"ರಾಮಮಂದಿರ ನಿರ್ಮಾಣಕ್ಕೆ ಕಾನೂನು ತಂದರೆ NDA ಗೆಲುವು ಖಚಿತ!"
Recommended Video

ಭೋಪಾಲ್, ಜನವರಿ 28: ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ರಾಮಮಂದಿರ ನಿರ್ಮಾಣಕ್ಕೆ ಕಾನೂನು ಜಾರಿಗೊಳಿಸಿದ್ದೇ ಆದಲ್ಲಿ, 2019 ರ ಲೋಕಸಭಾ ಚುನಾವಣೆಯಲ್ಲಿ ಅದು ಗೆಲುವು ಸಾಧಿಸುವುದು ಖಚಿತ ಎಂದು ವಿಶ್ವ ಹಿಂದು ಪರಿಷತ್(ವಿಎಚ್ ಪಿ) ನಾಯಕ ವಿ ಎಸ್ ಕೊಕ್ಜೆ ಹೇಳಿದ್ದಾರೆ.

"ಲೋಕಸಭಾ ಚುನಾವಣೆಗೆ ಮೊದಲು ಸರ್ಕಾರ ರಾಮಮಂದಿರ ನಿರ್ಮಾಣಕ್ಕಾಗಿ ಕಾನೂನು ರಚಿಸಿದ್ದೇ ಆದಲ್ಲಿ ಚುನಾವಣೆಯಲ್ಲಿ ಅದು ಗೆಲುವು ಸಾಧಿಸುವುದು ಖಂಡಿತ. ಆದರೆ ಆ ಕಾನೂನನ್ನು ಕೆಲವರು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂಬುದು ಸರ್ಕಾರದ ಆತಂಕ" ಎಂದು ಕೊಕ್ಜೆ ಹೇಳಿದ್ದಾರೆ.ಈ ನಡುವೆ ಜನವರಿ 29 ರಂದು ನಡೆಯಬೇಕಿದ್ದ ರಾಮಮಂದಿರ ವಿವಾದದ ಕುರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ ಎಂದು ಹೆಚ್ಚುವರಿ ರಿಜಿಸ್ಟ್ರಾರ್ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಪಂಚಸದಸ್ಯರ ಸಾಂವಿಧಾನಿಕ ಪೀಠದ ಐವರು ನ್ಯಾಯಮೂರ್ತಿಗಳಲ್ಲಿ ಓರ್ವ ನ್ಯಾಯಮೂರ್ತಿಗಳು ಅಂದು ಲಭ್ಯವಿರುವುದಿಲ್ಲವಾದ್ದರಿಂದ ಆ ದಿನ ವಿಚಾರಣೆ ನಡೆಯುತ್ತಿಲ್ಲ. ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ ಇದಾಗಿದೆ.












Click it and Unblock the Notifications