ಲೈಂಗಿಕ ಆರೋಪ ಪ್ರಕರಣ: ಯಾದಗಿರಿ ಸ್ವಾಮೀಜಿ ಪೀಠ ತ್ಯಾಗಕ್ಕೆ ನಿರ್ಧಾರ
Recommended Video
ಬೆಂಗಳೂರು, ಸೆಪ್ಟೆಂಬರ್ 18: ಯುವತಿಗೆ ಲೈಂಗಿಕ ಪ್ರಕರಣ ಆರೋಪ ಬರುತ್ತಿದ್ದಂತೆ ಯಾದಗಿರಿ ಕಣ್ವ ಮಠದ ಸ್ವಾಮೀಜಿ ಪೀಠತ್ಯಾಗಕ್ಕೆ ಮುಂದಾಗಿದ್ದಾರೆ.
ಯಾದಗಿರಿಯ ಪ್ರತಿಷ್ಠಿತ ಕಣ್ವ ಮಠದ ಸ್ವಾಮೀಜಿ ವಿದ್ಯಾವಾರಿಧಿ ತೀರ್ಥ ಅವರ ವಿಡಿಯೋ, ಚಾಟ್‌ಗಳು ವೈರಲ್ ಆಗಿವೆ.ವಿದ್ಯಾವಾರಿಧಿ ಸ್ವಾಮೀಜಿ ಹನಿಟ್ರ್ಯಾಪ್ನಲ್ಲಿ ಸಿಕ್ಕಿಬಿದ್ದಿದ್ದಾರೆ. ಪ್ರಕರಣವು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆಯೇ ಸ್ವಾಮೀಜಿ ಪೀಠ ತ್ಯಾಗ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
ಸ್ವಾಮೀಜಿ ಯಾದಗಿರಿಯಲ್ಲಿಲ್ಲ ಬದಲಾಗಿ ಬೆಂಗಳೂರಿನಲ್ಲಿರುವ ಶಾಖಾ ಮಠದಲ್ಲಿ ಚಾತುರ್ಮಾಸ್ಯಕ್ಕೆಂದು ಆಗಮಿಸಿದ್ದಾರೆ. ಇಲ್ಲಿಯೇ ಹನಿಟ್ರ್ಯಾಪ್ ನಡೆದಿದೆ ಎನ್ನಲಾಗಿದೆ. 2014ರಲ್ಲಿ ಕಣ್ವ ಮಠದ ಪೀಠ ಏರಿದ್ದ ವಿದ್ಯಾವಾರಿಧಿ ತೀರ್ಥರ ಬಗ್ಗೆ ಗೊತ್ತಿರುವವರೇ ಈ ಕೆಲಸ ಮಾಡಿದ್ದಾರೆ.

ಸಂಗೀತಾ ಎಂಬ ಈ ಮಹಿಳೆ ಮೂಲಕ ಹನಿಟ್ರ್ಯಾಪ್ ಮಾಡಿಸಿದ್ದಾರೆ. ಈ ಆರೋಪದಿಂದ ಮುಕ್ತವಾಗುವವರೆಗೂ ಧ್ಯಾನದಲ್ಲಿರುತ್ತೇನೆ ಎಂದು ಸ್ವಾಮೀಜಿ ತಿಳಿಸಿದ್ದಾರೆ. ಸ್ವಾಮೀಜಿ ಜೊತೆ ಮಹಿಳೆ ಸ್ನೇಹ ಬೆಳೆಸುತ್ತಾಳೆ. ಇಬ್ಬರ ಸ್ನೇಹವು ಕಾಮಕ್ಕೆ ತಿರುಗಿ ಮೊಬೈಲ್ ಮೂಲಕ ಅಶ್ಲೀಲ ಸಂದೇಶ, ಸಂಭಾಷಣೆಗಳು ವಿನಿಮಯವಾಗುತ್ತದೆ.
ವಿಡಿಯೋ ಕಾಲ್ ಮೂಲಕವೂ ಇಬ್ಬರೂ ಚಾಟಿಂಗ್ ಮಾಡುತ್ತಾರೆ. ಇವೆಲ್ಲವನ್ನೂ ಆ ಮಹಿಳೆ ರೆಕಾರ್ಡ್ ಮಾಡಿಕೊಂಡಿದ್ದಾಳೆ ಇದೀಗ ಸ್ವಾಮೀಜಿ ಪೀಠಕ್ಕೆ ಅದು ಕುತ್ತು ತಂದಿದೆ.












Click it and Unblock the Notifications