ಜಮೀರ್ ಅಹ್ಮದ್ ತಲೆ ಉಳಿಸಿದ ಮತದಾರ, ಭಾರಿ ಅಂತರದ ಗೆಲುವು
ಬೆಂಗಳೂರು, ಮೇ 15: 'ಚುನಾವಣೆಯಲ್ಲಿ ಸೋತರೆ ತಲೆ ಕಡಿದು ಕೊಡುತ್ತೇನೆ' ಎಂದಿದ್ದ ಚಾಮರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹ್ಮದ್ ಅವರು ಗೆಲುವಿಗೆ ಹತ್ತಿರದಲ್ಲಿದ್ದಾರೆ.
ಚಾಮರಾಜಪೇಟೆಯಿಂದ ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಜಮೀರ್ ಅಹ್ಮದ್ ಅವರು ನಂತರ ಪಕ್ಷಾಂತರ ಮಾಡಿ ಕಾಂಗ್ರೆಸ್ ಸೇರಿದ್ದರು. ಅವರನ್ನು ಸೋಲಿಸಿಯೇ ತೀರಲು ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಪಣ ತೊಟ್ಟಿದ್ದರು ಆದರೆ ಅವರ ಆಟ ಜಮೀರ್ ಮುಂದೆ ಸಾಗಿಲ್ಲ.
'ನಾನೇದಾರೂ ಸೋತರೆ ತಲೆ ಕಡಿದುಕೊಡುತ್ತೇನೆ' ಜಮೀರ್ ಅಹ್ಮದ್ ಅವರು ಸವಾಲು ಹಾಕಿದ್ದರು ಅಷ್ಟೆ ಅಲ್ಲ ನನ್ನ ವಿರುದ್ಧ ದೇವೇಗೌಡ ಅವರೇ ನಿಂತರು ಗೆಲುವು ನನ್ನದೇ ಎಂದು ಅವರು ಸವಾಲು ಹಾಕಿದ್ದರು. ಜಮೀರ್ ಅಹ್ಮದ್ ಅವರು ಭಾರಿ ಮುನ್ನಡೆಯಲ್ಲಿದ್ದು ಜೆಡಿಎಸ್‌ನ ಅಲ್ತಾಫ್ ಖಾನ್ ಅವರು ಎರಡನೇ ಸ್ಥಾನದಲ್ಲಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನು ಮಂತ್ರಿ ಆಗುತ್ತೇನೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿಕೊಂಡಿದ್ದರು.












Click it and Unblock the Notifications