ಟಿಸಿಎಸ್ ವಿಶ್ವ 10ಕೆ ಬೆಂಗಳೂರಿನಿಂದ ಧನಸಹಾಯ 5.29 ಕೋಟಿಗೆ ಏರಿಕೆ
ಬೆಂಗಳೂರು, ಜು.7: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ವಿಶ್ವ 10ಕೆ, ವಿಶ್ವ ಪ್ರೀಮಿಯರ್ 10ಕೆ, ಲೋಕೊಪಾಕಾರ ಪಾಲುದಾರ ಇಂಡಿಯಾ ಕೇರ್ಸ್ ಫೌಂಡೇಷನ್ ಜತೆ 2018ರ ಆವೃತ್ತಿಯಲ್ಲಿ 5.29 ಕೋಟಿ ರೂ. ಧನಸಾಹಯ ಸಂಗ್ರಹಿಸುವ ಮೂಲಕ ಭಾರತದಲ್ಲೇ ದತ್ತಿ ನಿಧಿ ಸಂಗ್ರಹಿಸುವ ಅತಿದೊಡ್ಡ ಕೂಟವಾಗಿ ಮುಂದುವರಿದಿದೆ.
ಟಿಸಿಎಸ್ 10ಕೆ ನೋಂದಣಿಗೆ ಚಾಲನೆ, ಮೇ 21ಕ್ಕೆ ಓಟ
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕೂಟದಲ್ಲಿ ಸುಮಾರು 24,000 ಜನರು ಪಾಲ್ಗೊಂಡಿದ್ದರು. ಉತ್ಸಾಹಿ ರನ್ನರ್‌ಗಳಿಂದ ಸಂಗ್ರಹಿಸಲಾದ ನಿಧಿಯನ್ನು 82 ನಾಗರಿಕ ಸಮಾಜ ಸಂಸ್ಥೆಗಳು(ಸಿಎಸ್‌ಒ) ಫಲಾನುಭವ ಪಡೆಯಲಿವೆ. ಮಕ್ಕಳ ಶಿಕ್ಷಣ, ಮಹಿಳಾ ಸಬಲೀಕರಣ, ವಿಶೇಷ ಚೇತನರಿಗೆ ನೆರವು, ಅರಣ್ಯನಾಶ ತಡೆಗಟ್ಟುವಿಕೆ, ನೀರಿನ ಸಂರಕ್ಷಣೆ ಮತ್ತು ಹಿರಿಯರಿಗೆ ಹಾಗೂ ಇತರ ಕಾರಣಗಳಿಗೆ ಈ ನಿಧಿ ಬಳಕೆಯಾಗಲಿದೆ.

ದೇಶದಲ್ಲಿರುವ ಸಿಎಸ್‌ಒಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ದತ್ತಿ ನಿಧಿ ಸಂಗ್ರಹದ ಹೆಚ್ಚಳ ಪರಿಣಾಮ ಬೀರಲಿದೆ. ಆಸಕ್ತಿದಾಯಕ ವಿಷಯ ಎಂದರೆ 2018ರ ಆವೃತ್ತಿಯಲ್ಲಿ ಎರಡು ಅಗ್ರಮಾನ್ಯ ಸಿಎಸ್‌ಒಗಳು ಕೊಯಮತ್ತೂರು ಮತ್ತು ಮೈಸೂರು ಮೂಲದವಾರಾಗಿದ್ದು, ಬೆಂಗಳೂರು ಓಟದ ನಗರದಿಂದ ಆಚೆಗೆ ಬಂಡವಾಳ ಸಂಗ್ರಹ ಕೇಂದ್ರವನ್ನು ವಿಸ್ತರಿಸಿವೆ.
ಈ ವರ್ಷದ ಪ್ರಮುಖ ಅಂಶಗಳು
* 16 ಸಂಸ್ಥೆಗಳ ಧನಸಾಹಯ 10 ಲಕ್ಷ ರೂ.ಗಿಂತಲೂ ಅಧಿಕ ಏರಿಕೆ.

* ಕೇರ್ ಕಂಪೆನಿ ವಿಭಾಗದಲ್ಲಿ 4 ಮಂದಿಗಳ ಕಳಿಸು ಫೌಂಡೇಷನ್‌ಗೆ 45.16 ಲಕ್ಷ ರೂ. ಏರಿಕೆ. ಇವರು ಮೈಸೂರು ಮತ್ತು ಬೆಂಗಳೂರಿನ ಸರ್ಕಾರಿ ಶಾಲೆಗಳೊಂದಿಗೆ ನೆರವು, ಪ್ರಶಕ್ತ ಶೈಕ್ಷಣಿಕ ವರ್ಷದಲ್ಲಿ 6,500 ಮಕ್ಕಳಿಗೆ ಸಹಾಯ.
* ಅತಿ ಹೆಚ್ಚು ಕೊಡುಗೆ ಸಾಲಿನಲ್ಲಿ ಫಸ್ಟ್ ಅಮೆರಿಕನ್ ಮತ್ತು ಇನ್‌ಫಾರ್ಮೇಟಿಕಾ, ಕಾರ್ಪೊರೇಟ್ ಕೇರ್ಸ್ ವಿಭಾಗದಲ್ಲಿ 33 ಲಕ್ಷ ಕೊಡುಗೆ, ಒಟ್ಟು 11,165,690 ರೂ. ಏರಿಕೆ.
* ಯೂತ್ ಕೇರ್ಸ್ ವಿಭಾಗದಲ್ಲಿ ಚೆರ್ ಯಶ್ ಟ್ರಸ್ಟ್ ಪ್ರತಿನಿಧಿಸಿದ್ದ ಎಥಾನ್ ಮಾರ್ಟಿನ್, ಅಖಿಲಾ ಗೈನೆಡಿ ಮತ್ತು ದರ್ಶನ ಮಡಿವಾಳ ಮೆಟ್ರಿ ಅವರಿಂದ 182,501 ರೂ. ಏರಿಕೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications