ಮಧ್ಯಪ್ರದೇಶ; 'ಸಿಎಂ ಕಮಲನಾಥ್ ರಾಜೀನಾಮೆ ನೀಡುವುದಿಲ್ಲ'

ಭೋಪಾಲ್, ಮಾರ್ಚ್, 10: ಮಧ್ಯಪ್ರದೇಶದ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರಕಾರ ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸಲಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ವಿಶ್ವಾಸವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಂಗಳವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಪ್ರದೇಶ ರಾಜಕೀಯ ಬೆಳವಣಿಗೆಗ ಕಾಂಗ್ರೆಸ್ ಎದೆಗುಂದಿಲ್ಲ. ಕಮಲನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಅವರು ಹೇಳಿದರು.

ಜ್ಯೋತಿರಾಧಿತ್ಯಾ ಸಿಂಧಿಯಾ ಬಗ್ಗೆ ಬೆಳಿಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ದಿಗ್ವಿಜಯ್ ಅವರು, ಜೋತಿರಾದಿತ್ಯ ಅವರನ್ನು ಸಂಪರ್ಕಿಸಲು ಕಾಂಗ್ರೆಸ್ ಹೈಕಮಾಂಡ್ ಪ್ರಯತ್ನಿಸುತ್ತಿದೆ ಆದರೆ, ಅವರಿಗೆ ಹಂದಿಜ್ವರ ಇರುವ ಕಾರಣ ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ದಿಗ್ವಿಜಯ್ ಸಿಂಗ್ ವ್ಯಂಗ್ಯವಾಡಿದ್ದರು.

Madhya Pradesh; CM Kamal Nath Will Not Resign Says Digvijay Singh

ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮನೆ ಸಲ್ಲಿಸಿರುವ ಕಾಂಗ್ರೆಸ್‌ನ 22 ಶಾಸಕರಲ್ಲಿ 19 ಶಾಸಕರ ರಾಜೀನಾಮೆ ಪತ್ರಗಳು ಸ್ಪೀಕರ್ ಪ್ರಜಾಪತಿ ಅವರ ಕೈ ಸೇರಿವೆ. ಈ ಎಲ್ಲ 22 ಕಾಂಗ್ರೆಸ್ ಶಾಸಕರು ಜ್ಯೋತಿರಾಧಿತ್ಯಾ ಸಿಂಧಿಯಾ ಅವರ ಬಣ ಸೇರಿದ್ದಾರೆ. ಇದರಿಂದ ಕಮಲನಾಥ್ ನೇತೃತ್ವದ ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರ ಪತನವಾಗುವುದು ಬಹುತೇಕ ಖಚಿತವಾಗಿದೆ.

ಮದ್ಯಪ್ರದೇಶದಲ್ಲಿ ಕಾಂಗ್ರೆಸ್ ಇತರ ಪಕ್ಷೇತರ ಶಾಸಕರನ್ನು ನಂಬಿ ಸರ್ಕಾರ ರಚಿಸಿದೆ. 230 ಬಲದ ವಿಧಾನಸಭೆಯಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ 109, ಕಾಂಗ್ರೆಸ್ 114 ಹಾಗೂ ಇತರರು 7 ಜನ ಸ್ಥಾನ ಪಡೆದಿದ್ದರು. ಬಹುಮತಕ್ಕೆ 116 ಸ್ಥಾನಗಳ ಅಗತ್ಯತೆ ಇದೆ. ಆದರೆ, ಈಗ 22 ಶಾಸಕರ ರಾಜೀನಾಮೆಯಿಂದ ವಿಧಾನಸಭೆ ಬಲಾಬಲ ೨೦೬ ಕ್ಕೆ ಕುಸಿದಿದ್ದು, ಕಾಂಗ್ರೆಸ್‌ನ 96 ಅಲ್ಪಮತಕ್ಕೆ ಕುಸಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+