ಕೃಷಿ ನಿರ್ದೇಶಕ ಬಾಸುದೇಬ್ ಪ್ರಧಾನ್, "ಇದು ಬರ ಪೀಡಿತ ಪ್ರದೇಶವಾಗಿದೆ. ಆದರೆ ಚಂದ್ರು ಇನ್ನೂ ಹಣ್ಣನ್ನು ಕಟಾವು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವದ ಅತ್ಯಂತ ದುಬಾರಿ ಮಾವು ನಮ್ಮ ರಾಜ್ಯದಲ್ಲಿ ಸಿಗುವುದು ಹೆಮ್ಮೆಯ ವಿಷಯ ಎಂದು ಹೇಳಿದ್ದಾರೆ. ಈ ತಳಿಗಳ ಉಳಿವಿಗೆ ಹಾಗೂ ಬೆಳವಣಿಗೆಗೆ ನಾವು ಪ್ರೋತ್ಸಾಹ ನೀಡುತ್ತೇವೆ," ಎಂದು ಹೇಳಿದ್ದಾರೆ.












Click it and Unblock the Notifications