ಬೆಂಗಳೂರು ಕೆಫೆ ಮಹಿಳಾ ಬಾತ್‌ರೂಮಿನಲ್ಲಿ ರಹಸ್ಯ ಕ್ಯಾಮೆರಾ ಪತ್ತೆ: ಮುಂದಾಗಿದ್ದೇನು
ಬೆಂಗಳೂರು, ಆಗಸ್ಟ್ 12: ಬೆಂಗಳೂರಿನ ಕಾಫಿ ಶಾಪ್‌ಗೆ ತೆರಳಿದ್ದ ಯುವತಿಯೊಬ್ಬಳು ಅಲ್ಲಿನ ವಾಶರೂಮ್ ನಲ್ಲಿ ಯಾರಿಗೂ ಗೊತ್ತಾಗದಂತೆ ಇಟ್ಟಿದ್ದ ಹಿಡನ್ ಕ್ಯಾಮೆರಾ ಪತ್ತೆ ಮಾಡಿದ್ದಾರೆ. ಮಹಿಳೆಯರು ಇಂತಹ ಶಾಪ್‌ಗಳಲ್ಲಿ ವಾಶ್‌ರೂಮ್ ಬಳಸುವ ಮುನ್ನ ಇರಲಿ ಎಚ್ಚರ ಎಂದ ಆ ಯುವತಿ ಮನವಿ ಮಾಡಿದ್ದಾರೆ. ಸದ್ಯ ಸದಾಶಿವನಗರದ ಪೊಲೀಸರ ಕ್ಯಾಮೆರಾ ಇಟ್ಟವನನ್ನು ಬಂಧಿಸಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಘಟನೆ ವಿವರ ಇಲ್ಲಿದೆ.
ಯುವತಿಯೊಬ್ಬರು ನಗರದ ಬಿಇಎಲ್ ರಸ್ತೆಯ 'ಥರ್ಡ್ ವೇವ್ ಕಾಫೀ' ಔಟ್‌ಲೆಟ್‌ಗೆ ತೆರಳಿದಿದ್ದಾರೆ. ಕಾಫಿ ಆರ್ಡರ್ ಮಾಡಿರುವ ಯುವತಿ ಅಲ್ಲಿನ ವಾಶ್‌ರೂಮ್ ಬಳಸಲು ತೆರಳಿದಾಗ ಅಲ್ಲಿ ಯಾರಿಗೂ ಕಾಣದಂದೆ ಶಾಪ್ ಸಿಬ್ಬಂದಿಯೇ ಇಟ್ಟಿದ್ದ ಮೊಬೈಲ್ ಕ್ಯಾಮೆರಾ ಇಟ್ಟಿದ್ದನ್ನು ಪತ್ತೆ ಮಾಡಿ ಪೊಲಿಸರಿಗೆ ತಿಳಿಸಿದ್ದಾಳೆ.

ಕ್ಯಾಮೆರಾ ಇಟ್ಟಿದ್ದ ಕಾಫೀ ಶಾಪ್ ಸಿಬ್ಬಂದಿ 23 ವರ್ಷ ಮನೋಜ್ ಎನ್ನಲಾಗಿದೆ. ಆರು ತಿಂಗಳ ಹಿಂದೆ ಈ ಶಾಪ್‌ನಲ್ಲಿ ಕೆಲಸಕ್ಕೆ ಸೇರಿದ್ದ ಈತ ಗುಟ್ಟಹಳ್ಳಿಯಲ್ಲಿ ವಾಸಿಸುತ್ತಿದ್ದು, ಶಿವಮೊಗ್ಗ ಮೂಲದವನು ಎಂದು ಸದಾಶಿವನಗರ ಪೊಲೀಸರು ಮಾಹಿತಿ ನೀಡಿದ್ದಾರೆ.
ಫ್ಲೈಟ್ ಮೂಡ್‌ನಲ್ಲಿತ್ತು ಕ್ಯಾಮೆರಾ
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಯುವತಿ ಮಾಹಿತಿ ಹಂಚಿಕೊಂಡಿದ್ದಾರೆ. ವಾಶ್‌ರೂಮ್‌ಗೆ ತೆರಳಿದಾಗ ಅಲ್ಲಿ ಡಸ್ಟ್‌ಬೀನ್ ಹಿಂದೆ ಯಾರಿಗೂ ಕಾಣದಂತೆ ಕ್ಯಾಮೆರಾ ಇಡಲಾಗಿದೆ. ನೋಡಿದರೆ ಕಳೆದ ಎರಡು ಗಂಟೆಗಳಿಂದ ಅದು ರೆಕಾರ್ಡ್ ಮಾಡುತ್ತಿದ್ದು, ಟಾಯ್ಲೆಟ್ ಸೀಟಿಗೆ ಮುಖ ಮಾಡಿ ಇಡಲಾಗಿತ್ತು. ಫ್ಲೈಟ್ ಮೂಡ್‌ಗೆ ಹಾಕಿ ರೆಕಾರ್ಡ್ ಇಟ್ಟಿರುವುದನ್ನು ಯುವತಿ ಪತ್ತೆ ಮಾಡಿದ್ದಾರೆ.

ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರ ಫೋನ್ ವಶಕ್ಕೆ ಪಡೆದಿದ್ದಾರೆ. ಪರಿಶೀಲಿಸಿದಾಗ ಇದು ಇಲ್ಲಿನ ಸಿಬ್ಬಂದಿ ಬಂಧಿತ ಮನೋಜ್ ನದ್ದು ಎಂದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕ್ರಮ ಜರುಗಿಸಿದ್ದಾರೆ.
ನೀವು ಅಗತ್ಯ ಜಾಗೃತೆ ವಹಿಸಿ
ಇದೊಂದು ಭಯಾನಕ ಘಟನೆಯಾಗಿದ್ದು, ನೆನಸಿಕೊಂಡರೆ ಅಸಹ್ಯವೆನಿಸುತ್ತದೆ. ಕೆಫೆ ಅಥವಾ ರೆಸ್ಟೋರೆಂಟ್ ಎಷ್ಟೇ ಪ್ರಸಿದ್ಧವಾದರೂ ಸಹಿತ ಅಲ್ಲಿ ವಾಶ್‌ರೂಮ್ ಬಳಸುವಾಗ ಇನ್ನುಮುಂದೆ ಹೆಚ್ಚು ಜಾಗೃತೆ ವಹಿಸುತ್ತೇನೆ. ನೀವು (ಮಹಿಳೆಯರು) ಸಹ ಇಂತಹ ಶಾಪ್‌ಗಳಲ್ಲಿ ವಾಶ್‌ರೂಮ್ ಹೋಗಬೇಕಾದರೆ ಅಗತ್ಯ ಎಚ್ಚರಿಕೆ ವಹಿಸಿ ಎಂದು ಆ ಯುವತಿ ಮನವಿ ಮಾಡಿದ್ದಾರೆ.
ಘಟನೆ ಬಗ್ಗೆ 'ಥರ್ಡ್ ವೇವ್ ಕಾಫೀ' ಹೇಳಿದ್ದೇನು
ಈ ಕುರಿತು ಪ್ರತಿಕ್ರಿಯಿಸಿರುವ ಥರ್ಡ್ ವೇವ್ ಕಾಫೀ ಔಟ್‌ಲೆಟ್, ಬೆಂಗಳೂರಿನ ಈ ನಮ್ಮ ಔಟ್‌ಲೆಟ್‌ನಲ್ಲಿ ಇಂಥದ್ದೊಂದು ಘಟನೆ ನಡೆದಿರುವುದು ಕಳವಳಕಾರಿ ಸಂಗತಿ. ಇಂತಹ ಘಟನೆಗಳನ್ನು ನಾವು ಸಹ ಸ್ವೀಕರಿಸುವುದಿಲ್ಲ. ಇದು ಖಂಡನೀಯ ಎಂಬುದರಲ್ಲಿ ಎರಡು ಮಾತಿಲ್ಲ. ಈ ವ್ಯಕ್ತಿಯನ್ನು ತಕ್ಷಣವೇ ವಜಾಗೊಳಿಸಲಾಗಿದೆ. ಗ್ರಾಹಕರ ಸುರಕ್ಷತೆ, ಅವರ ಸೇವೆಯೆ ನಮಗೆ ಅತ್ಯಮೂಲ್ಯವಾಗಿದೆ. ಗ್ರಾಹಕರ ಸುರಕ್ಷತೆ ಖಚಿತಪಡಿಸುವ ಮೂಲಕ ಇಂತಹ ಘಟನೆಗೆ ಆಸ್ಪದ ಕೊಡದಂತೆ ಕಾರ್ಯ ನಿರ್ವಹಿಸುತ್ತೇವೆ ಎಂದು ಶಾಪ್ ಮುಖ್ಯಸ್ಥರು ಪ್ರತಿಕ್ರಿಯಿಸಿದ್ದಾರೆ.
ಸದ್ಯ ಮನೋಜ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 77 (ವೋಯರಿಸಂ) ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications