'ನಮಗೆ ಎರಡು ಹಿಂದುಸ್ಥಾನ ಬೇಕಿಲ್ಲ', ರಾಹುಲ್ ಗಾಂಧಿ ಗುಡುಗು!

ಇಂಧೋರ್, ನವೆಂಬರ್ 16: "ನಮಗೆ ಎರಡು ಹಿಂದುಸ್ಥಾನ ಬೇಕಿಲ್ಲ. ಉದ್ಯಮಿಗಳ ಮತ್ತು ಸಾಮಾನ್ಯ ವರ್ಗದ ಎಂಬ ಎರಡು ವಿಧದ ಹಿಂದುಸ್ಥಾನ ನಮಗೆ ಬೇಕಿಲ್ಲ" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುಡುಗಿದ್ದಾರೆ.

ಮಧ್ಯಪ್ರದೇಶದ ಸಾಗರದಲ್ಲಿ ನಡೆದ ಚುನಾವಣಾ rally ಯಲ್ಲಿ ಮಾತನಾಡುತ್ತಿದ್ದ ಅವರು, 'ಬೆರಳೆಣಿಕೆಯ ಉದುಮಿಗಳದ್ದೊಂದು ಮತ್ತು ಸಾಮಾನ್ಯ ಜನರದ್ದೊಂದು ಎಂಬ ಎರಡು ಹಿಂದುಸ್ಥಾನ ನಮಗೆ ಬೇಕಿಲ್ಲ. ನಮಗೆ ಒಂದೇ ರಾಷ್ಟ್ರ ಬೇಕು, ನಮಗೆ ನ್ಯಾಯಬೇಕು' ಎಂದರು.

'ಕಾಂಗ್ರೆಸ್ ತನ್ನ ಯೋಜನೆಗಳನ್ನು ಜನರಿಗೆ ಉಡುಗೊರೆ ಎಂದು ಎಂದಿಗೂ ನೀಡಿಲ್ಲ. ಜನರ ಸಂಪತ್ತನ್ನೇ ಜನರಿಗೆ ನೀಡಿದ್ದೇವೆ ನಾವು. ಆದರೆ ಮೋದಿ ಸರ್ಕಾರ ಜನರ ಹಣವನ್ನು ಕಬಳಿಸುತ್ತಿದೆ' ಎಂದು ಮೋದಿ ಸರ್ಕಾರದ ಮೇಲೆ ಎಂದಿನಂತೆ ವಾಗ್ದಾಳಿ ನಡೆಸಿದರು.

Madhya pradesh assembly elections 2018: Rahul mocks Modi again

"ಉದ್ಯಮಿಗಳದ್ದೊಂದು, ಜನ ಸಾಮಾನ್ಯರದ್ದೊಂದು ಹಿಂದುಸ್ಥಾನವಾದರೆ ನಾವು ಎರಡು ಧ್ವಜ ಹಾರಿಸಬೇಕಾಗುತ್ತದೆ! ಉದ್ಯಮಿಗಳ 3.5 ಲಕ್ಷ ಕೋಟಿ ರೂ.ಗಳಿಂದ ರೈತರ ಸಾಲಮನ್ನಾ ಮಾಡಬಹುದು. ಕಾಂಗ್ರೆಸ್ ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ ಸರ್ಕಾರ ರಚಿಸಿದ 10 ದಿನಗಳಲ್ಲಿ ರೈತರ ಸಾಲಮನ್ನಾ ಮಾಡುತ್ತೇವೆ" ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+