ತಿಲಕವಿಟ್ಟವರೆಂದರೆ ಭಯ: ಸಿದ್ದರಾಮಯ್ಯಗೆ ಮಹಿಳೆಯರಿಂದ ಭರ್ಜರಿ ಗಿಫ್ಟ್
Recommended Video

ಬೆಂಗಳೂರು, ಮಾರ್ಚ್ 8: ಮಹಿಳಾ ದಿನದಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಹಿಳೆಯರಿಂದ ವಿಶೇಷ ಉಡುಗೊರೆ ದೊರೆತಿದೆ.
ಹಣೆಯ ಮೇಲೆ ತಿಲಕವನ್ನಿಟ್ಟುಕೊಂಡವರನ್ನು ನೋಡಿದರೆ ಭಯವಾಗುತ್ತದೆ ಎಂದು ಹೇಳಿಕೆ ನೀಡಿರುವ ಕಾರಣ ಮಹಿಳೆಯರು ವಿಶೇಷ ಉಡುಗೊರೆ ನೀಡಿದ್ದಾರೆ. ಒಂದು ಡಬ್ಬಿ ಕುಂಕುಮ ಹಾಗೂ ತಿಲಕದ ಮಹತ್ವ ಸಾರುವ ಪುಸ್ತಕವನ್ನು ರಣರಾಗಿಣಿ ಎನ್ನುವ ಟೀಮ ಸಿದ್ದರಾಮಯ್ಯ ಅವರಿಗೆ ಕೊರಿಯರ್ ಮಾಡಿದೆ.
ಸಿದ್ದರಾಮಯ್ಯನವರ ಪತ್ನಿಗೆ ಕೇಳಿದರೆ ಕುಂಕುಮದ ಮಹತ್ವ ಹೇಳುತ್ತಾರೆ. ಅವರು ತಿಲಕ ಹಾಕಲ್ಲವೆ ಎಂದು ಟಾಂಗ್ ಕೊಟ್ಟಿದ್ದಾರೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸೆಲ್ಫಿ ವಿತ್ ತಿಲಕ ಕೂಡ ಟ್ರೆಂಡ್ ಸೃಷ್ಟಿಸಿದೆ.

ಸಿದ್ದರಾಮಯ್ಯ ತನ್ನ ಟ್ವಿಟ್ಟರಿನಲ್ಲಿ, ಬಿಜೆಪಿಯಯವರು ಕುಂಕುಮ ನಾಮ, ಖಾವಿ ಬಟ್ಟೆಗಳನ್ನು ದುರುಪಯೋಗ ಮಾಡಿಕೊಂಡಿದ್ದರಿಂದ ಸಾಮಾನ್ಯ ಜನರಿಗೆ ಕುಂಕುಮಧಾರಿಯನ್ನು ನೋಡಿದಾಗ ಭಯ ಹುಟ್ಟದೆ, ಗೌರವ ಹುಟ್ಟುತ್ತಾ ಎಂದು ಪ್ರಶ್ನೆ ಮಾಡಿದ್ದರು.
ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಟ್ವಿಟ್ಟರಿನಲ್ಲಿ, ಹಣೆಗೆ ತಿಲಕವಿಟ್ಟು ಸೆಲ್ಫಿ ತೆಗೆಸಿಕೊಂಡಿರುವ ಫೋಟೋವನ್ನು ಅಪ್ಲೋಡ್ ಮಾಡಿ ಅದಕ್ಕೆ, ತಿಲಕಕ್ಕೂ, ರಾಜಕೀಯಕ್ಕೂ ಸಂಬಂಧವಿಲ್ಲ. ಅದು ಭಾರತ ಸಂಸ್ಕೃತಿಯ ಭಾಗ, ತಿಲಕದ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಬರೆದುಕೊಂಡಿದ್ದರು. ಇದೀಗ ಮಹಿಳೆಯರೆಲ್ಲರೂ ತಿಲಕದ ಮಹತ್ವವನ್ನು ಸಿದ್ದರಾಮಯ್ಯ ಅವರಿಗೆ ಮನದಟ್ಟು ಮಾಡಿಕೊಡಲು ಮುಂದಾಗಿದ್ದಾರೆ.












Click it and Unblock the Notifications