ಬಯಲು ಶೌಚ ಮಾಡಿದ ದಲಿತ ಮಕ್ಕಳ ಥಳಿಸಿ ಹತ್ಯೆ
ಶಿವಪುರಿ, ಸೆಪ್ಟೆಂಬರ್ 26: ಬಯಲಿನಲ್ಲಿ ಶೌಚ ಮಾಡುತ್ತಿದ್ದ ಇಬ್ಬರು ದಲಿತ ಮಕ್ಕಳ ಮೇಲೆ ಸವರ್ಣೀಯರು ದಾಳಿ ಮಾಡಿ ಥಳಿಸಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಭಾವ್ಕೆಧಿ ಎಂಬಲ್ಲಿ ಘಟನೆ ನಡೆದಿದ್ದು, ರೋಶನಿ ಬಾಲ್ಮಿಕಿ (12), ಅವಿನಾಶ್ ಬಾಲ್ಮಿಕಿ (10) ಎಂಬ ಮಕ್ಕಳು ಭಾವ್ಕೆದಿ ಪಂಚಾಯಿತಿ ಕಾರ್ಯಾಲಯದ ಎದುರು ಶೌಚ ಮಾಡಿದ್ದಕ್ಕೆ ಸವರ್ಣೀಯರ ಗುಂಪು ಲಾಠಿಯಿಂದ ಥಳಿಸಿ ಹತ್ಯೆ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದ ಹಕೀಂ ಯಾದವ್ ಮತ್ತು ಅವರ ಸಹೋದರ ರಾಮೇಶ್ವರ ಯಾದವ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಮಕ್ಕಳ ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು 'ಗ್ರಾಮದಲ್ಲಿ ದಲಿತರ ಜೊತೆ ತಾರತಮ್ಯ ಹೆಚ್ಚಿದೆ' ಎಂದು ಮಕ್ಕಳ ತಂದೆ ಹೇಳಿದ್ದಾರೆ. ದಲಿತರಿಗೆ ಕೈಪಂಪ್‌ನಿಂದ ನೀರು ತೆಗೆದುಕೊಳ್ಳಲು ಬಿಡುವುದಿಲ್ಲ, ಅತ್ಯಂತ ಕಡಿಮೆ ಕೂಲಿಗೆ ಕೆಲಸ ಮಾಡುವಂತೆ ಮಾಡಲಾಗಿದೆ' ಎಂದು ಅವರು ಆರೋಪಿಸಿದ್ದಾರೆ.












Click it and Unblock the Notifications