ರಾಹುಲ್ ಪ್ರಧಾನಿಯಾಗದ್ದರಿಂದ ತಲೆ ಬೋಳಿಸಿಕೊಂಡ ಅಭಿಮಾನಿ
ಭೋಪಾಲ್, ಮೇ 25 : ನರೇಂದ್ರ ಮೋದಿ ಪ್ರಧಾನಿಯಾದರೆ ನಾನು ತಲೆ ಬೋಳಿಸಿಕೊಳ್ಳುತ್ತೇನೆ, ರಾಹುಲ್ ಗಾಂಧಿ ಪ್ರಧಾನಿಯಾದರೆ ನೀನು ತಲೆ ಬೋಳಿಸಿಕೊಳ್ಳಬೇಕು ಎಂದು ಪಂಥ ಕಟ್ಟಿದ್ದ ಕಾಂಗ್ರೆಸ್ ಕಾರ್ಯಕರ್ತ ಮೋದಿ ಪ್ರಧಾನಿಯಾಗಿದ್ದಕ್ಕೆ, ಮಾತು ಕೊಟ್ಟಂತೆ ತಲೆ ಬೋಳಿಸಿಕೊಂಡಿದ್ದಾರೆ.
ಬಿಎಲ್ ಸೇನ್ ಎಂಬ ವ್ಯಕ್ತಿ ಬಿಜೆಪಿಯ ಕಾರ್ಯಕರ್ತನೊಂದಿಗೆ ಪಂಥ ಕಟ್ಟಿದ್ದರು. ಆದರೆ, ಬಿಜೆಪಿ ಅಭೂತಪೂರ್ವ ಜಯದೊಂದಿಗೆ ಮತ್ತೆ ನರೇಂದ್ರ ಮೋದಿಯವರು ಪ್ರಧಾನಿ ಆಗುತ್ತಿರುವುದರಿಂದ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಮತ್ತು ತಮ್ಮ ತಲೆಯನ್ನೂ ನುಣ್ಣಗೆ ಬೋಳಿಸಿಕೊಂಡಿದ್ದಾರೆ.
MP: A Congress worker, BL Sen shaved his head after losing a bet to a BJP worker in Rajgarh. He says, "We had a bet that if Modi becomes PM, I'll shave my head & if Rahul Gandhi becomes PM, he (BJP worker) will shave his head. Now that my party has lost, I shaved my head." pic.twitter.com/CNGSr9wiLp
— ANI (@ANI) 25 May 2019
ಈ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಸೇನ್ ಅವರು, ಅನಿರೀಕ್ಷಿತವಾಗಿ ನನ್ನ ಪಕ್ಷ (ಕಾಂಗ್ರೆಸ್) ಸೋತಿದ್ದರಿಂದ ಮಾತು ಉಳಿಸಿಕೊಂಡಿದ್ದೇನೆ ಎಂದು ನಗುನಗುತ್ತಲೇ ತಮ್ಮ ತಲೆಯನ್ನು ಬೋಳಿಸಲು ನಾಪಿತನಿಗೆ ಒಪ್ಪಿಸಿದ್ದಾರೆ. ಅವರು ರಾಜಘರ್ ನ ಬಿಜೆಪಿ ಕಾರ್ಯಕರ್ತನೊಂದಿಗೆ ಪಂಥ ಕಟ್ಟಿದ್ದರು.

ಹೀಗೆಯೇ ಕರ್ನಾಟಕದ ಪುತ್ತೂರಿನ ನಾಪಿತನೊಬ್ಬ ನರೇಂದ್ರ ಮೋದಿ ಮೇಲಿನ ಅಭಿಮಾನವನ್ನು ಮೆರೆದಿದ್ದು, ಒಂದಿಡೀ ದಿನವನ್ನು ನರೇಂದ್ರ ಮೋದಿಯವರ ಹರ್ಷಾಚರಣೆಯಾಗಿ ಮೀಸಲಿಟ್ಟಿದ್ದು, ಕಟ್ಟಿಂಗ್ ಮತ್ತು ಶೇವಿಂಗ್ ಅನ್ನು ಉಚಿತವಾಗಿ ಮಾಡಿದ್ದಾರೆ.
ಈ ಹರ್ಷಾಚರಣೆಯ ಹಿಂದೆ ಒಂದು ಮನಮಿಡಿಯುವ ಕಥೆಯೂ ಇದೆ. ಅದೇನೆಂದರೆ, ಹೃದ್ರೋಗಿಯಾಗಿರುವ ಬಾಲಸುಂದರ್ ಅವರ ಬಳಿ ಚಿಕಿತ್ಸೆಗಾಗಿ ಹಣವಿರಲಿಲ್ಲ. ಆದರೆ, ಮೋದಿಯವರು ಆಯುಷ್ಮಾನ್ ಭಾರತ ಯೋಜನೆಯನ್ನು ಜಾರಿಗೆ ತಂದ ನಂತರ ಅದು ತಮ್ಮ ಬಾಳಿನಲ್ಲಿ ವರದಾನವಾಗಿ ಬಂದಿದೆ. ಆದ್ದರಿಂದ ಈ ರೀತಿ ಸಂತಸವನ್ನು ಆಚರಿಸಿದ್ದೇನೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕೂಡ ದೊಡ್ಡ ಕಂಪನಿಯೊಂದರಲ್ಲಿ ಪತ್ರಕರ್ತನಾಗಿ ದುಡಿಯುತ್ತಿದ್ದ ವ್ಯಕ್ತಿಯೊಬ್ಬರು, ನರೇಂದ್ರ ಮೋದಿಯವರು ಪ್ರಧಾನಿಯಾಗುವವರೆಗೆ ಗಡ್ಡ ತೆಗೆಯುವುದಿಲ್ಲ ಎಂದು ಉತ್ತರಹಳ್ಳಿಯ ಗಣೇಶನ ಮುಂದೆ ಒಂದು ವಾರದ ಹಿಂದೆಯೇ ಪ್ರತಿಜ್ಞೆ ಮಾಡಿದ್ದರು. ಅವರ ಇಚ್ಛೆ ಪೂರ್ತಿಯಾಗಿದ್ದು, ಇದೀಗ ಗಡ್ಡ ಬೋಳಿಸಿಕೊಂಡು ನಿರಾಳರಾಗಿದ್ದಾರೆ.
ಹೀಗೆ, ತಮ್ಮ ನಾಯಕರ ಯಶಸ್ಸಿಗಾಗಿ ಜನರು ಏನೇನೋ ಇಚ್ಛೆಗಳನ್ನು, ಹರಕೆಗಳನ್ನು ಇಟ್ಟುಕೊಂಡಿರುತ್ತಾರೆ, ಪಂಥಗಳನ್ನೂ ಕಟ್ಟಿರುತ್ತಾರೆ. ಅದರಂತೆ, ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ನಡೆದಾಗ ಮತ ಚಲಾಯಿಸಿ ಬಂದವರಿಗೆಲ್ಲ ಉಚಿತವಾಗಿ ಕ್ಷೌರ ಮಾಡುವುದಾಗಿ ಶ್ರೀನಿವಾಸ್ ಎಂಬುವವರು ಮಾತು ಕೊಟ್ಟಿದ್ದರು ಮತ್ತು ನಂತರ ಆ ಮಾತನ್ನೂ ಉಳಿಸಿಕೊಂಡಿದ್ದರು.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications