ಮಧ್ಯಪ್ರದೇಶ: ಪತ್ನಿಗೆ ಕಚ್ಚಿದ ಹಾವಿನೊಂದಿಗೆ ವೈದ್ಯರ ಬಳಿಗೆ ಬಂದ ಪತಿ- ಸಿಬ್ಬಂದಿ ಶಾಕ್
ಸಾಗರ್, ಸೆಪ್ಟೆಂಬರ್ 8: ಮದ್ಯಪ್ರದೇಶ ದಾಮೋಹ್ ಜಿಲ್ಲಾ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರು ರೋಗಿ ಜೊತೆಗೆ ಹಾವಿನೊಂದಿಗೆ ಆಗಮಿಸಿದ ಘಟನೆ ಆಶ್ಚರ್ಯದೊಂದಿಗೆ ಆತಂಕವನ್ನೂ ಉಂಟು ಮಾಡಿದೆ. ಮಹಿಳೆಯೊಬ್ಬರಿಗೆ ಹಾವು ಕಚ್ಚಿತ್ತು. ಆಸ್ಪತ್ರೆ ತಲುಪಿದಾಗ ವೈದ್ಯರು ಏನಾಯಿತು ಎಂದು ಕೇಳಿದಾಗ ಪತಿ ತನ್ನ ಕೈಯಲ್ಲಿದ್ದ ಪಾಲಿಥಿನ್ ಕವರ್‌ನಿಂದ ಹಾವನ್ನು ಹೊರತೆಗೆದು ಇದು ಕಚ್ಚಿದೆ ಎಂದು ವೈದ್ಯರಿಗೆ ತೋರಿಸಿದ್ದಾನೆ. ಹಾವನ್ನು ಕಂಡು ವೈದ್ಯರು, ನರ್ಸ್‌ಗಳು ಹಾಗೂ ಇತರೆ ಸಿಬ್ಬಂದಿ ಕೆಲಕಾಲ ಭಯಗೊಂಡಿದ್ದಾರೆ. ನಂತರ ಹಾವು ಸತ್ತಿರುವುದು ತಿಳಿದು ನಿರಾಳರಾಗಿದ್ದಾರೆ.
ದಮೋಹ್ ಜಿಲ್ಲೆಯ ಬಟಿಯಾಗಢ ಬ್ಲಾಕ್‌ನ ನಿಬೋರಾ ಪಿಪಾರಿಯಾ ಗ್ರಾಮದ ನಿವಾಸಿ ಲಾಲ್ತಾ ಬಾಯಿ ಲೋಧಿ ಅವರ ಪತ್ನಿಗೆ ರಾತ್ರಿ ಮಲಗಿದ್ದಾಗ ಹಾವು ಕಚ್ಚಿದೆ. ನೋವಿನಿಂದ ಲಲಿತಾ ಕೂಗಿಕೊಂಡಾಗ ಮನೆಯವರು ಎದ್ದು ನೋಡಿದಾಗ ಮನೆಯಲ್ಲಿ ಸುಮಾರು ಮೂರ್ನಾಲ್ಕು ಅಡಿ ಉದ್ದದ ಹಾವು ಕಾಣಿಸಿಕೊಂಡಿದೆ. ಮನೆಯವರು ಲಲಿತಾ ಅವರ ಆರೈಕೆ ಮಾಡಿ ಹಾವನ್ನು ದೊಣ್ಣೆಯಿಂದ ಹಿಮ್ಮೆಟ್ಟಿಸಿ ಸಾಯಿಸಿದ್ದಾರೆ. ಲಲಿತಾ ಅವರನ್ನು ಆಸ್ಪತ್ರೆಗೆ ಕರೆದೊಯ್ದ ಕೂಡಲೇ ಸತ್ತ ಹಾವನ್ನು ಎತ್ತಿಕೊಂಡು ಆಕೆಯ ಪತಿ ಬಾಕ್ಸ್ ನಲ್ಲಿಟ್ಟು ಪಾಲಿಥಿನ್ ನಲ್ಲಿ ಸುತ್ತಿ ಆಸ್ಪತ್ರೆ ತೆಗೆದುಕೊಂಡು ಹೋಗಿದ್ದಾನೆ.

