ವಿಶ್ವ ಪರಿಸರ ದಿನ: ಬೆಂಗಳೂರು ಹಸಿರೀಕರಣಕ್ಕೆ ಬಿಬಿಎಂಪಿ ನಿರ್ಧಾರ
ಬೆಂಗಳೂರು, ಜೂನ್ 5: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ 'ವಿಶ್ವ ಪರಿಸರ ದಿನಾದಚರಣೆ' ಕಾರ್ಯಕ್ರಮಕ್ಕೆ ಆಡಳಿತಗಾರರಾದ ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಸಿಗಳನ್ನು ನೆಡುವ ಮೂಲಕ ಚಾಲನೆ ನೀಡಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅರಣ್ಯ ಘಟಕದ ವತಿಯಿಂದ ಬೆಂಗಳೂರು ನಗರ ಹಸಿರೀಕರಣಕ್ಕೆ ಹಾಗೂ ಉದ್ಯಾನನಗರಿ ಎಂಬ ಖ್ಯಾತಿಯನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಈ ಕೆಳಕಂಡ ಅರಣ್ಯೀಕರಣ ಕಾರ್ಯಕ್ರಮಗಳನ್ನು ಕಳೆದ 2021-22 ಮತ್ತು 2022-23ನೇ ಸಾಲಿನಿಂದ ನಿರ್ವಹಿಸಲಾಗುತ್ತಿದೆ.
ಪಾಲಿಕೆಯ ಅರಣ್ಯ ಘಟಕದ ಅಧೀನದಲ್ಲಿ ಒಟ್ಟು 16 ಸಸ್ಯಕ್ಷೇತ್ರಗಳಿದ್ದು, ಸಾರ್ವಜನಿಕರಿಗೆ ಉಚಿತವಾಗಿ ವಿತರಿಸುವ ಸಂಬಂಧ 8x12 ಅಳತೆಯ 5.60 ಲಕ್ಷ ಸಸಿಗಳನ್ನು ಬೆಳೆಸಿ ಪೋಷಣೆ ಮಾಡಲಾಗುತ್ತಿದೆ.

ಉಚಿತವಾಗಿ ಸಸಿಗಳ ವಿತರಣೆ
• ಮಹದೇವಪುರ ವಲಯದ ಕೆಂಪಾಪುರ ಮತ್ತು ದೊಡ್ಡಬಸ್ತಿ ಸಸ್ಯಕ್ಷೇತ್ರ.
• ರಾಜ ರಾಜೇಶ್ವರಿ ನಗರ ವಲಯದ ಜ್ಞಾನಭಾರತಿ ಮತ್ತು ಮಲ್ಲತ್ತಹಳ್ಳಿ ಸಸ್ಯಕ್ಷೇತ್ರ.
• ಬೊಮ್ಮನಹಳ್ಳಿ ವಲಯದ ಕೂಡ್ಲು ಸಸ್ಯಕ್ಷೇತ್ರ.
• ಯಲಹಂಕ ವಲಯದ ಅಟ್ಟೂರು ಸಸ್ಯಕ್ಷೇತ್ರ.
ಕಳೆದ 2021-22ನೇ ಸಾಲಿನಿಂದ ಇಲ್ಲಿಯವರೆಗೆ 1.60 ಲಕ್ಷ ಸಸಿಗಳನ್ನು ಸಾರ್ವಜನಿಕರಿಗೆ ಸಂಘ ಸಂಸ್ಥೆಗಳಿಗೆ ಉಚಿತವಾಗಿ ವಿತರಣೆ ಮಾಡಲಾಗಿರುತ್ತದೆ.

ಸಸ್ಯಕ್ಷೇತ್ರದಲ್ಲಿ ದಾಸ್ತಾನು ಇರುತ್ತದೆ
ಬಿಬಿಎಂಪಿ ವ್ಯಾಪ್ತಿಯ 8 ವಲಯಗಳ ವ್ಯಾಪ್ತಿಯಲ್ಲಿ ಗಿಡಗಳನ್ನು ಬೆಳೆಸಿ ನಿರ್ವಹಣೆ ಮಾಡಲು 10x16 ಅಳತೆಯ 3.00 ಲಕ್ಷ ಸಸಿಗಳು ಪ್ರಸ್ತುತ ಬಿಬಿಎಂಪಿ ಸಸ್ಯಕ್ಷೇತ್ರಗಳಲ್ಲಿ ದಾಸ್ತಾನಿರುತ್ತವೆ.
2022-23ನೇ ಈ ಸಾಲಿನಲ್ಲಿ ಒಟ್ಟು 2.00 ಲಕ್ಷ ಉತ್ತಮ ಜಾತಿಯ ನಗರ ಸೌಂದರ್ಯಕ್ಕೆ ಹಾಗೂ ಹಸಿರೀಕರಣಕ್ಕೆ ಯೋಗ್ಯವಾಗಿರುವ ಸಸಿಗಳನ್ನು ಬೆಳೆಸಿ ನಿರ್ವಹಿಸುವ ಗುರಿ ಹೊಂದಲಾಗಿದೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ.
2022-23ನೇ ಸಾಲಿನಲ್ಲಿ 8X12 ಅಳತೆಯ 5.00 ಲಕ್ಷ ಸಸಿಗಳನ್ನು ಬೆಳೆಸಿ 2023-24ನೇ ಸಾಲಿನಲ್ಲಿ ಸಾರ್ವಜನಿಕರಿಗೆ ವಿತರಣೆ ಮಾಡಲು ಗುರಿ ಹೊಂದಲಾಗಿದೆ. 2023-24ನೇ ಸಾಲಿನಲ್ಲಿ ನೆಡುತೋಪುಗಳನ್ನು ನಿರ್ಮಾಣ ಮಾಡಲು ಈಗಾಗಲೆ 1.00 ಲಕ್ಷ 14X20 ಅಳತೆಯ ಸಸಿಗಳನ್ನು ಬೆಳೆಸಿ ನಿರ್ವಹಣೆ ಮಾಡಲಾಗುತ್ತಿರುತ್ತದೆ.

