ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಡಿಯೂರಪ್ಪ ಎರಡು ನಾಲಿಗೆಯ ರಾಜಕಾರಣಿ: ಉಗ್ರಪ್ಪ ಕಟು ಟೀಕೆ

|
Google Oneindia Kannada News

ಬೆಂಗಳೂರು, ನವೆಂಬರ್ 4: ಮೊದಲು ಮಾತನಾಡಿದ್ದು ತಾವೇ ಒಪ್ಪಿಕೊಂಡ ಯಡಿಯೂರಪ್ಪ, ಈಗ ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತಿದ್ದಾರೆ ಯಡಿಯೂರಪ್ಪ ಅವರು ಎರಡು ನಾಲಿಗೆ ರಾಜಕಾರಣಿ ಎಂದು ಕಾಂಗ್ರೆಸ್ ಹಿರಿಯ ನಾಯಕ ವಿ.ಎಸ್. ಉಗ್ರಪ್ಪ ಟೀಕಿಸಿದ್ದಾರೆ.

ಬಿಜೆಪಿ ಮುಖಂಡರು ಹತಾಶರಾಗಿ ಒಬ್ಬರ ಮೇಲೊಬ್ಬರು ಮಾತನಾಡುತ್ತಿದ್ದಾರೆ. ಇವರೆಲ್ಲರಿಗೂ ಬುದ್ಧಿಯ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ, ಯಡಿಯೂರಪ್ಪ ಅವರಿಂದ ಹಿಡಿದು ಅಶೋಕ್ ವರೆಗೆ ಎಲ್ಲರಿಗೂ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದಿದ್ದಾರೆ.

ನಿಮಗೆ ತಾಕತ್ತಿದ್ರೆ ಚುನಾವಣೆ ಎದುರಿಸಿ: ಸಿದ್ದರಾಮಯ್ಯಗೆ ಬಿಎಸ್‌ವೈ ಸವಾಲುನಿಮಗೆ ತಾಕತ್ತಿದ್ರೆ ಚುನಾವಣೆ ಎದುರಿಸಿ: ಸಿದ್ದರಾಮಯ್ಯಗೆ ಬಿಎಸ್‌ವೈ ಸವಾಲು

ಸುಪ್ರೀಂಕೋರ್ಟ್‌ನಲ್ಲಿ ಸಿಟ್ಟಿಂಗ್ ಜಡ್ಜ್ ಮೂಲಕ ತನಿಖೆ ನಡೆಸಿ, ಯಡಿಯೂರಪ್ಪ ಅವರಿಗೆ ಪಾಪ ವಯಸ್ಸಾಗಿದೆ. ದೇವರ ಮೇಲೆ ಭಯ ಭಕ್ತಿ ಇರುವ ಯಡಿಯೂರಪ್ಪ ಇದು ತನ್ನ ಧ್ವನಿ ಅಲ್ಲ ಎಂದು ಪ್ರಮಾಣ ಮಾಡಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗುವ ಕನಸು ಕಾಣುವುದರಲ್ಲಿ ತಪ್ಪೇನಿದೆ?

ಸಿದ್ದರಾಮಯ್ಯ ಸಿಎಂ ಆಗುವ ಕನಸು ಕಾಣುವುದರಲ್ಲಿ ತಪ್ಪೇನಿದೆ?

ಸಿದ್ದರಾಮಯ್ಯ ಜನಾದೇಶದಿಂದ ಸಿಎಂ ಆಗಿದ್ದರು, ಆದರೆ ಯಡಿಯೂರಪ್ಪ ಜನಾದೇಶವಿಲ್ಲದೆ ಮುಖ್ಯಮಂತ್ರಿಯಾಗಿದ್ದಾರೆ., ಯಡಿಯೂರಪ್ಪಗೆ ಒಂದು ನಾಲಿಗೆಯಾ, ಎರಡು ನಾಲಿಗೆಯಾ ಎಂದು ಪ್ರಶ್ನಿಸಿದ್ದಾರೆ.

