ಕೆನಡಾದಲ್ಲಿ ಕೆಲಸ ನೀಡುವುದಾಗಿ ವಂಚನೆ: ಆತ್ಮಹತ್ಯೆಗೆ ಮುಂದಾದ ಮಹಿಳೆ
ಬೆಂಗಳೂರು, ಜೂನ್ 29: ಕೆನಡಾದಲ್ಲಿ ಕೆಲಸ ಕೊಡಿಸುವ ಆಸೆ ತೋರಿಸಿ ಸುಮಾರು 8 ಲಕ್ಷರೂ ವಂಚನೆ ಮಾಡಿರುವ ಪರಿಣಾಮ ಮನನೊಂದು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಾಣಸವಾಡಿಯಲ್ಲಿ ನಡೆದಿದೆ.
ಬಾಣಸವಾಡಿ ನಿವಾಸಿಯಾಗಿರುವ ಜಯಕುಮಾರಿ ವಿಯಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ, ಬಾಣಸವಾಡಿಯ ಜೈ ಭಾರತ್ ನಗರ ನಿವಾಸಿಯಾಗಿದ್ದ ಇವರಿಗೆ ಇಂದ್ರ, ಶೆರ್ಲಿನ್, ಹಾಗೂ ಸಂತೋಷ್ ಎಂಬ ಪರಿಚಯಸ್ಥರು ಕೆನಡಾದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದಾರೆ.
ಇದನ್ನು ನಂಬಿದ ಅವರು ಸುಮಾರು 8 ಲಕ್ಷ ರೂ. ಹಣವನ್ನು ನೀಡಿದ್ದಾರೆ. ಹಣ ಪಡೆದ ಮೂವರು ಕೆಲಸ ಕೊಡಿಸದೇ ಮಹಿಳೆಗೆ ವಂಚಿಸಿದ್ದಾರೆ. ಇದರಿಂದ ಮನನೊಂದು ಜಯಕುಮಾರಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕೂಡಲೇ ಜಯಕುಮಾರಿಯವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದು, ಘಟನೆ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications