ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೆ.15ರಂದು ಯೂತ್ ವಾಕಥಾನ್ ಮತ್ತು ಯೂತ್ ಅಜೆಂಡಾ-2019 ಬಿಡುಗಡೆ

By ಬೆಂಗಳೂರು ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಫೆಬ್ರವರಿ 14: ಮುಂಬರುವ ಲೋಕಸಭಾ ಚುನಾವಣೆಗೆ ಮುಂಚೆ 'ಯೂತ್ ಅಜೆಂಡಾ - 2019' ಮುಂದಿಡಲು 'ಉದ್ಯೋಗಕ್ಕಾಗಿ ಯುವಜನರು' ಮತ್ತು 'ಗುತ್ತಿಗೆ ನೌಕರರ ಮಹಾಒಕ್ಕೂಟ' ನಿರ್ಧರಿಸಿದೆ.

ಈ ಹಿನ್ನೆಲೆಯಲ್ಲಿ ಫೆ. 15ರಂದು ಬೆಳಗ್ಗೆ 10.30ಕ್ಕೆ 'ಯೂತ್ ವಾಕಥಾನ್' ನಗರದ ರೈಲ್ವೇ ನಿಲ್ದಾಣದಿಂದ ಆರಂಭವಾಗಲಿದ್ದು, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿಯವರು ಉದ್ಘಾಟಿಸಲಿದ್ದಾರೆ.

ಎನ್ ಆರ್ ಕಾಲೋನಿಯಲ್ಲಿ ದೋಸೆ ಧ್ವನಿ ಸಾಂದ್ರಿಕೆ ಬಿಡುಗಡೆ: ವಿ. ಮನೋಹರ್ ಭಾಗಿಎನ್ ಆರ್ ಕಾಲೋನಿಯಲ್ಲಿ ದೋಸೆ ಧ್ವನಿ ಸಾಂದ್ರಿಕೆ ಬಿಡುಗಡೆ: ವಿ. ಮನೋಹರ್ ಭಾಗಿ

'ಯೂತ್ ವಾಕಥಾನ್' ನಲ್ಲಿ ನಾಡಿನ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು, ಯುವಜನ ಮತ್ತು ಗುತ್ತಿಗೆ ನೌಕರರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ನಂತರದ ವಿಕಾಸಸೌಧದ ಎದುರಿಗಿರುವ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ 'ಯೂತ್ ಅಜೆಂಡಾ-2019' ಮಂಡಿಸುವ ಕಾರ್ಯಕ್ರಮವಿರುತ್ತದೆ.

Youth Agenda -2019 release program was organized on February 15th

ಇದರ ಉದ್ಘಾಟನೆಯನ್ನು ಪ್ರಸಿದ್ಧ ನಟ ಪ್ರಕಾಶ್ ರೈ ಮಾಡಲಿದ್ದು, ಹಿರಿಯ ಹೋರಾಟಗಾರರಾದ ಎಸ್.ಆರ್.ಹಿರೇಮಠ ಅವರು ಆಶಯದ ನುಡಿಗಳನ್ನಾಡಲಿದ್ದಾರೆ.

ಯೂತ್ ಅಜೆಂಡಾವನ್ನು ಮಲ್ಲಿಗೆ ಸಿರಿಮನೆಯವರು ಮಂಡಿಸಿದರೆ, ಸುಮಾರು 10 ಜನ ಅಭದ್ರ ನೌಕರರು ಮತ್ತು ಯುವಜನರು ಸುಭದ್ರ ಉದ್ಯೋಗವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ತಮ್ಮ ಅನುಭವ ಕಥನಗಳನ್ನು ಮಂಡಿಸಲಿದ್ದಾರೆ. ಈ ಆಂದೋಲನದ ಮುನ್ನೋಟವನ್ನು ಡಾ.ವಾಸು.ಎಚ್.ವಿ.ಅವರು ಮುಂದಿಡುತ್ತಾರೆ.

 ಶಿಕ್ಷಣ ಇಲಾಖೆಗಾಗಿ ಮ್ಯೂಸಿಕ್ ಆಲ್ಬಂ-ಪುನೀತ್, ಕುಂಬ್ಳೆರಿಂದ ಬಿಡುಗಡೆ ಶಿಕ್ಷಣ ಇಲಾಖೆಗಾಗಿ ಮ್ಯೂಸಿಕ್ ಆಲ್ಬಂ-ಪುನೀತ್, ಕುಂಬ್ಳೆರಿಂದ ಬಿಡುಗಡೆ

ಇದಲ್ಲದೇ, ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ನೀಡಿದ್ದ ಭರವಸೆಯ ಆಧಾರದ ಮೇಲೆ ಅವರನ್ನು ಪ್ರಶ್ನಿಸಲಾಗುವುದು.

English summary
Youth Walkthan and Youth Agenda -2019 release program was organized on February 15th in Government Employees Association Hall, Bengaluru. Actor Prakash Rai, Freedom fighter HS Doreswamy, SR Hiremath will attend.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X