Get Updates
Get notified of breaking news, exclusive insights, and must-see stories!

ರೌಡಿ ಶಬರೀಶ್ ಗ್ಯಾಂಗ್ ನಿಂದ ಮಹಿಳೆ ಮೇಲೆ ಅತ್ಯಾಚಾರ !

ಬೆಂಗಳೂರು, ಫೆಬ್ರವರಿ 13 : ಆಕೆ ಮನೆ ಗೆಲಸ ಮಾಡಿ ಜೀವನ ಸಾಗಿಸುತ್ತಿದ್ದಳು. ಮನೆ ಕೆಲಸಕ್ಕೆ ಹೋಗುತ್ತಿದ್ದ ಅಕೆಯನ್ನು ಕಾರಿನಲ್ಲಿ ಅಪಹರಿಸಿ ಮೂರು ತಾಸು ಮೂರು ಕಾಮುಕರು ಅತ್ಯಾಚಾರ ಎಸಗಿದ್ದರು. ನಿತ್ರಾಣಗೊಂಡಿದ್ದ ಆಕೆಯನ್ನು ಬಿಟ್ಟು ಕಳುಹಿಸಿದ್ದರು !

ಇದು ಬೇರೆ ಯಾರೂ ಅಲ್ಲ. ಯಲಹಂಕ ಪೊಲೀಸರ ಗುಂಡೇಟು ತಿಂದು ಹಾಸಿಗೆ ಹಿಡಿದಿರುವ ರೌಡಿ ಶೀಟರ್ ಶಬರೀಶ್ ಮತ್ತು ಆತನ ಸಹಚರರಾದ ಇಮ್ರಾನ್, ಮುರಳಿ ಸಹಚರರು ಎಸಗಿರುವ ಕೃತ್ಯದ ವಿವರ. ಎರಡು ದಿನದ ಹಿಂದಷ್ಟೇ ಶಬರೀಶ್ ಯಲಹಂಕ ಪೊಲೀಸರ ಗುಂಡೇಟು ತಿಂದು ಸಿಕ್ಕಿಬಿದ್ದಿದ್ದ. ಆನಂತರ ಯಲಹಂಕ ಉಪ ನಗರ ಪೊಲೀಸರು ಶಬರೀಶ್ ಸಹಚರ ಇಮ್ರಾನ್ ಕಾಲಿಗ ಗುಂಡು ಹಾರಿಸಿದ್ದರು. ಅಂತೂ ಇವರು ಎಸಗಿರುವ ಪಾತಕ ಕೃತ್ಯಗಳು ಒಂದೊಂದಾಗಿ ಹೊರ ಬರುತ್ತಿವೆ.

ಶಬರೀಶ್ ಮತ್ತು ಆತನ ಸಹಚರರ ವಿರುದ್ಧ ವಿವಿಧ ಠಾಣೆಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ಕಿರಾತಕರು ಎಣ್ಣೆಗಾಗಿ ಏನು ಕೃತ್ಯ ಬೇಕಾದರೂ ಮಾಡುತ್ತಿದ್ದರು. ಗುಂಡೇಟು ತಿನ್ನುವ ಮುನ್ನ ನಾಗರಾಜ್ ಎಂಬ ವ್ಯಕ್ತಿಯನ್ನು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇದಕ್ಕೂ ಮುನ್ನ ಅಟ್ಟೂರು ಲೇಔಟ್ ಸಮೀಪ ಮನೆ ಕೆಲಸ ಮಾಡುವ ಮಹಿಳೆಯನ್ನು ಕಾರಿನಲ್ಲಿ ಅಪಹರಿಸಿದ್ದಾರೆ. ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆಕೆ ನಿತ್ರಾಣಗೊಂಡ ಬಳಿಕ ಬಿಟ್ಟು ಹೋಗಿದ್ದು, ಯಲಹಂಕ ಪೊಲೀಸರ ತನಿಖೆ ವೇಳೆ ಈ ಸಂಗತಿ ಹೊರ ಬಿದ್ದಿದೆ.

Bengaluru; women gang raped by rowdy sheeter associates !

