ಪತ್ನಿಯೊಂದಿಗೆ ಜಗಳ: ಅನುಪ್ಪುರದ 300 ಅಡಿ ಎತ್ತರದ ವಿದ್ಯುತ್ ಟವರ್ ಹತ್ತಿದ ಪತಿ

ಅನುಪ್ಪುರ್(ಮಧ್ಯಪ್ರದೇಶ) ಸೆಪ್ಟೆಂಬರ್ 2: ಅನುಪ್ಪುರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಗುರುವಾರ ಬೆಳಗ್ಗೆ ಪತಿ-ಪತ್ನಿಯರ ನಡುವಿನ ಜಗಳದಿಂದಾಗಿ ಮೂರು ರಾಜ್ಯಗಳಲ್ಲಿ ಸಂಚಲನ ಉಂಟಾಗಿತ್ತು. ದಿನವಿಡೀ ತೊಂದರೆ ಅನುಭವಿಸಿದ ಅಧಿಕಾರಿಗಳು ಹಾಗೂ ನೌಕರರು ಸುಮಾರು ಐದು ಗಂಟೆಗಳ ಪರಿಶ್ರಮದ ಬಳಿಕ ಗಲಾಟೆಯನ್ನು ಶಮನಗೊಳಿಸುವಲ್ಲಿ ಯಶಸ್ವಿಯಾದರು. ವಾಸ್ತವವಾಗಿ, ಅನುಪ್ಪುರ್ ಜಿಲ್ಲೆಯ ಬಾಕೇಲಿ ಗ್ರಾಮದ ನಿವಾಸಿಯಾದ ಯುವಕನೊಬ್ಬ ತನ್ನ ಪತ್ನಿಯೊಂದಿಗೆ ಜಗಳವಾಡಿದ ನಂತರ 300 ಅಡಿ ಎತ್ತರದ ವಿದ್ಯುತ್ ಟವರ್ ಅನ್ನು ಹತ್ತಿ ಸುಮಾರು ಐದು ಗಂಟೆಗಳ ಕಾಲ ಗದ್ದಲವನ್ನು ಸೃಷ್ಟಿಸಿದನು.

ಬಾಕೇಲಿ ಗ್ರಾಮದ ನಿವಾಸಿ ರೋಹಿತ್ ಸಿಂಗ್ ಎಂಬಾತ ತನ್ನ ಪತ್ನಿಯೊಂದಿಗೆ ಜಗಳವಾಡಿದ ನಂತರ ಗುರುವಾರ ಬೆಳಗ್ಗೆ ಗ್ರಾಮದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಯ ಟವರ್ ಅನ್ನು ಏರಿದ್ದಾನೆ. ಸುಮಾರು 300 ಅಡಿ ಎತ್ತರದಲ್ಲಿ ಟವರ್‌ನ ತಂತಿಗಳ ನಡುವೆ ಅಳವಡಿಸಿದ್ದ ಸೆರಾಮಿಕ್ ಉಪಕರಣಗಳನ್ನು ಹಿಡಿದುಕೊಂಡು ಕುಳಿತಿದ್ದ ರೋಹಿತ್‌ನನ್ನು ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಕಂಡ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೋಹಿತ್ ಸಿಂಗ್ ಅವರನ್ನು ಕೆಳಗಿಳಿಸಲು ಹರಸಾಹಸಪಟ್ಟಿದ್ದಾರೆ. ಸುಮಾರು ಐದು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು, ವಿಶೇಷ ತಂಡ ಹೇಗೋ ವ್ಯಕ್ತಿಯನ್ನು ಟವರ್‌ನಿಂದ ಕೆಳಗಿಳಿಸಿದೆ.

400 ಕೆವಿ ವಿದ್ಯುತ್ ತಂತಿಯ ಟವರ್ ಏರಿದ

400 ಕೆವಿ ವಿದ್ಯುತ್ ತಂತಿಯ ಟವರ್ ಏರಿದ

ವ್ಯಕ್ತಿಯ ಈ ಹೈವೋಲ್ಟೇಜ್ ನಾಟಕಕ್ಕೆ ಸಂಬಂಧಿಸಿದಂತೆ ಮೂರು ರಾಜ್ಯಗಳಲ್ಲಿ ಸಂಚಲನ ಉಂಟಾಗಿತ್ತು. ವ್ಯಕ್ತಿಯನ್ನು ಟವರ್‌ನಿಂದ ಕೆಳಗಿಳಿಸಲು ಎಲ್ಲಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹರಸಾಹಸವೇ ಪಡಬೇಕಾಯಿತು. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲು ಮುಂಬೈನಿಂದ ಅನುಮತಿ ಪಡೆಯಬೇಕಿತ್ತು. ಟವರ್ ಏರಿದ ವ್ಯಕ್ತಿಯನ್ನು ಕೆಳಗಿಳಿಸಲು ಅಮರಕಂಟಕ್ ಥರ್ಮಲ್ ಪವರ್ ಹೌಸ್ ಚಾಚೈ ರಕ್ಷಣಾ ಕಾರ್ಯಕರ್ತರನ್ನು ಸ್ಥಳಕ್ಕೆ ಕರೆಸಲಾಯಿತು. ರಕ್ಷಣಾ ಸಿಬ್ಬಂದಿ ಟವರ್ ಹತ್ತಿ ವ್ಯಕ್ತಿಯನ್ನು ಕೆಳಗೆ ಕರೆತಂದರು. ವ್ಯಕ್ತಿಯ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಅವರನ್ನು ಅನುಪ್ಪೂರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎನ್‌ಡಿಆರ್‌ಎಫ್ ತಂಡದಿಂದ ಕಾರ್ಯಚರಣೆ

