ಅಕ್ಟೋಬರ್ 14 ರಿಂದ ಬೆಂಗಳೂರಲ್ಲೇ ಚಳಿಗಾಲದ ಅಧಿವೇಶನ
ಬೆಂಗಳೂರು, ಸೆಪ್ಟೆಂಬರ್ 18: ಚಳಿಗಾಲದ ಅಧಿವೇಶನವನ್ನು ಈ ಬಾರಿ ಬೆಳಗಾವಿಯಲ್ಲಿ ಮಾಡುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ ಬೆನ್ನಲ್ಲೆ ಚಳಿಗಾಲದ ಅಧಿವೇಶನದ ದಿನಾಂಕ ಪ್ರಕಟಿಸಲಾಗಿದೆ.
ಅಕ್ಟೋಬರ್ 14 ರಿಂದ 26 ರ ವರೆಗೆ ಬೆಂಗಳೂರಿನ ವಿಧಾನಸೌಧದಲ್ಲಿಯೇ ಈ ಬಾರಿಯ ಚಳಿಗಾಲದ ಅಧಿವೇಶನ ನಡೆಯಲಿದೆ.
ಉತ್ತರ ಕರ್ನಾಟಕದಲ್ಲಿ ನೆರೆ ಬಂದಿದ್ದು, ಸರ್ಕಾರವು ಸೂಕ್ತವಾಗಿ ನೆರೆಗೆ ಪ್ರತಿಕ್ರಿಯಿಸಿಲ್ಲ ಎನ್ನುವ ಆಕ್ರೋಶ ಜನರಲ್ಲಿದೆ. ಹಾಗಾಗಿ ಜನರ ಪ್ರತಿಭಟನೆಗೆ ಹೆದರಿ ಸರ್ಕಾರವು ಬೆಳಗಾವಿಯ ಬದಲಿಗೆ ವಿಧಾನಸೌಧದಲ್ಲಿಯೇ ಚಳಿಗಾಲದ ಅಧಿವೇಶನ ಮಾಡಲು ನಿಶ್ಚಯಿಸಿದೆ.

ಬೆಳಗಾವಿಯ ಬದಲಿಗೆ ಬೆಂಗಳೂರಿನಲ್ಲಿ ಅಧಿವೇಶನ ನಡೆಸುವ ನಿರ್ಣಯದ ಬಗ್ಗೆ ಈಗಾಗಲೇ ವಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಅಧಿವೇಶನದಲ್ಲಿ ವಿಪಕ್ಷಗಳು ಈ ಬಗ್ಗೆ ಸರ್ಕಾರದ ವಿರುದ್ಧ ಹರಿಹಾಯಲಿವೆ.












Click it and Unblock the Notifications