ಇವರು ಆಕ್ಟರ್ ಅಲ್ಲ,ಸಬ್ ಇನ್ಸ್‌ಪೆಕ್ಟರ್: ಆಕ್ಷನ್‌ಗೆ ಬಿತ್ತು ದುಬಾರಿ ದಂಡ
ಭೋಪಾಲ್, ಮೇ 12: ಎರಡು ಕಾರುಗಳ ನಡುವೆ ನಿಂತು ಬ್ಯಾಲೆನ್ಸ್ ಮಾಡುತ್ತಾ ಹೀರೋ ಥರ ಪೋಸ್ ಕೊಟ್ಟವರು ಆಕ್ಟರ್ ಅಲ್ಲ ಸಬ್ ಇನ್ಸ್‌ಪೆಕ್ಟರ್.
ಹೌದು, ಅಜಯ್ ದೇವಗನ್ ಅಭಿನಯದ 'ಸಿಂಗಂ' ಚಿತ್ರದಲ್ಲಿನ ಜನಪ್ರಿಯ ಸಾಹಸ ದೃಶ್ಯದಂತೆ ಸ್ಟಂಟ್ ಮಾಡಲು ಹೋಗಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರು ಎಡವಟ್ಟು ಮಾಡಿಕೊಂಡಿದ್ದಾರೆ.
ಈ ವಿಚಾರದ ಬಗ್ಗೆ ತನಿಖೆ ನಡೆಸುವಂತೆ ಪೊಲೀಸ್ ಮಹಾನಿರ್ದೇಶಕ ಸಾಗರ್ ರಾಂಘೆ ಅನಿಲ್ ಶರ್ಮಾ ಪೊಲೀಸ್ ಅಧೀಕ್ಷಕ ಹೇಮಂತ್ ಚೌಹ್ಹಾಣ್ ಅವರಿಗೆ ನಿರ್ದೇಶಿಸಿದ್ದಾರೆ. ವಿಚಾರಣೆ ಬಳಿಕ ಚೌಹ್ಹಾಣ್ ಸಬ್ ಇನ್ಸ್ ಪೆಕ್ಟ್ ರ್ ಮೇಲೆ 5 ಸಾವಿರ ರೂ. ದಂಡ ವಿಧಿಸಿದ್ದು, ಮುಂದೆ ಈ ರೀತಿಯ ಮಾಡದಂತೆ ನಿರ್ದೇಶನ ನೀಡಿದ್ದಾರೆ.
ಖಾಕಿ ತೊಟ್ಟು ಚಲಿಸುತ್ತಿರುವ ಎರಡು ಕಾರುಗಳ ಮೇಲೆ ಸಮತೋಲನವಾಗಿ ನಿಲ್ಲುವ ಡೇರ್ ಡೆವಿಲ್ ಸಾಹಸ ಕೆಲಸ ಮಾಡಿದ ಮಧ್ಯಪ್ರದೇಶದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರಿಗೆ 5 ಸಾವಿರ ರೂ. ದಂಡ ವಿಧಿಸಲಾಗಿದೆ.

ದಮೋಹ್ ಜಿಲ್ಲೆ ನರಸಿಂಗ್ ಗಢ ಪೊಲೀಸ್ ಠಾಣೆ ಇನ್ ಚಾರ್ಜ್ ಮನೋಜ್ ಯಾದವ್ ಈ ರೀತಿಯ ಎಡವಟ್ಟು ಮಾಡಿಕೊಂಡ ಅಧಿಕಾರಿ. ಮುಂದೆ ಈ ರೀತಿಯ ಯಾವುದೇ ದುಸ್ಸಾಹಸಕ್ಕೆ ಮುಂದಾಗದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಮನೋಜ್ ಯಾದವ್ ಅವರ ಸ್ಟಂಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು, ಯುವ ಜನತೆಗೆ ಇದು ಕೆಟ್ಟ ಸಂದೇಶ ರವಾನಿಸುತ್ತದೆ ಎಂದು ಅಭಿಪ್ರಾಯಪಡಲಾಗಿತ್ತು.












Click it and Unblock the Notifications