ಚರ್ಚ್‌ಗೆ ಪ್ರಾರ್ಥನೆಗೆಂದು ತೆರಳಿದ್ದ ಯುವಕ ಹೆಣವಾಗಿ ಬಂದ
ಬೆಂಗಳೂರು, ಡಿಸೆಂಬರ್ 28: ಚರ್ಚ್‌ಗೆ ಪ್ರಾರ್ಥನೆಗೆಂದು ತೆರಳಿದವ ಹೆಣವಾಗಿ ಬಂದ ಘಟನೆ ಬೆಂಗಳೂರಲ್ಲಿ ನಡೆದಿದೆ.
ಜಗದೀಶ್ ಮೃತರು, ರಾತ್ರಿ ಚರ್ಚ್‌ಗೆ ತೆರಳಿದ್ದ ಈತ ಮಧ್ಯರಾತ್ರಿಯಾದರೂ ಮನೆಗೆ ಬಾರದಿದ್ದ ಕಾರಣ ಕುಟುಂಬದವರು ಆತನನ್ನು ಹುಡುಕಿಕೊಂಡು ಹೋಗಿದ್ದಾರೆ, ಚರ್ಚ್‌ನ ಸ್ವಲ್ಪವೇ ದೂರದಲ್ಲಿ ಜಗದೀಶ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದ್ದು, ಬಳಿಕ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ಅಷ್ಟರೊಳಗೆ ಆತನ ಪ್ರಾಣಪಕ್ಷಿ ಹೋಗಿತ್ತು.

ಜಗದೀಶ್ ಮದ್ಯಪಾನ ಮಾಡಿದ್ದ, ಆತನಿಗೆ ಪರಿಚಯಸ್ಥನಾಗಿದ್ದ ಅರುಣ್ ಎಂಬುವವನ ಜೊತೆ ವಾದವಾಗಿದೆ, ಜಗಳ ವಿಕೋಪಕ್ಕೆ ತೆರಳಿ ಅಲ್ಲೇ ಇದ್ದ ರಾಡ್‌ನಿಂದ ಅರುಣ್ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆ ಬಳಿಕ ಅರುಣ್ ಪರಾರಿಯಾಗಿದ್ದಾನೆ. ಡಿಜೆ ಹಳ್ಳಿ ಪೊಲೀಸರು ಈಗಾಗಲೇ ಅರುಣ್ ಸೇರಿ ನಾಲ್ಕು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications