ಮನೆಯೊಳಗೆ ಮಹಿಳೆ ಹೆಣವಿತ್ತು, ಕತ್ತಿನಲ್ಲಿರುವ ಸರ ಇರಲಿಲ್ಲ

ಬೆಂಗಳೂರು, ನವೆಂಬರ್ 21: ಬೆಂಗಳೂರಿನ ರಾಮಮೂರ್ತಿ ನಗರದ ಮನೆಯೊಂದರಲ್ಲಿ ಗೃಹಿಣಿ ಕೊಲೆಯಾಗಿದೆ, ಆಕೆಯ ಕತ್ತಿನಲ್ಲಿದ್ದ ಆಭರಣವನ್ನು ತೆಗೆದುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಮೇಘಲ ದೇವಿ ಅವರನ್ನು ಕೊಲೆ ಮಾಡಿದ್ದಾರೆ. ಚಿನ್ನಾಭರಣ ದೋಚುವ ಉದ್ದೇಶದಿಂದಲೇ ಮನೆಗೆ ನುಗ್ಗಿದ್ದಾರೆ, ಇದು ಪರಿಚಿತರ ಕೆಲಸ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ತಮಿಳುನಾಡು ಮೂಲದ ಮೇಘಲ ದೇವಿ ಹಾಗೂ ಪತಿ ಕೃಷ್ಣಮೂರ್ತಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು, ಕಳೆದ 30 ವರ್ಷಗಳಿಂದ ಬಾಡಿಗೆ ಮನೆಯಲ್ಲಿದ್ದರು. ದಂಪತಿಗಳಿಬ್ಬರೇ ವಾಸಿಸುತ್ತಿದ್ದರು.

Women found dead, gold chain missing

ಮಂಗಳವಾರ ಎಂದಿನಂತೆ ಕೃಷ್ಣಮೂರ್ತಿ ಕೆಲಸಕ್ಕೆ ಹೋಗಿದ್ದು ಮೇಘಲ ದೇವಿ ಮನೆಯಲ್ಲಿದ್ದರು, ಮಧ್ಯಾಹ್ನ 2.30ರ ಸುಮಾರಿಗೆ ದುಷ್ಕರ್ಮಿಗಳು ಬಂದು ಬಾಗಿಲು ತಟ್ಟಿದ್ದಾರೆ.

ಪರಿಚಯಸ್ಥರು ಎಂದು ಬಾಗಿಲು ತೆಗೆಯುತ್ತಿದ್ದಂತೆ ಮನೆಗೆ ಪ್ರವೇಶಿಸಿದ ದುಷ್ಕರ್ಮಿಗಳು ಆಕೆಯ ಜೊತೆ ಮಾತನಾಡುತ್ತಲೇ ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗಿದ್ದಾರೆ.ಆಕೆ ಕಿರುಚಿಕೊಳ್ಳುತ್ತಿದ್ದಂತೆ ಆಕೆಯ ಕತ್ತನ್ನು ಸೀಳಿ ಓಡಿಹೋಗಿದ್ದಾರೆ. ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+