ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜಪೇಟೆ ಅಮಾನುಷ ಹತ್ಯೆ: ಬಂಧಿತರಲ್ಲಿ 2 ಬಾಲಕರು, 4 ಮಹಿಳೆಯರು

|
Google Oneindia Kannada News

ಬೆಂಗಳೂರು, ಮೇ 25: ಚಾಮರಾಜಪೇಟೆಯಲ್ಲಿ ವ್ಯಕ್ತಿಯೊಬ್ಬನನ್ನು ಕಳ್ಳ ಎಂದು ಭಾವಿಸಿ ಅಮಾನವೀಯ ರೀತಿಯಲ್ಲಿ ಥಳಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 14 ಮಂದಿಯನ್ನು ಬಂಧಿಸಿದ್ದು, ಇದರಲ್ಲಿ ನಾಲ್ವರು ಮಹಿಳೆಯರು ಮತ್ತು ಇಬ್ಬರು ಬಾಲಕರು ಸೇರಿದ್ದಾರೆ.

ಮೃತ ಯುವಕನ ಬಳಿಯಿದ್ದ ಆಧಾರ್ ಕಾರ್ಡ್ ನೆರವಿನಿಂದ ಆತ ರಾಜಸ್ಥಾನದ ಕಾಲುರಾಮ್ ಎಂದು ಪೊಲೀಸರು ಗುರುತಿಸಿದ್ದರು.

ಕಾಲೂರಾಮ್ ಕೊಲೆ ಶಂಕಿತರ ವಿಚಾರಣೆ, ಸಂಬಂಧಿಕರಿಂದ ಠಾಣೆ ಬಳಿ ಪ್ರತಿಭಟನೆಕಾಲೂರಾಮ್ ಕೊಲೆ ಶಂಕಿತರ ವಿಚಾರಣೆ, ಸಂಬಂಧಿಕರಿಂದ ಠಾಣೆ ಬಳಿ ಪ್ರತಿಭಟನೆ

ಬಂಧಿತ ಎಂಟು ಮಂದಿ ಪುರುಷರನ್ನು ಅಂಬು, ವಸಂತ್ ಕುಮಾರ್, ಗೋಪಿ, ಬಾಲನ್, ನಂದ, ತಿರುಮಲೇಶ್ ಮತ್ತು ರಾಜೇಶ್ ಎಂದು ಪೊಲೀಸರು ಗುರುತಿಸಿದ್ದಾರೆ. ಮತ್ತೊಬ್ಬ ವ್ಯಕ್ತಿಯ ಹೆಸರು ಬಹಿರಂಗಪಡಿಸಿಲ್ಲ.

ಬಂಧಿತ ಮಹಿಳೆಯರನ್ನು ಅನುಷಾ, ಸುಶೀಲಾ, ಇಂದಿರಾ ಮತ್ತು ವಾಣಿ ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಅಪ್ರಾಪ್ತ ವಯಸ್ಸಿನವರಾಗಿದ್ದಾರೆ.

Youths lynching 4 women, 2 minors among 14 accused

ಮಕ್ಕಳನ್ನು ಕದಿಯುವವರು ಬಂದಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೇ ರೀತಿಯ ಘಟನೆ ಫ್ರೇಜರ್‌ ಟೌನ್‌ನಲ್ಲಿ ಗುರುವಾರ ನಡೆದಿದ್ದು, ಸ್ಥಳಕ್ಕೆ ದೌಡಾಯಿಸಿದ ಪುಲಕೇಶಿ ನಗರ ಠಾಣೆ ಪೊಲೀಸರು ಗುಂಪಿನಿಂದ ಹಲ್ಲೆಗೆ ಒಳಗಾಗುತ್ತಿದ್ದ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.

ಮಕ್ಕಳ ಕಳ್ಳನೆಂದು ಥಳಿಸಿ ಕೊಂದ ಸ್ಥಳೀಯರು: 9 ಮಂದಿ ಬಂಧನಮಕ್ಕಳ ಕಳ್ಳನೆಂದು ಥಳಿಸಿ ಕೊಂದ ಸ್ಥಳೀಯರು: 9 ಮಂದಿ ಬಂಧನ

ಪಾಟರಿ ರಸ್ತೆಯ ರೈಲ್ವೆ ಹಳಿಯ ಬಳಿ ಈ ಮಹಿಳೆಯರು ಓಡಾಡುತ್ತಿದ್ದರು. ಇದರಿಂದ ಅನುಮಾನಗೊಂಡ ಸ್ಥಳೀಯರು ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

English summary
Police arrested 14 people including 2 minors and 4 women in the case of lynching of a youth in Chamarajpet. A 26 years old man was from Rajasthan beaten to death by the public they mistook him as a child lifter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X