ಚಾಲಾಕಿ ಯುವತಿ ತನ್ನ ಗೆಳತಿಯರನ್ನೇ ದರೋಡೆ ಮಾಡಿ ಸಿಕ್ಕಿಬಿದ್ಲು!
ಬೆಂಗಳೂರು, ಅಕ್ಟೋಬರ್ 23: ಇದೇನಿದು ವಿಚಿತ್ರ, ಪ್ರಾಣಸ್ನೇಹಿತೆ ಎಂದೆಲ್ಲಾ ಮಾತಾಡುವವರು, ಸ್ನೇಹಿತೆಯರನ್ನೇ ದರೋಡೆ ಮಾಡೋದೆ, ಹೌದು ಇದು ವಿಚಿತ್ರವಾದರೂ ಸತ್ಯಯುವತಿಯೊಬ್ಬಳು ತನ್ನ ಸ್ನೇಹಿತೆಯರನ್ನೇ ದರೋಡೆ ಮಾಡಿ ಇದೀಗ ಪೊಲೀಸರಿಗೆ ಅತಿಥಿಯಾಗಿದ್ದಾಳೆ.
ಭಾರತ್ ಬಂದ್ ಇರುವುದರಿಂದ ಹೊರಗಡೆ ಎಲ್ಲೂ ಹೋಗಲು ಸಾಧ್ಯವಿಲ್ಲ ನಿಮ್ಮ ಮನೆಯಲ್ಲೇ ಊಟ ಮಾಡೋಣ ಎಂದು ಹೇಳಿ ಸ್ನೇಹಿತೆಯ ಮನೆಗೆ ಹೋದವಳು ಎಲ್ಲವನ್ನೂ ದರೋಡೆ ಮಾಡಿದ್ದಾಳೆ. ಇದೀಗ ಸ್ನೇಹಿತರನ್ನೂ ನಂಬದಂತಹ ಸಮಾಜ ನಿರ್ಮಾಣವಾಗಿದೆ.
ಎಲ್ಲರೂ ಸೇರಿ ಊಟ ಮಾಡುತ್ತಿದ್ದಾಗ ತನ್ನ ಗ್ಯಾಂಕ್ ಕರೆಸಿ ದರೋಡೆ ಮಾಡಿಸಿದ್ದಾಳೆ. ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದ ಕೆಎಸ್ ಆರ್‌ಟಿಸಿ ಲೇಔಟ್ ನಿವಾಸಿ ಅಶ್ವಿನಿ ಬಿಜಿ ಅಲಿಯಾಸ್ ಜಾಹ್ನವಿ ದರೋಡೆಯ ಕಿಂಗ್ ಪಿನ್, ದರೋಡೆಗೆ ಒಳಗಾಗಿದ್ದ ಈಕೆಯ ಗೆಳತಿಯರಾದ ರಂಜಿತಾ ಮತ್ತು ಸವಿತಾ ನೀಡಿದ್ದ ದೂರಿನ ಮೇರೆಗೆ ಮೈಕೊಲೇಔಟ್ ಠಾಣೆ ಪೊಲೀಸರು ದೂರು ದಾಖಲಿಸಿದ್ದಾರೆ.

ಪ್ರಕರಣವನ್ನು ಬೇಧಿಸಿರುವ ಪೊಲೀಸರು ಅಶ್ವಿನಿಯ ಸಹಚರರಾದ ಕಾಮಾಕ್ಷಿಪಾಳ್ಯದ ನಿವಾಸಿ ಎನ್ ಸ್ವಾಮಿ, ಪ್ರದೀಪ್ ಕುಮಾರ್ ಸೇರಿದಂತೆ ಅನೇಕರನ್ನಯ ಬಂಧಿಸಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದಾಗ ಕೃತ್ಯ ಪರಿಷಯಸ್ಥರಿಂದಲೇ ನಡೆದಿದೆ ಎನ್ನುವುದು ಮನವರಿಕೆಯಾಗಿತ್ತು. ಈ ಬಗ್ಗೆ ರಂಜಿತಾ ಅವರನ್ನು ಹಲವು ಬಾರಿ ಪ್ರಶ್ನಿಸಿದ್ದರು.
ಆದರೂ ಆಕೆಗೆ ಯಾರ ಮೇಲೂ ಅನುಮಾನ ಬಂದಿರಲಿಲ್ಲ ಆದರೆ ಜಾಹ್ನವಿಯನ್ನು ಪ್ರಶ್ನಿಸಿದಾಗ ಈಕೆ ನಡೆದುಕೊಂಡ ರೀತಿ ಮತ್ತು ಅತಿಯಾಗಿ ಮಾತನಾಡುತ್ತಿದುದನ್ನು ಗಮನಿಸಿದ ಪೊಲೀಸರಿಗೆ ಅನುಮಾನ ಹೆಚ್ಚಾಗಿತ್ತು.
ತಾನು ರಂಜಿತಾಳ ಬೆಸ್ಟ್‌ಫ್ರೆಂಡ್, ಆಕೆಯ ಎಲ್ಲಾ ಕಷ್ಟ ಸುಖಕ್ಕೆ ಆಗಿದ್ದೇನೆ ಎಂದೆಲ್ಲಾ ಅತಿಯಾಗಿ ಮಾತನಾಡಿದ ಕಾರಣ, ಆಕೆಯ ಮೊಬೈಲ್ ಕರೆಗಳ ದಾಖಲೆಗಳನ್ನು ವೀಕ್ಷಿಸಿದಾಗ ಒಂದೇ ನಂಬರ್‌ನಿಂದ ಪದೇ ಪದೇ ಕರೆ ಬಂದಿರುವುದು ತಿಳಿಸಿದೆ. ಆ ನಂಬರ್ ಬೆನ್ನತ್ತಿದಾಗ ಸತ್ಯ ಬಲಯಾಗಿದೆ.
-
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ವಲಸೆ ಕಾರ್ಮಿಕರಿಂದಾಗಿ ಉದ್ಯೋಗ ನಷ್ಟವಾಗುತ್ತಿರುವ ಬಗ್ಗೆ ಅಧಿಕೃತ ದೂರು ಸಲ್ಲಿಕೆಯಾಗಿಲ್ಲ: ಕಾರ್ಮಿಕ ಇಲಾಖೆ ಸ್ಪಷ್ಟನೆ -
ಯುಗಾದಿ, ರಂಜಾನ್ ಹಬ್ಬಕ್ಕೆ 2000 ವಿಶೇಷ ಬಸ್: ಮುಂಗಡ ಟಿಕೆಟ್ ಗೆ ರಿಯಾಯ್ತಿ ಘೋಷಿಸಿದ KSRTC -
Viral Video : ವೃದ್ಧೆಯನ್ನು ಬೆಚ್ಚಿಬೀಳಿಸಿದ ಯಂತ್ರ; ರಸ್ತೆಯಲ್ಲಿದ್ದ ರೋಬೋಟ್ ಅನ್ನು ವಶಕ್ಕೆ ಪಡೆದ ಪೊಲೀಸರು -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು












Click it and Unblock the Notifications