ರಾತ್ರಿ ಮಲಗಿದ್ದಾಗ ಕಚ್ಚಿದ ಹಾವು
ಹಾವು ವಿಷಕಾರಿಯೇ ಅಲ್ಲವೇ, ಯಾವ ಜಾತಿ ಎಂದು ವೈದ್ಯರು ಕೇಳಿದರೆ ಹೇಗೆ ಹೇಳುವುದು ಎಂದು ಮಹಿಳೆಯ ನೆರೆಮನೆಯ ಮಹೇಂದ್ರ ಸಿಂಗ್ ತಿಳಿಸಿದ್ದರಿಂದ ಹಾವನ್ನು ಕೊಂದ ಬಳಿಕ ಮನೆಯವರೆಲ್ಲ ಸೇರಿ ಆಸ್ಪತ್ರೆಗೆ ಹಾವನ್ನೂ ತೆಗೆದುಕೊಂಡು ಹೋಗಿದ್ದಾರೆ. ವೈದ್ಯರು ಆತುರದಿಂದ ಏನಾಯಿತು ಎಂದು ಕೇಳಿದಾಗ ತಕ್ಷಣ ಲಲಿತಾ ಅವರ ಪತಿ ಹಾವನ್ನು ಹೊರತೆಗೆದು ತೋರಿಸಿದ್ದಾರೆ. ಈ ವೇಳೆ ವೈದ್ಯರು ಗಾಬರಿಗೊಂಡಿದ್ದಾರೆ. ಲಲಿತಾ ಪತಿ ಹಾವು ಸತ್ತಿದೆ ಎಂದು ಹೇಳಲು ಮರೆತ್ತಿದ್ದರಿಂದ ಕೆಲಕಾಲ ವೈದ್ಯರು, ದಾದಿಯರು ಮತ್ತಿತರರು ಆತಂಕಗೊಂಡಿದ್ದರು. ಆದರೆ, ತಕ್ಷಣವೇ ಹಾವು ಸತ್ತಿದೆ ಎಂದು ತಿಳಿಸಲಾಯಿತು. ಚಿಕಿತ್ಸೆ ನಂತರ ಲಲಿತಾ ಬಾಯಿ ಅವರ ಸ್ಥಿತಿ ಅಪಾಯದಿಂದ ಪಾರಾಗಿದೆ ಎಂದು ಹೇಳಲಾಗಿದೆ.

ಸಾಗರದಲ್ಲೂ ಇಂಥದ್ದೊಂದು ಪ್ರಕರಣ
ಸಾಗರದಲ್ಲೂ ಇಂಥದ್ದೊಂದು ಪ್ರಕರಣ ಮುನ್ನೆಲೆಗೆ ಬಂದಿದೆ. ಸಾಗರ್‌ನ ಬುಂದೇಲ್‌ಖಂಡ್ ವೈದ್ಯಕೀಯ ಕಾಲೇಜಿನಲ್ಲೂ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಕೆಲವು ದಿನಗಳ ಹಿಂದೆ ಮಹಿಳೆ ಮಲಗಿದ್ದಾಗ ಪ್ರದೇಶದಲ್ಲಿ ಹಾವು ಕಚ್ಚಿತು. ಮನೆಯವರು ಹಾವನ್ನು ಕೊಂದು ಪೆಟ್ಟಿಗೆಯಲ್ಲಿಟ್ಟು ಆಸ್ಪತ್ರೆಗೆ ಕರೆತಂದಿದ್ದರು. ಸುಮಾರು ಎರಡು ದಿನಗಳ ಕಾಲ ಮನೆಯವರು ಹಾವನ್ನು ಪೆಟ್ಟಿಗೆಯಲ್ಲಿಟ್ಟಿದ್ದರು. ಆಸ್ಪತ್ರೆಯ ಶುಶ್ರೂಷಕರ ಸಾಕಷ್ಟು ಒತ್ತಾಯದ ನಂತರ ಅವರು ಅದನ್ನು ಬಿಟ್ಟಿದ್ದರು. ಈ ಹಾವು ಅತ್ಯಂತ ವಿಷಕಾರಿ ಜಾತಿಗೆ ಸೇರಿತ್ತು.












Click it and Unblock the Notifications