ಎನ್‌ಡಿಆರ್‌ಎಫ್ ತಂಡದಿಂದ ಕಾರ್ಯಚರಣೆ

ಪಸ್ಲಾ ಗ್ರಾಮದ ಸಮಯಲಾಲ್ ಸಿಂಗ್ ರವರ ಮಗ ರೋಹಿತ್ ಸಿಂಗ್ (38), ಬಕೇಲಿ ಗ್ರಾಮ ಪಂಚಾಯತ್ ನ ಛಪ್ರತೋಲಾ ಎಂಬಲ್ಲಿನ ಅತ್ತೆಯ ಮನೆಯಲ್ಲಿ ಕೆಲವು ವರ್ಷಗಳಿಂದ ವಾಸವಾಗಿದ್ದಾರೆ. ಬೆಳಗ್ಗೆ ಮನೆಯಲ್ಲಿ ಜಗಳವಾದಾಗ 12 ಗಂಟೆ ಸುಮಾರಿಗೆ ಗ್ರಾಮದ ಬಳಿ ಇರುವ 4 ಲಕ್ಷ ಕೆವಿ ವಿದ್ಯುತ್ ಹೈಟೆನ್ಷನ್ ಲೈನ್ ಟವರ್ ಹತ್ತಿದ್ದಾರೆ. ಈ ವೇಳೆ ವ್ಯಕ್ತಿ ಕುಡಿದ ಅಮಲಿನಲ್ಲಿದ್ದನು ಎಂದು ತಿಳಿದು ಬಂದಿದೆ. ಮಾಹಿತಿ ತಿಳಿದ ತಕ್ಷಣ ಆಡಳಿತಾಧಿಕಾರಿ, ಕೊತ್ವಾಲಿ ಪೊಲೀಸ್ ಸಿಬ್ಬಂದಿ ಮತ್ತು ಎನ್‌ಡಿಆರ್‌ಎಫ್ ತಂಡ ಆಗಮಿಸಿತು.

ನಾಲ್ಕು ಗಂಟೆ ವಿದ್ಯುತ್ ಸ್ಥಗಿತ

ನಾಲ್ಕು ಗಂಟೆ ವಿದ್ಯುತ್ ಸ್ಥಗಿತ

ಯುವಕ ಟವರ್ ಮತ್ತು ಕಂಡಕ್ಟರ್ ನಡುವೆ 1 ಇನ್ಸುಲೇಟರ್ ಮೇಲೆ ಕುಳಿತಿದ್ದಾನೆ. ಮುಂದೆ ಹೋದರೆ ಕರೆಂಟ್ ಶಾಕ್ ಆಗಬಹುದಿತ್ತು. ಆತನಿಗೆ ಕೆಳಗಿಳಿಯುವಂತೆ ಹೇಳುತ್ತಿದ್ದರೂ ಆತನಿಂದ ಇಳಿಯಲು ಸಾಧ್ಯವಾಗಲಿಲ್ಲ. ಛತ್ತೀಸ್‌ಗಢದ ಕೊರ್ಬಾ ವಿದ್ಯುತ್ ಸ್ಥಾವರದ ಉಪ-ಕೇಂದ್ರದಿಂದ ಉಮಾರಿಯಾ ಜಿಲ್ಲೆಯ ಬಿರ್ಸಿಂಗ್‌ಪುರ ಪಾಲಿ ಉಪ-ಕೇಂದ್ರಕ್ಕೆ ವಿದ್ಯುತ್ ಬರುತ್ತದೆ. ವಿದ್ಯುತ್ ಪೂರೈಕೆ ನಿಲ್ಲಿಸಲು ಮುಂಬೈನಿಂದ ಅನುಮತಿ ಪಡೆಯಲಾಗಿದೆ. ಮಧ್ಯಾಹ್ನ ಸುಮಾರು 2:30 ರಿಂದ 6:05 ರವರೆಗೆ ಹೈಟೆನ್ಷನ್ ಟವರ್ ಲೈನ್‌ನಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು.

ವ್ಯಕ್ತಿಯ ಮನವೊಲಿಸುವಲ್ಲಿ ಯಶಸ್ವಿ

ವ್ಯಕ್ತಿಯ ಮನವೊಲಿಸುವಲ್ಲಿ ಯಶಸ್ವಿ

5 ಜನರ ರಕ್ಷಣಾ ತಂಡದ ಸದಸ್ಯರು ಮಧ್ಯಾಹ್ನ 3:40 ರ ಸುಮಾರಿಗೆ ಟವರ್ ಅನ್ನು ಹತ್ತಲು ಪ್ರಾರಂಭಿಸಿದರು. ತಂಡದ ಸದಸ್ಯರು ಅವರ ಬಳಿ ತಲುಪಿ ಮನವೊಲಿಸಿದ ನಂತರ ಸುರಕ್ಷತವಾಗಿ ವ್ಯಕ್ತಿ ಕೆಳಗಿಳಿಸಲಾಗಿದೆ. ಅಮರಕಂಟಕ್ ಥರ್ಮಲ್ ಪವರ್ ಸ್ಟೇಷನ್ ಚಾಚೈ ವಿಶೇಷ ರಕ್ಷಣಾ ತಂಡ ಎರಡು ಗಂಟೆಗಳ ಪರಿಶ್ರಮದ ನಂತರ ಯುವಕನನ್ನು ಹಗ್ಗದ ಸಹಾಯದಿಂದ ಕೆಳಕ್ಕೆ ಇಳಿಸಲಾಯಿತು. ಆರೋಗ್ಯದ ದೃಷ್ಟಿಯಿಂದ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+