ಗಡ್ಕರಿ ಚಾಲೆಂಜ್ ಗೆದ್ದು 15 ಕೆಜಿ ತೂಕ ಇಳಿಸಿ ಅನುದಾನ ಕೇಳಿದ ಸಂಸದ!

ಭೋಪಾಲ್, ಜೂನ್ 12; ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಸವಾಲು ಸ್ವೀಕಾರ ಮಾಡಿದ ಸಂಸದರೊಬ್ಬರು 15 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಸಚಿವ ಸವಾಲು ಗೆದ್ದ ಅವರು ಈಗ ಕೊಟ್ಟ ಮಾತಿನಂತೆ ಅನುದಾನ ಕೊಡಿ ಎಂದು ಸಚಿವರಿಗೆ ಸವಾಲು ಹಾಕಿದ್ದಾರೆ.

ಉಜ್ಜೈನಿಯ ಬಿಜೆಪಿ ಸಂಸದ ಅನಿಲ್ ಫಿರೋಜಿಯಾ 4 ತಿಂಗಳಿನಲ್ಲಿ 15 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಅಲ್ಲದೇ ಕ್ಷೇತ್ರದ ಅಭಿವೃದ್ಧಿಗೆ 15,000 ಕೋಟಿ ಅನುದಾನ ನೀಡಿ ಎಂದು ಸಚಿವರನ್ನು ಕೇಳಿದ್ದಾರೆ. ಸಂಸದರ ಈ ಬೇಡಿಕೆಗೆ ಕಾರಣವೂ ಇದೆ.

ಮೊದಲ ಬಾರಿಗೆ ಸಂಸದರಾದ ಅನಿಲ್ ಫಿರೋಜಿಯಾಗೆ ತೂಕ ಇಳಿಸಿಕೊಂಡರೆ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುತ್ತೇನೆ ಎಂದು ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ ಸಂಸದರು ನಾಲ್ಕು ತಿಂಗಳು ಕಸರತ್ತು ನಡೆಸಿ ತೂಕ ಇಳಿಸಿಕೊಂಡಿದ್ದಾರೆ.

ಸಾರ್ವಜನಿಕ ಸಭೆಯಲ್ಲಿಯೇ ಸಚಿವ ನಿತಿನ್‌ ಗಡ್ಕರಿ ಅನಿಲ್ ಫಿರೋಜಿಯಾ ತೂಕ ಇಳಿಸಿಕೊಂಡರೆ ಅನುದಾನ ನೀಡಲಾಗುತ್ತದೆ ಎಂದು ಹೇಳಿದ್ದರು. ಈಗ 15 ಕೆಜಿ ತೂಕ ಇಳಿಸಿಕೊಂಡು ಸಂಸದರು ಫಿಟ್ ಆಗುತ್ತಿದ್ದಾರೆ. ತೂಕವನ್ನು ಮತ್ತಷ್ಟು ಇಳಿಸಲು ಸಹ ತೀರ್ಮಾನಿಸಿದ್ದಾರೆ.

ಸಂಸದರು ಹೇಳಿದ್ದೇನು?

ಸಂಸದರು ಹೇಳಿದ್ದೇನು?

ಈ ಕುರಿತು ಎಎನ್‌ಐ ಜೊತೆ ಮಾತನಾಡಿರುವ ಸಂಸದ ಅನಿಲ್ ಫಿರೋಜಿಯಾ, "ಪ್ರಧಾನಿ ನರೇಂದ್ರ ಮೋದಿ ಫಿಟ್ ಇಂಡಿಯಾ ಅಭಿಯಾನ ಆರಂಭಿಸಿದರು. ಸಚಿವ ನಿತಿನ್ ಗಡ್ಕರಿ ತೂಕ ಇಳಿಸಿಕೊಳ್ಳುವಂತೆ ವೇದಿಕೆಯಲ್ಲಿಯೇ ನನಗೆ ಹೇಳಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿ ನಾನು ಇದುವರೆಗೂ 15 ಕೆಜಿ ತೂಕ ಇಳಿಸಿಕೊಂಡಿದ್ದೇನೆ. ಇನ್ನೂ ತೂಕ ಕಡಿಮೆ ಮಾಡಿಕೊಳ್ಳುತ್ತೇನೆ. ಸಚಿವರು ಅನುದಾನ ನೀಡಬೇಕು" ಎಂದು ಹೇಳಿದ್ದಾರೆ.