ಬಿಬಿಎಂಪಿ ಕಸ ವಿಲೇವಾರಿ: ಪಾತಕಿ ಶಬರೀಶ್ ನ ಸಹಚರ ರಂಜಿತ್ ಎಂಬಾತ ಬೆಳಗ್ಗೆ ಬಿಬಿಎಂಪಿ ಕಸದ ಆಟೋ ಚಾಲನೆ ಮಾಡುತ್ತಿದ್ದ. ಅಡ್ಡ ಮಾರ್ಗದಲ್ಲಿ ಹಣ ಸಂಪಾದಿಸಲು ರಾತ್ರಿ ವೇಳೆ ಈ ಪಾತಕಿಗಳ ಜತೆ ಸೇರಿ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದ ಸಂಗತಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಪಾತಕಿಗಳ ಮತ್ತಷ್ಟು ಕೃತ್ಯಗಳ ಬಗ್ಗೆ ಪೊಲೀಸ್ ಇನ್‌ಸ್ಪೆಕ್ಟರ್ ರಾಮಕೃಷ್ಣಾರೆಡ್ಡಿ ಶೋಧ ನಡೆಸುತ್ತಿದ್ದಾರೆ.

Bengaluru; women gang raped by rowdy sheeter associates !

Recommended Video

      ಎಲ್‌ಪಿಜಿ ಸಿಲಿಂಡರ್‌ ಬೆಲೆ 50ರೂ ಹೆಚ್ಚಳ..!ಇಂದಿನಿಂದಲೇ ಪರಿಷ್ಕ್ರತ ದರ ಜಾರಿಗೆ | Oneindia Kannada

      ಪಾತಕಿ ರಂಜಿತ್ ಕೆಲವು ವರ್ಷದಿಂದ ಬಿಬಿಎಂಪಿ ಕಸ ವಿಲೇವಾರಿ ಆಟೋ ಓಡಿಸುತ್ತಿದ್ದ. ರಾತ್ರಿ ವೇಳೆ ಕ್ರಿಮಿನಲ್ ಅಪರಾಧ ಕೃತ್ಯ ಎಸಗುತ್ತಿದ್ದ. ಮೂರು ದಿನದ ಹಿಂದೆ ವಾಹನ ಮತ್ತು ಮೊಬೈಲ್ ಕಸಿದಿದ್ದರು. ಈ ಕುರಿತು ಖಚಿತ ಮಾಹಿತಿ ಆಧರಿಸಿ ರಾತ್ರಿ ಗಸ್ತಿನಲ್ಲಿದ್ದ ಯಲಹಂಕ ಸಂಚಾರ ಪೊಲೀಸರು ಆರೋಪಿಗಳ ಬಂಧನಕ್ಕೆ ಯತ್ನಿಸಿದ್ದರು. ಮಂಗಳ ಮುಖಿಯರು ನೀಡಿದ ಮಾಹಿತಿ ಮೇರೆಗೆ ಮೊಬೈಲ್ ಕಸಿದಿದ್ದ ಕಿರಾತಕರನ್ನು ಸಂಚಾರ ಪೊಲೀಸರೇ ಬೆನ್ನಟ್ಟಿದ್ದರು. ಆದರೆ ಈ ವೇಳೆ ಅಪಘಾತ ಮಾಡಿಕೊಂಡಿದ್ದ ರಂಜಿತ್ ಗಾಯ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಆನಂತರ ಯಲಹಂಕ ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿದ್ದರು. ಇದೀಗ ಶಬರೀಶ್ ಮತ್ತು ಇಮ್ರಾನ್ ಗೆ ಪೊಲೀಸರು ಬುದ್ಧಿ ಕಲಿಸಿದ್ದಾರೆ. ಮುರಳಿ ಮತ್ತು ರಂಜಿತ್ ಸಿಕ್ಕಿಬಿದ್ದಿದ್ದಾರೆ. ಇಷ್ಟಕ್ಕೆ ಈ ಪಾತಕಿಗಳು ಸುಮ್ಮನಾಗುತ್ತಾರಾ ಅನ್ನೋದು ಕಾದು ನೋಡಬೇಕು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+