• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಧ್ಯಪ್ರದೇಶ: ಖುದ್ದು ಶಾಲೆಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ

|
Google Oneindia Kannada News

ಭೋಪಾಲ್‌, ಡಿಸೆಂಬರ್ 18: ಮಧ್ಯಪ್ರದೇಶದ ಸಚಿವರೊಬ್ಬರು ಶಾಲೆಗೆ ಆಗಮಿಸಿ ಖುದ್ದಾಗಿ ಶೌಚಾಲಯವನ್ನು ಸ್ವಚ್ಛಗೊಳಿಸಿರುವ ಘಟನೆ ನಡೆದಿದೆ.

ಸರ್ಕಾರಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಸಚಿವರೊಬ್ಬರು ಖುದ್ದು ಶೌಚಾಲಯವನ್ನು ಸ್ವಚ್ಛಗೊಳಿಸಿ ಸರಳತೆ ಮೆರೆಯುವುದರ ಜೊತೆಗೆ ಸ್ವಚ್ಛತೆಯ ಸಂದೇಶವನ್ನೂ ಸಾರಿದ್ದಾರೆ.

ಮಧ್ಯಪ್ರದೇಶದ ಇಂಧನ ಸಚಿವ ಪ್ರದ್ಯುಮ್ನ ಸಿಂಗ್ ತೋಮರ್ ಬಾಲಕಿ ನೀಡಿದ ದೂರಿನ ಮೇರೆಗೆ ಸ್ವತಃ ಸರ್ಕಾರಿ ಶಾಲೆಗೆ ಬಂದು ಶೌಚಾಲಯ ಸ್ವಚ್ಛಗೊಳಿಸಿದ್ದಾರೆ.

ಸಚಿವ ಪ್ರದ್ಯುಮ್ನ ಸಿಂಗ್ ತೋಮರ್ ಮಾತನಾಡಿ "ಶಾಲೆಯಲ್ಲಿನ ಶೌಚಾಲಯಗಳು ಸ್ವಚ್ಛವಾಗಿಲ್ಲ, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ವಿದ್ಯಾರ್ಥಿನಿಯೊಬ್ಬರು ನನಗೆ ಹೇಳಿದರು.

30 ದಿನಗಳಿಂದ ಸ್ವಚ್ಛತಾ ಪ್ರತಿಜ್ಞೆ ಮಾಡಿದ್ದು, ಪ್ರತಿ ದಿನ ಯಾವುದಾದರೂ ಸಂಸ್ಥೆಗೆ ತೆರಳಿ ಸ್ವಚ್ಛತೆ ಮಾಡುತ್ತೇನೆ, ಸ್ವಚ್ಛತೆಯ ಸಂದೇಶ ಎಲ್ಲ ಜನರಿಗೆ ತಲುಪಬೇಕು, ಎಲ್ಲರೂ ಸ್ವಚ್ಛತೆ ಹೊಂದಬೇಕು ಎಂಬ ಉದ್ದೇಶದಿಂದೇ ಸ್ಫೂರ್ತಿಯಾಗಲು ಈ ಕಾರ್ಯ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಸ್ವಚ್ಛತೆ ಕಾಪಾಡುವಂತೆ ಜನರಲ್ಲಿ ಮನವಿ ಮಾಡುವುದರೊಂದಿಗೆ ಶಾಲೆಗಳ ಶೌಚಾಲಯಗಳನ್ನು ಪ್ರತಿನಿತ್ಯ ಸ್ವಚ್ಛವಾಗಿಟ್ಟುಕೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಹೀಗೆ ಪ್ರದ್ಯುಮ್ನ ಶೌಚಾಲಯ ಸ್ವಚ್ಛಗೊಳಿಸಿವುದು ಕಂಡು ಬಂದಿದ್ದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು ಮತ್ತು ರಸ್ತೆಯನ್ನು ಗುಡಿಸಿದ್ದರು.

ಮಾಹಿತಿ ಪ್ರಕಾರ ಪ್ರದ್ಯುಮ್ನ ಸಿಂಗ್ ತೋಮರ್ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ತಪಾಸಣೆಗೆ ಬಂದಿದ್ದರು. ಇಲ್ಲಿ ಶಾಲೆಯ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸುವಾಗ ಶಾಲೆಯ ಶೌಚಾಲಯ ತುಂಬಾ ಕೊಳಕಾಗಿದೆ ಎಂದು ವಿದ್ಯಾರ್ಥಿನಿಯರು ಸಚಿವರಿಗೆ ತಿಳಿಸಿ ಇದರಿಂದ ಅವರು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗಿದೆ ಎಂದು ದೂರಿದರು.

ಆಗ ಇದನ್ನು ಕೇಳಿದ ಇಂಧನ ಸಚಿವರು ನೇರವಾಗಿ ಶೌಚಾಲಯಕ್ಕೆ ತೆರಳಿ ಸಮಯ ವ್ಯರ್ಥ ಮಾಡದೆ ತಮ್ಮ ಕೈಯಿಂದಲೇ ಶೌಚಾಲಯ ಸ್ವಚ್ಛಗೊಳಿಸಲು ಆರಂಭಿಸಿದರು. ಇಂಧನ ಸಚಿವರು ಸಂಪೂರ್ಣ ಶೌಚಾಲಯವನ್ನು ಉತ್ತಮ ರೀತಿಯಲ್ಲಿ ಸ್ವಚ್ಛಗೊಳಿಸಿದರು.

English summary
Madhya Pradesh Energy Minister Pradhuman Singh Tomar decided to set an example of public hygiene as he cleaned the toilet of a government school in Gwalior. Tomar said he decided to take the step after a girl student informed him about the dirty toilets in the school.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X