ಕಠಿಣ ಡಯಟ್ ಮಾಡುತ್ತಿರುವ ಸಂಸದ

ಕಠಿಣ ಡಯಟ್ ಮಾಡುತ್ತಿರುವ ಸಂಸದ

ಸಂಸದ ಅನಿಲ್ ಫಿರೋಜಿಯಾ ವ್ಯಾಯಾಮ, ಕಠಿಣ ಡಯಟ್ ಮೂಲಕ 15 ಕೆಜಿ ತೂಕ ಇಳಿಸಿಕೊಂಡಿದ್ದಾರೆ. "ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬರುತ್ತದೆ ಎಂದರೆ ಇನ್ನಷ್ಟು ತೂಕ ಇಳಿಸಿಕೊಳ್ಳಲು ಸಿದ್ಧನಿದ್ದೇನೆ" ಎಂದು ಹೇಳಿದ್ದಾರೆ.

ಪ್ರತಿದಿನ 5.30ಕ್ಕೆ ಏಳುವ ಸಂಸದರು ವಾಕಿಂಗ್, ಯೋಗಾಭ್ಯಾಸ, ಓಡುವುದು ಸೇರಿದಂತೆ ವಿವಿಧ ಕಸರತ್ತು ಮಾಡುತ್ತಾರೆ. ಕಡಿಮೆ ಉಪಹಾರ ಸೇವಿಸುವ ಅವರು ಮಧ್ಯಾಹ್ನ ಮತ್ತು ರಾತ್ರಿ ಸಲಾಡ್, ಹಸಿ ತರಕಾರಿ, ರೋಟಿ ಸೇವಿಸುತ್ತಾರೆ. ಆಗಾಗ ಕ್ಯಾರೆಟ್ ಸೂಪ್ ಕುಡಿಯುತ್ತಾರೆ.

135 ಕೆಜಿ ಇದ್ದ ಸಂಸದರು

135 ಕೆಜಿ ಇದ್ದ ಸಂಸದರು

ಸಂಸದ ಅನಿಲ್ ಫಿರೋಜಿಯಾ ಮೊದಲು 135 ಕೆಜಿ ಇದ್ದರು. ಈಗ 15 ಕೆಜಿ ಕಡಿಮೆಯಾಗಿದ್ದಾರೆ. ನಿತಿನ್ ಗಡ್ಕರಿ ಅವರು ಸಮಾವೇಶದಲ್ಲಿ ಮಾತುಕೊಟ್ಟಂತೆ ನನ್ನ ಕ್ಷೇತ್ರಕ್ಕೆ 1000 ಕೋಟಿ ಅನುದಾನ ನೀಡಬೇಕು ಎಂದು ಅನಿಲ್ ಫಿರೋಜಿ ಈಗ ಸಚಿವರ ಮುಂದೆ ಸವಾಲು ಹಾಕಿದ್ದಾರೆ.

ಸಂಸದ ಅನಿಲ್ ಫಿರೋಜಿಯಾ ತೂಕ ಕಳೆದುಕೊಂಡ ಬಳಿಕ ನಿತಿನ್ ಗಡ್ಕರಿ ಗುರುತು ಹಿಡಿಯಲು ಸಾಧ್ಯವಾಗಿಲ್ಲ. ತಮ್ಮ ಹಿಂದಿನ ಫೋಟೋ ತೋರಿಸಿ ಅವರು ಸಚಿವರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ.

ಸಮಾವೇಶದಲ್ಲಿ ಸಚಿವರು ಹೇಳಿದ್ದೇನು?

ಸಮಾವೇಶದಲ್ಲಿ ಸಚಿವರು ಹೇಳಿದ್ದೇನು?

ಫೆಬ್ರವರಿಯಲ್ಲಿ ಉಜ್ಜೈನಿ ಕ್ಷೇತ್ರದ ಮಾಲ್ವಾ ಪ್ರದೇಶದಲ್ಲಿ 5,772 ಕೋಟಿ ರೂ. ಮೌಲ್ಯದ 11 ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡುವ ಕಾರ್ಯಕ್ರಮವಿತ್ತು. ಈ ಯೋಜನೆಯು ಒಟ್ಟು 534 ಕಿ. ಮೀ. ಆಗಿತ್ತು. ಈ ಕಾರ್ಯಕ್ರಮದಲ್ಲಿ ಸಚಿವ ನಿತಿನ್ ಗಡ್ಕರಿ ಸಂಸದ ಅನಿಲ್ ಫಿರೋಜಿಯಾಗೆ ತೂಕ ಇಳಿಸಿಕೊಂಡರೆ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುತ್ತೇವೆ ಎಂದು ಸವಾಲು ನೀಡಿದ್ದರು.

ನಿತಿನ್ ಗಡ್ಕರಿ ಉಜ್ಜೈನಿ ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ 600 ಕೋಟಿ ಅನುದಾನ ನೀಡಿದ್ದಾರೆ. ಈ ವರ್ಷದ ಮುಂಗಾರು ಅಧಿವೇಶನದ ಅವಧಿಯಲ್ಲಿ ಇನ್ನೂ 1000 ಕೋಟಿ ಅನುದಾನ ತರುತ್ತೇನೆ ಎಂದು ಸಂಸದರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+