ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛಿಂದ್ವಾರದಲ್ಲಿ ಕಲ್ಲೆಸೆಯುವ ಹಬ್ಬದಲ್ಲಿ ನಾನೂರಕ್ಕೂ ಹೆಚ್ಚು ಮಂದಿಗೆ ಗಾಯ

|
Google Oneindia Kannada News

ಭೋಪಾಲ್ (ಮಧ್ಯಪ್ರದೇಶ), ಸೆಪ್ಟೆಂಬರ್ 1: ಮಧ್ಯಪ್ರದೇಶದ ಛಿಂದ್ವಾರದಲ್ಲಿ ನಡೆಯುವ ಗೋಟ್ ಮಾರ್ ಹಬ್ಬ ಅಥವಾ ವಾರ್ಷಿಕ ಕಲ್ಲೆಸೆಯುವ ಹಬ್ಬದಲ್ಲಿ ಶನಿವಾರ ನಾನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕನಿಷ್ಠ ಹನ್ನೆರಡು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಪಂಧುರ್ನಾದಲ್ಲಿ ಇರುವ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಬ್ಬರಿಗೆ ಕಣ್ಣಿಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾನೂರು ವರ್ಷಗಳಿಂದ ಈ ಆಚರಣೆ ನಡೆದುಕೊಂಡು ಬಂದಿದೆ. ಪಂಧುರ್ನಾ ಹಾಗೂ ಸಾವರ್ ಗಾಂವ್ ನ ಹಳ್ಳಿಗರು ಸೇರಿ ಗೋಟ್ ಮಾರ್ ಹಬ್ಬವನ್ನು ಪ್ರತಿ ವರ್ಷ ಆಚರಿಸುತ್ತಾರೆ. ಎರಡೂ ಹಳ್ಳಿಗಳ ಮಧ್ಯೆ ಜಾಮ್ ನದಿ ಹರಿಯುತ್ತದೆ. ನದಿಯ ಮಧ್ಯೆ ಬಾವುಟವೊಂದನ್ನು ನೆಡಲಾಗುತ್ತದೆ. ಎರಡೂ ಕಡೆಯಿಂದ ತಂಡಗಳನ್ನು ಮಾಡಿಕೊಂಡು, ಆ ಬಾವುಟ ಕಸಿಯಲು ಯತ್ನಿಸಲಾಗುತ್ತದೆ.

ಆ ಬಾವುಟವನ್ನು ತಲುಪಲು ಎರಡೂ ಕಡೆಯಿಂದ ತಂಡಗಳು ಪ್ರಯತ್ನ ಮಾಡುವಾಗ ಹಳ್ಳಿಗರು ಕಲ್ಲು ತೂರುತ್ತಾರೆ. ಈ ವರ್ಷ ಪಂಧುರ್ನಾದ ಹಳ್ಳಿಗರು ಬಾವುಟ ಕಸಿಯುವುದರಲ್ಲಿ ಜಯಿಸಿದ್ದು, ಅವರನ್ನು ವಿಜಯಶಾಲಿಗಳು ಎಂದು ಘೋಷಣೆ ಮಾಡಲಾಗಿದೆ.

Madhya Pradesh Annual Stone Throwing Fair; Over 400 People Injured

ಸ್ಥಳೀಯರ ನಂಬಿಕೆ ಪ್ರಕಾರ: ನೂರಾರು ವರ್ಷಗಳ ಹಿಂದೆ ಪಂಧುರ್ನಾದ ಹುಡುಗನೊಬ್ಬ ಸಾವರ್ ಗಾಂವ್ ನ ಹುಡುಗಿಯ ಜತೆ ಓಡಿಹೋಗುವಾಗ, ನದಿ ದಾಟುವ ವೇಳೆ ಅವರ ಮೇಲೆ ಸಾವರ್ ಗಾಂವ್ ಗ್ರಾಮಸ್ಥರು ಕಲ್ಲು ತೂರಿದ್ದರಂತೆ. ಆಗ ಆ ಜೋಡಿಗೆ ಸಹಾಯ ಮಾಡಲು ಪಂಧುರ್ನಾ ಗ್ರಾಮಸ್ಥರು ಬಂದು, ಸುರಕ್ಷಿತವಾಗಿ ನದಿ ದಾಟಲು ಸಹಾಯ ಮಾಡಿದರಂತೆ. ಆ ಕಾರಣಕ್ಕಾಗಿ ಈಗಲೂ ಈ 'ಗೋಟ್ ಮಾರ್' ಆಚರಣೆಯಲ್ಲಿ ಇದೆ ಎನ್ನುತ್ತಾರೆ.

ಛಿಂದಾವರ್ ನ ಎಸ್ ಪಿ ಮನೋಜ್ ರಾಯ್ ಮಾತನಾಡಿ, ಈ ಬಾರಿ ಹಬ್ಬವನ್ನು ಡ್ರೋಣ್ ಹಾಗೂ ಸಿಸಿಟಿವಿ ಕ್ಯಾಮೆರಾ ಬಳಸಿ ಕಣ್ಗಾವಲು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಕುಂಡೆ ಕುಂಡೆ ಕುಂಡೆ, ಆಹಾ ಕೆಟ್ಟ ಕುಂಡೆ, ಆಹಾ ಒಳ್ಳೆ ಕುಂಡೆ!ಕುಂಡೆ ಕುಂಡೆ ಕುಂಡೆ, ಆಹಾ ಕೆಟ್ಟ ಕುಂಡೆ, ಆಹಾ ಒಳ್ಳೆ ಕುಂಡೆ!

ಈ ಹಬ್ಬದ ಆಚರಣೆ ಸಂದರ್ಭದಲ್ಲಿ ಜಿಲ್ಲಾಡಳಿತದಿಂದ ಸ್ಥಳದಲ್ಲಿ ಪ್ರಾಥಮಿಕ ಚಿಕಿತ್ಸೆ ವ್ಯವಸ್ಥೆ ಮಾಡಲಾಗುತ್ತದೆ. "ಇದು ಮುಂಚಿನಿಂದ ಬಂದಿರುವ ಆಚರಣೆ. ಆ ಕಾರಣಕ್ಕೆ ಇದನ್ನು ಸಂಪೂರ್ಣ ನಿಲ್ಲಿಸಲು ಆಗಲ್ಲ. ಆದರೆ ಈ ವೇಳೆ ಮದ್ಯ ಸೇವಿಸುವುದನ್ನು ನಿಷೇಧಿಸಿದ್ದೇವೆ. ಜತೆಗೆ ಕಲ್ಲು ತೂರುವಾಗ ಹಗ್ಗ ಬಳಸುವಂತೆ ಸೂಚಿಸಿದ್ದೇವೆ. ಜತೆಗೆ ವೈದ್ಯಕೀಯ ವ್ಯವಸ್ಥೆಯನ್ನು ಸ್ಥಳದಲ್ಲಿ ಮಾಡಿರಲಾಗುತ್ತದೆ" ಎಂದು ಜಿಲ್ಲಾಡಳಿತದಿಂದ ತಿಳಿಸಲಾಗಿದೆ.

English summary
400 year tradition of stone throwing fair more than 400 people injured in Madhya Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X