ವರದಕ್ಷಿಣೆ ಕಿರುಕುಳ, ಮಗಳ ಎದುರೇ ತಾಯಿ ಆತ್ಮಹತ್ಯೆ
ಬೆಂಗಳೂರು, ಮಾರ್ಚ್ 22: ಪತಿಯ ವರದಕ್ಷಿಣೆ ಕಿರುಕುಳದಿಂದ ಮನನೊಂದು ಗೃಹಿಣಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಜರಾಜೇಶ್ವರಿನಗರದ ಪಟ್ಟಣಗೆರೆ ನಿವಾಸಿ ಸಂಗೀತಾ(38) ಮೃತ ಗೃಹಿಣಿ. ಈಕೆಯ ತಾಯಿ ಕೊಟ್ಟ ದೂರಿನ ಮೇರೆಗೆ ಪತಿ ರಾಜಶೇಖರ್ ಹಾಗೂ ಅತ್ತೆ ವಿಜಯಕುಮಾರಿ ಮತ್ತು ಆಕೆಯ ಸಹೋದರಿ ಜಯಲಕ್ಷ್ಮೀ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ತಲೆ ಮರೆಸಿಕೊಂಡಿರುವ ಮೂವರ ವಿರುದ್ಧ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಬೆಡ್‌ರೂಮಿನಲ್ಲಿ ಮಲಗಿದ್ದ ಮಗಳು, ಅಮ್ಮ ಹಾಲು ತರಲು ಹೋಗಿರಬೇಕೆಂದು ಸುಮ್ಮನಾಗಿದ್ದಳು.

ರೂಮಿನಿಂದ ಹೊರ ಬಂದಾಗ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ನೋಡಿದ್ದಾಳೆ ಬಳಿಕ ಅಜ್ಜಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ತಮಿಳುನಾಡು ಮೂಲದ ರಾಜಶೇಖರ್ ಮತ್ತು ಸಂಗೀತಾ ದಂಪತಿಗೆ ಏಳು ವರ್ಷದ ಮಗಳಿದ್ದು, ಕೌಟುಂಬಿಕ ಕಲಹದಿಂದಾಗಿ ದೂರವಾಗಿದ್ದರು.
ಮಗಳ ಜೊತೆಗೆ ಸಂಗೀತಾ ನೆಲೆಸಿದ್ದರು.ಪತ್ನಿ ಹಾಗೂ ಮಗಳಿಗೆ ಜೀವನಾಂಶ ನೀಡುತ್ತಿರಲಿಲ್ಲ, ನೊಂದ ಸಂಗೀತಾ ಮನೆಯಲ್ಲಿಯೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.












Click it and Unblock the Notifications