ಬೆಂಗಳೂರು : ಯಲಹಂಕ ಓಲ್ಡ್ ಟೌನ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ಹತ್ಯೆ
ಬೆಂಗಳೂರು, ಸೆಪ್ಟೆಂಬರ್ 24 : ಬೆಂಗಳೂರಿನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನನ್ನು ಹತ್ಯೆ ಮಾಡಲಾಗಿದೆ. ಯಲಹಂಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಭಾನುವಾರ ತಡರಾತ್ರಿ ಯಲಹಂಕ ಓಲ್ಡ್ ಟೌನ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರುಣ್ ಕುಮಾರ್ ಹತ್ಯೆ ಮಾಡಲಾಗಿದೆ. ಅಲ್ಲಾಳಸಂದ್ರ ಗೇಟ್ ಬಳಿ ಐದು ಜನ ದುಷ್ಕರ್ಮಿಗಳ ತಂಡ ಅರುಣ್ ಕುಮಾರ್ ಹತ್ಯೆ ಮಾಡಿ ಪರಾರಿಯಾಗಿದೆ.
ಐದು ಜನರಿದ್ದ ತಂಡ ಮಾರಕಾಸ್ತ್ರಗಳಿಂದ ಅರುಣ್ ಕುಮಾರ್ ಅವರನ್ನು ಕೊಚ್ಚಿ ಕೊಲೆ ಮಾಡಿದೆ. ರಾಜಕೀಯ ವೈಷಮ್ಯದ ಹಿನ್ನಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಅಲ್ಲಾಳಸಂದ್ರ ಗೇಟ್ ಬಳಿ ಅರುಣ್ ಕುಮಾರ್ ಅವರು ಸ್ನೇಹಿತರನ್ನು ಡ್ರಾಪ್ ಮಾಡಿ ವಾಪಸ್ ಹೋಗುವಾಗ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ತಕ್ಷಣ ಅವರು ಗ್ರಾನೈಟ್ ಅಂಗಡಿಗೆ ನುಗ್ಗಿ ಜೀವ ಉಳಿಸಿಕೊಳ್ಳಲು ಪ್ರಯತ್ನ ನಡೆಸಿದರು. ಆದರೆ, ಸಾಧ್ಯವಾಗಿಲ್ಲ.

ಯಲಹಂಕ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications