ಅರ್ಚಕನ ಮೇಲೆ ಉಗುಳಿದ ಮಹಿಳೆಗೆ ಥಳಿತ: ದೇವಸ್ಥಾನದಿಂದ ಹೊರಗೆ ಎಳೆದೊಯ್ದ ಸಿಬ್ಬಂದಿ
ಬೆಂಗಳೂರು ಜನವರಿ 6: ಅರ್ಚಕನ ಮೇಲೆ ಉಗುಳಿದಳು ಎಂದು ಆರೋಪಿಸಿ ಮಹಿಳೆಯೊಬ್ಬರನ್ನು ಥಳಿಸಿ ದೇವಸ್ಥಾನದಿಂದ ಹೊರಗೆ ಎಳೆದೊಯ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಘಟನೆ ಬೆಂಗಳೂರಿನ ಅಮೃತಹಳ್ಳಿಯ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ. ಮಹಿಳೆ ತಾನು ವೆಂಕಟೇಶ್ವರನ ಹೆಂಡತಿ ಎಂದು ಹೇಳಿಕೊಂಡಿದ್ದಾಳೆ. ಆಕೆ ವಿಗ್ರಹದ ಪಕ್ಕದಲ್ಲಿ ಕುಳಿತುಕೊಳ್ಳಲು ಬಯಸಿದ್ದಳು. ಪೂಜಾರಿ ಆಕೆಯನ್ನು ತಡೆದಾಗ ಆಕೆ ಆತನ ಮೇಲೆ ಉಗುಳಿದ್ದಾಳೆ.
ಇದರಿಂದ ದೇವಸ್ಥಾನದ ಸಿಬ್ಬಂದಿ ಆಕೆಯನ್ನು ಥಳಿಸಿ ಆವರಣದಿಂದ ಹೊರಗೆ ಎಳೆದೊಯ್ದಿದ್ದಾರೆ. ಮಹಿಳೆ ಮಾನಸಿಕ ಅಸ್ವಸ್ಥಳಾಗಿದ್ದಾಳೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆ ಡಿಸೆಂಬರ್ 21 ರಂದು ನಡೆದಿತ್ತು. ಆದರೆ ಮಹಿಳೆ ಗುರುವಾರ ಪೊಲೀಸರ ಮೊರೆ ಹೋಗಿದ್ದರು, ನಂತರ ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.












Click it and Unblock the Notifications