ಉಚಿತವಾಗಿ ಸಸಿಗಳ ವಿತರಣೆ
ಬಿಬಿಎಂಪಿ ಸಸ್ಯಕ್ಷೇತ್ರಗಳಲ್ಲಿ ಔಷಧೀಯ, ಹೂ ಬಿಡುವ, ಹಣ್ಣು ಬಿಡುವ ಹಾಗೂ ಹೆಚ್ಚಾಗಿ ಆಮ್ಲಜನಕ ಉತ್ಪತ್ತಿ ಮಾಡುವ ಗಿಡಗಳನ್ನು ಬೆಳೆಸಿ ಪೋಷಣೆ ಮಾಡಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮರಗಣತಿ ಕಾರ್ಯವನ್ನು ನಿರ್ವಹಿಸುವ ಸಂಬಂಧ ಜಿಕೆವಿಕೆ, ಬೆಂಗಳೂರು ಇವರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಕಾರ್ಯ ಪ್ರಗತಿಯಲ್ಲಿರುತ್ತದೆ.
ಪಾಲಿಕೆಯ ಅರಣ್ಯ ವಿಭಾಗದ ವಿವಿಧ ವಲಯಗಳ ವ್ಯಾಪ್ತಿಯಲ್ಲಿರುವ ಸಸ್ಯಕ್ಷೇತ್ರಗಳಲ್ಲಿ ವಿವಿಧ ಜಾತಿಯ ಸಸಿಗಳು ಲಭ್ಯವಿದ್ದು, 'ವಿಶ್ವ ಪರಿಸರ ದಿನಾಚರಣೆ' ದಿನದಿಂದ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಗೆ ಉಚಿತವಾಗಿ ಸಸಿಗಳನ್ನು ವಿತರಿಸಲಾಗುವುದು. ಈ ಸಂಬಂಧ ಆಸಕ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸಿ ಉಚಿತವಾಗಿ ಸಸಿಗಳನ್ನು ಪಡೆದುಕೊಂಡು ಸಸಿಗಳನ್ನು ನೆಟ್ಟು ಪೋಷಣೆ ಮಾಡಬಹುದಾಗಿದೆ. ಅಲ್ಲದೆ ಪಾಲಿಕೆ ಕೇಂದ್ರ ಕಛೇರಿ ಡಾ. ರಾಜ್ ಕುಮಾರ್ ಗಾಜಿನ ಮನೆಯಲ್ಲಿ ವಿಶೇಷ ಕೌಂಟರ್ (Special Counter) ಮೂಲಕ ಪ್ರತಿನಿತ್ಯ ವಿವಿಧ ಜಾತಿಯ ಸಸಿಗಳನ್ನು ವಿತರಿಸಲಾಗುತ್ತದೆ.

ಸಸ್ಯಕ್ಷೇತ್ರಗಳ ವಿವರ
1. ಕೂಡ್ಲು - 7019196107
2. ಅಟ್ಟೂರು - 9480685196
3. ಜ್ಞಾನಭಾರತಿ ಆವರಣ - 9164042566
4. ಮಲ್ಲತ್ತಹಳ್ಳಿ - 9164042566
5. ಕೆಂಪಾಪುರ - 9480685196
6. ದೊಡ್ಡಬಸ್ತಿ - 9480685196
7. ಡಾ. ರಾಜ್ ಕುಮಾರ್ ಗಾಜಿನ ಮನೆ, ಪಾಲಿಕೆ ಕೇಂದ್ರ ಕಛೇರಿ ಆವರಣ - 9480683341
ಈ ನಂಬರ್‌ಗಳಿಗೆ ಕರೆಯನ್ನು ಮಾಡಿವ ಮೂಲಕ ಪಾಲಿಕೆಯಿಂದ ಸಾರ್ವಜನಿಕರು ಉಚಿತವಾಗಿ ಸಸ್ಯಗಳನ್ನು ಪಡೆಯಬಹುದಾಗಿದೆ. ಈ ವೇಳೆ ಅರಣ್ಯ ವಿಭಾಗದ ವಿಶೇಷ ಆಯುಕ್ತರಾದ ರಾಮ್ ಪ್ರಸಾತ್ ಮನೋಹರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸರಿನಾ ಸಿಕ್ಕಲಿಗರ್, ಪಶ್ಚಿಮ ವಲಯ ಜಂಟಿ ಆಯುಕ್ತರಾದ ಶ್ರೀನಿವಾಸ್, ತೋಟಗಾರಿಕಾ ಉಪ ನಿರ್ದೇಶಕರಾದ ಚಂದ್ರಶೇಖರ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
GBA: ಜಿಬಿಎ ವ್ಯಾಪ್ತಿಯಲ್ಲಿ ಪೂರ್ವ ಮುಂಗಾರು ಮಳೆಯ ಪೂರ್ವ ಸಿದ್ಧತೆಗೆ ಕ್ರಮ: ಮಹೇಶ್ವರ್ ರಾವ್ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ












Click it and Unblock the Notifications