ಯಡಿಯೂರಪ್ಪ ಆಡಿಯೋ ಆಂತರಿಕ ತನಿಖೆಗೆ ಆದೇಶ

ಯಡಿಯೂರಪ್ಪ ಆಡಿಯೋ ಆಂತರಿಕ ತನಿಖೆಗೆ ಆದೇಶ

ಯಡಿಯೂರಪ್ಪ ಆಡಿಯೋ ಆಂತರಿಕ ತನಿಖೆಗೆ ಆದೇಶಿಸಿದ್ದಾರೆ. ಆ ಮೂಲಕ ತಮ್ಮ ಸಭೆಯಲ್ಲೇ ಈ ಮಾತುಗಳು ಹೇಳಿದ್ದು ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಬಿಜೆಪಿ ಮುಖಂಡರುಗಳಿಗೆ ಸಾಮೂಹಿಕ ಸನ್ನಿ ಹಿಡಿದಂತೆ ಕಾಣುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಸಭೆಯಲ್ಲಿ ಇದ್ದವರೆಲ್ಲಾ ಬಿಜೆಪಿಯವರೇ

ಸಭೆಯಲ್ಲಿ ಇದ್ದವರೆಲ್ಲಾ ಬಿಜೆಪಿಯವರೇ

ಆಡಿಯೋ ಬರುವಂತೆ ನೋಡಿಕೊಂಡವರು ಸಿದ್ದರಾಮಯ್ಯ ಎಂಬ ಆರೋಪವಿದೆ, ಆ ಸಭೆಯಲ್ಲಿ ಇದ್ದವರೆಲ್ಲಾ ಬಿಜೆಪಿಯವರೇ, ಆ ಸಭೆಯಗೆ ಬೇರೆಯವರಿಗೆ ಅವಕಾಶ ಕೊಡ್ತಾರಾ, ಹೋಗ್ಲಿ ಮೀಡಿಯಾಗಳಿಗಾದ್ರು ಆವಕಾಶ ನೀಡಿದ್ದಾರಾ ಎಂದು ಪ್ರಶ್ನಿಸಿದರು. ಅಲ್ಲಿದ್ದವರೆಲ್ಲ ಬಿಜೆಪಿ ಮುಖಂಡರೇ, ಕಟೀಲು ಅವರೇ ನಿಮಗೆ ಗೊತ್ತಿಲ್ವಾ ಎಂದಿದ್ದಾರೆ.

ಯಡಿಯೂರಪ್ಪ ತಾಕತ್ತಿದ್ದರೆ ಸಿದ್ದಲಿಂಗೇಶ್ವರನ ಮೇಲೆ ಆಣೆ ಮಾಡ್ತೀರಾ?

ಯಡಿಯೂರಪ್ಪ ತಾಕತ್ತಿದ್ದರೆ ಸಿದ್ದಲಿಂಗೇಶ್ವರನ ಮೇಲೆ ಆಣೆ ಮಾಡ್ತೀರಾ?

ಯಡಿಯೂರಪಪ್ ನಿಮಗೆ ತಾಕತ್ತಿದ್ದರೆ ಆಪರೇಷನ್ ಆಡಿಯೋ ಬಗ್ಗೆ ತನಿಖೆ ಮಾಡಿಸಿ, ನೀವು ಆ ರೀತಿ ಹೇಳಿಲ್ಲ ಎಂದು ಸಿದ್ದಲೀಮಗೇಶ್ವರನ ಮೇಲೆ ಪ್ರಮಾಣ ಮಾಡುತ್ತೀರಾ, ಅಮಿತ್ ಶಾ ಇದರಲ್ಲಿ ಭಾಗಿಯಾಗಿಲ್ಲ ಎಂದು ಪ್ರಮಾಣ ಮಾಡಿ ಎಂದಿದ್ದಾರೆ.

English summary
Congress Leader V.S. Ugrappa said that, Chief Minister Yediyurappa confesses About Audio now speaks against Siddaramaiah, Yediyurappa Is A Two Tongue Politician.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X