ಬೆಂಗಳೂರು ಬಸ್ಸಿನಲ್ಲಿ ಬಡೆದಾಟ: ಬಿಡ್ರಿ ಬಿಡ್ರಿ ಅಂದ್ರ ಕೇಳಲಿಲ್ಲ ಮಹಿಳೆಯರು ಚಪ್ಪಲಿ ಹರಿಯೊಂಗ ಹೊಡೆದಾಡಿದ್ರು....
ಬೆಂಗಳೂರು ಫೆಬ್ರವರಿ 10: ರಾಜ್ಯ ಸರ್ಕಾರ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಆರಂಭಿಸಿ ಸುಮಾರು ದಿನಗಳು ಕಳೆದಿವೆ. ಹೀಗಾಗಿ ಕೆಎಸ್‌ಆರ್‌ಟಿಸಿ ಮಾತ್ರವಲ್ಲದೆ ಬಿಎಂಟಿಸಿ ಬಸ್‌ಗಳು ನಿತ್ಯ ಮಹಿಳೆಯರಿಂದಲೇ ತುಂಬಿ ಹೋಗಿರುತ್ತವೆ. ಸುಮಾರು 40 ಸೀಟುಗಳಿರುವ ಬಸ್‌ಗೆ ಸುಮಾರು ನೂರು ಜನ ಮಹಿಳೆಯರು ಕಾಯುವಂತ ದೃಶ್ಯಗಳು ನಿಲ್ದಾಣದಲ್ಲಿ ಸಾಮಾನ್ಯವಾಗಿವೆ. ಈ ನಡುವೆ ಬಸ್‌ವೊಂದರಲ್ಲಿ ಮಹಿಳೆಯರು ಚಪ್ಪಲಿಯಿಂದ ಹೊಡೆದಾಡಿಕೊಂಡ ದೃಶ್ಯವೊಂದು ವೈರಲ್ ಆಗಿದೆ.
ಫೆಬ್ರವರಿ 8 ರಂದು ಬೆಂಗಳೂರಿನಲ್ಲಿ ಕಿಕ್ಕಿರಿದ ಬಸ್‌ನೊಳಗೆ ಇಬ್ಬರು ಮಹಿಳೆಯರು ಪರಸ್ಪರ ಚಪ್ಪಲಿಗಳಿಂದ ಹೊಡೆದಾಡುತ್ತಿರುವ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ಈ ಘಟನೆಯನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಕೇಶ್ ಪ್ರಕಾಶ್ ಎಂಬ ವ್ಯಕ್ತಿ ಎಕ್ಸ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮುಂಬದಿ ಸೀಟ್‌ನಲ್ಲಿ ಕುಳಿತ ಮಹಿಳೆ ಹಿಂಬದಿ ಕುಳಿತ ಮಹಿಳೆಗೆ ಚಪ್ಪಲಿಯಿಂದ ಹೊಡೆಯುತ್ತಿರುವುದು ಕಂಡು ಬಂದಿದೆ. ಪ್ರತಿಯಾಗಿ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ದೃಶ್ಯ ಕಂಡು ಬಂದಿದೆ.
ಹಿಂಬದಿ ಕುಳಿತ ಮಹಿಳೆ ಕಿಟಕಿ ತೆರೆದ ಕಾರಣ ಇಬ್ಬರು ಮಹಿಳೆಯರು ವಾಗ್ವಾದ ನಂತರ ಚಪ್ಪಲಿಯಿಂದ ಹೊಡೆದಾಡಿಕೊಂಡಿದ್ದಾರೆ. ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ. ಬಸ್ ಕಂಡಕ್ಟರ್ ಕೂಡ ಜಗಳವನ್ನು ಬಿಡಿಸಿದ್ದಾರೆ. ಆದರೂ ಸುಮ್ಮನಾಗದ ಇಬ್ಬರು ಮಹಿಳೆಯರನ್ನು ಬಸ್‌ನಿಂದ ಇಳಿಸುವಂತೆ ಇತರ ಪ್ರಯಾಣಿಕರು ಒತ್ತಾಯಿಸುತ್ತಿದ್ದಂತೆ ಇಬ್ಬರು ಸುಮ್ಮನಾಗಿದ್ದಾರೆ.
ಈ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ತಕ್ಷಣ ಸಾಮಾಜಿಕ ಜಾಲತಾಣ ಬಳಕೆದಾರರ ಗಮನ ಸೆಳೆದಿದೆ. ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ ಜನರು ತಮ್ಮ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಆದರೆ ಇತರರು ಬಸ್ ಪ್ರಯಾಣದ ಸಮಯದಲ್ಲಿ ಇದೇ ರೀತಿಯ ಅಸ್ತವ್ಯಸ್ತವಾಗಿರುವ ಸಂದರ್ಭಗಳನ್ನು ಎದುರಿಸುವ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಬಸ್‌ನಲ್ಲಿ ಮಹಿಳೆಯರ ಜಗಳ
ಕಳೆದ ವರ್ಷ ಬಸ್ ಸೀಟಿಗಾಗಿ ಮಹಿಳೆಯರಿಬ್ಬರು ಬೀದರ್ ಜಿಲ್ಲೆಯಲ್ಲಿ ಜಗಳವಾಡಿಕೊಂಡ ದೃಶ್ಯ ಭಾರೀ ವೈರಲ್ ಆಗಿತ್ತು.
ಭಾಲ್ಕಿಯಿಂದ ಹಳ್ಳಿಖೇಡ(ಬಿ)ಗೆ ಹೊರಟಿದ್ದ ಬಸ್‍ನಲ್ಲಿ ಚಳಕಾಪುರ ಬಳಿ ಘಟನೆ ನಡೆದಿತ್ತು. ಮಹಿಳೆಯೊಬ್ಬರು ತನಗೂ ಕೂರಲು ಜಾಗ ಬಿಡುವಂತೆ ಕೇಳಿದಾಗ, ಇಬ್ಬರ ಮಧ್ಯೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಮಹಿಳೆಯರ ಜಗಳ ಬಿಡಿಸುವಷ್ಟರಲ್ಲಿ ಸಹ ಪ್ರಯಾಣಿಕರು ಸುಸ್ತಾಗಿದ್ದಾರೆ.
ಮಹಿಳೆಯರ ಜಗಳದ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಶಕ್ತಿ ಯೋಜನೆ ಉಚಿತ ಪ್ರಯಾಣದ ವೇಳೆ ನಾರಿಯರು ಪರಸ್ಪರ ಶಕ್ತಿ ಪ್ರದರ್ಶನ ಮಾಡಿರುವುದು ಚರ್ಚೆಗೆ ಎಡೆಮಾಡಿಕೊಟ್ಟಿದೆ.












Click it and Unblock the Notifications