ಕ್ರೈಂ ವರದಿ: ಕೆಂಪೇಗೌಡ ನಗರ ಪೊಲೀಸ್ ಚಿತ್ರಹಿಂಸೆ ಪ್ರಕರಣ

ಬೆಂಗಳೂರು, ಆ.24: ಕೆಂಪೇಗೌಡ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕನೊಬ್ಬನ ಆತ್ಮಹತ್ಯೆ ಪ್ರಕರಣ ಲಕ್ಷ್ಮೀಪುರದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಿಸಿದೆ. ಕಳೆದ ರಾತ್ರಿಯ ಉದ್ವಿಗ್ನ ಪರಿಸ್ಥಿತಿ ನಂತರ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇದೆ.

ಪೊಲೀಸ್ ಸರ್ಪಗಾವಲಿನಲ್ಲಿ ಮೃತ ಪ್ರದೀಪ್ ಅಂತ್ಯಕ್ರಿಯೆ ಚಾಮರಾಜಪೇಟೆ ಚಿತಾಗಾರದಲ್ಲಿ ಭಾನುವಾರ ನಡೆಯಲಿದೆ.

ಪೊಲೀಸ್ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾದ 24 ವರ್ಷ ವಯಸ್ಸಿನ ಪ್ರದೀಪನ ಸಾವಿನಿಂದ ಗವಿಪುರಂ, ಲಕ್ಷ್ಮೀಪುರ ಪ್ರದೇಶದಲ್ಲಿ ಸೂತಕ ಛಾಯೆ ಆವರಿಸಿದೆ. ಮೃತವ್ಯಕ್ತಿಯ ಶವದ ಮರಣೋತ್ತರ ಪರೀಕ್ಷೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಭಾನುವಾರ ಮುಕ್ತಾಯವಾಗಿದೆ.

ಪೊಲೀಸ್ ಬಂದೋ ಬಸ್ತ್: ಪ್ರದೀಪ್ ಸಾವಿನ ನಂತರ ಶನಿವಾರ ರಾತ್ರಿ ಪೊಲೀಸ್ ಹಾಗೂ ಸ್ಥಳೀಯರ ನಡುವೆ ಮಾರಾಮಾರಿ ನಡೆದಿತ್ತು. ಪ್ರದೀಪ್ ಗೆ ಕಿರುಕುಳ ನೀಡಿದ ಕೆಂಪೇಗೌಡ ನಗರ ಠಾಣೆಯ ಇನ್ಸ್ ಪೆಕ್ಟರ್ ನಾಗರಾಜ್ ಅವರ ಅಮಾನತಿಗೆ ಆಗ್ರಹಿಸಲಾಗಿತ್ತು. ಎಎಸ್ ಐ ಹಾಗೂ ಪೇದೆಯೊಬ್ಬರ ಮೇಲೆ ಹಲ್ಲೆ ನಡೆಸಲಾಯಿತು, ಪೊಲೀಸ್ ಗಸ್ತು ವಾಹನ ಚೀತಾಗೆ ಬೆಂಕಿ ಹಚ್ಚಲಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪೊಲೀಸರು ಲಾಠಿ ಪ್ರಹಾರ ಮಾಡಿದ್ದರು.

South Bangalore tense after youngster commits suicide following alleged police harassment

ಸಸ್ಪೆಂಡ್ ಸುದ್ದಿಗಾಗಿ ಕಾದಿದ್ದರು: ಲಕ್ಷ್ಮೀಪುರದ 4ನೇ ಅಡ್ಡರಸ್ತೆ ನಿವಾಸ್ ಹಿರಣ್ಣಯ್ಯ ಎಂಬುವರ ಪುತ್ರ ಪ್ರದೀಪ್ ಗೆ ಕಿರುಕುಳ ನೀಡಿದ ಎಸ್ ಐ ನಾಗರಾಜ್ ಅವರನ್ನು ಸಸ್ಪೆಂಡ್ ಮಾಡುವ ತನಕ ಪ್ರದೀಪ್ ಶವವನ್ನು ನೇಣಿನ ಕುಣಿಕೆಯಿಂದ ಕೆಳಗಿಳಿಸಿರಲಿಲ್ಲ.

ಪಂಚನಾಮೆ ನಡೆಸಲು ಸ್ಥಳೀಯಕ್ಕೆ ಆಗಮಿಸಿದ ಪೊಲೀಸರಿಗೆ ಘೆರಾವ್ ಹಾಕಲಾಯಿತು. ಕೊನೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ಮೇಲೆ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಯಿತು.

ಸಾವಿಗೆ ಕಾರಣವೇನು? : ಲಕ್ಷ್ಮಿಪುರದ ಬಾಡಿಗೆ ಮನೆಯಲ್ಲಿ ವಾಸವಿದ್ದವರಿಗೆ ಕಸ ಹಾಕಬೇಡಿ ಎಂದು ಪ್ರದೀಪ್ ಬುದ್ಧಿ ಹೇಳಿ ಬಂದಿದ್ದ. ಆದರೆ, ಆ ಮನೆಯಲ್ಲಿದ್ದಾಕೆ ಪ್ರದೀಪ್ ವಿರುದ್ಧ ಲೈಂಗಿಕ ಕಿರುಕುಳ ದೂರನ್ನು ನೀಡಿದ್ದಾರೆ.

ಪ್ರದೀಪ್ ನನ್ನು ಠಾಣೆಗೆ ಕರೆದೊಯ್ದ ಪೊಲೀಸರು ಹಿಂದೆ ಮುಂದೆ ವಿಚಾರಿಸದೆ ಏಕಾ ಏಕಿ ಬಾರಿಸಿದ್ದಾರೆ. ಎಫ್ ಐಆರ್ ಕೂಡಾ ದಾಖಲಿಸದೆ ಎರಡು ದಿನ ಠಾಣೆಯಲ್ಲಿಟ್ಟುಕೊಂಡು ಚಿತ್ರಹಿಂಸೆ ನೀಡಿದ್ದಾರೆ. ಪ್ರದೀಪ್ ಬಿಡುಗಡೆಗಾಗಿ ಠಾಣಾಧಿಕಾರಿ ನಾಗರಾಜ್ ಅವರು ಲಂಚ ಕೇಳಿದ್ದಾರೆ. 80 ಸಾವಿರ ರು.ನಿಂದ 15 ಸಾವಿರ ರು. ತನಕ ಡೀಲಿಂಗ್ ಮಾಡಿ ಕೊನೆಗೆ ಪ್ರದೀಪ್ ನನ್ನು ಬಿಟ್ಟಿದ್ದಾರೆ.

ಆದರೆ, ನಿನ್ನ ಮೇಲೆ ರೇಪ್ ಕೇಸ್, ಗೂಂಡಾ ಕಾಯ್ದೆ ಹಾಕುತ್ತೇನೆ ಎಂದು ನಾಗರಾಜ್ ಹೆದರಿಸಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಪ್ರದೀಪ್ ನೇಣಿಗೆ ಶರಣಾಗಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+