'ನನ್ನ ಮನೆ ಬಾಗಿಲಿನಲ್ಲಿ ನಿಂತು ರಾಜಕೀಯ ಕಲಿತವರು ಯೋಗೇಶ್ವರ್'
ಬೆಂಗಳೂರು, ಫೆಬ್ರವರಿ 5: ಸಿಪಿ ಯೋಗೇಶ್ವರ್ ನನ್ನ ಮನೆಯ ಬಾಗಿಲಲ್ಲಿ ನಿಂತು ರಾಜಕೀಯ ಕಲಿತವನು ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಯೋಗೇಶ್ವರ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಸಚಿವ ಬಿಜೆಪಿಯ ಸಿ.ಪಿ.ಯೋಗೇಶ್ವರ್ ನನ್ನ ಮನೆ ಬಾಗಿಲ ಮುಂದೆ ಕಾಯುತ್ತಿದ್ದವರು. ಅವರ ರಾಜಕೀಯ ಆರಂಭವಾಗಿದ್ದೇ ನನ್ನ ಮನೆಯಿಂದ" ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ ನನ್ನ ಶುಭಾಕಾಂಕ್ಷಿ ಎಂದು ನಾನು ಹೇಳುವುದಿಲ್ಲವಾದರೂ ಆತ ನನ್ನ ಮನೆ ಮುಂದೆ ನಿಂತೇ ರಾಜಕೀಯ ಕಲಿತ ಎಂದು ಸೂಚ್ಯವಾಗಿ ಹೇಳಿದರು.

ಸಂಪುಟದಲ್ಲಿ ಸಿ.ಪಿ.ಯೋಗೇಶ್ವರ್‌ಗೂ ಸ್ಥಾನಮಾನ ವಿಚಾರವಾಗಿ ಕಿಡಿಕಾರಿದ ಶಿವಕುಮಾರ್, ನನ್ನ ಬಗ್ಗೆ ಹಗುರವಾಗಿ ಮಾತನಾಡುವ ಯೋಗೇಶ್ವರ್ ಬಿಜೆಪಿಗೆ ಸದನದಲ್ಲಿ ದಾಖಲೆ ಸಹಿತ ಉತ್ತರಿಸಿ ತಿರುಗೇಟು ನೀಡುತ್ತೇನೆ ಎಂದರು.












Click it and Unblock the Notifications