ಬೆಂಗಳೂರು ಬಿಟ್ಟು ಹೋಗಲಿವೆಯೇ ಪ್ರಮುಖ ಕಂಪನಿಗಳು, ಆಂಧ್ರದಿಂದ ಭರ್ಜರಿ ಆಫರ್!
ಬೆಂಗಳೂರು ಅಭಿವೃದ್ಧಿ ಆಗುತ್ತಿರುವ ಬೆನ್ನಲ್ಲೇ ನೆರೆಯ ಹಾಗೂ ಅಕ್ಕಪಕ್ಕದ ರಾಜ್ಯಗಳ ಕಣ್ಣು ಬೆಂಗಳೂರಿನ ಮೇಲೆ ಬಿದ್ದಿದೆ. ಬೆಂಗಳೂರು ಅಭಿವೃದ್ಧಿಯ ವೇಗದಲ್ಲಿದೆ. ಅಲ್ಲದೇ ಸಿಲಿಕಾನ್ ಸಿಟಿಯು ಐಟಿ - ಬಿಟಿ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದೆ. ಆದರೆ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಎದುರಾಗಿರುವ ತೊಡಕಿನಿಂದಾಗಿ ಬೆಂಗಳೂರಿನಿಂದ ಪ್ರಮುಖ ಕಂಪನಿಗಳು ಹೊರಕ್ಕೆ ಹೋಗಲಿವೆಯೇ ಎನ್ನುವ ಆತಂಕ ಎದುರಾಗಿದೆ. ಅದರಲ್ಲೂ ಮುಖ್ಯವಾಗಿ ಏರೋಸ್ಪೇಸ್‌ಗೆ ಸಂಬಂಧಿಸಿದ ಕಂಪನಿಗಳು ಬೆಂಗಳೂರಿನ ಕೈತಪ್ಪುವ ಆತಂಕ ಎದುರಾಗಿದೆ. ಇದಕ್ಕಾಗಿಯೇ ನೆರೆಯ ಆಂಧ್ರ ಪ್ರದೇಶ ಸರ್ಕಾರವು ಕಾದು ಕುಳಿತಿದೆ.
ಅವಿಭಜಿತ ಆಂಧ್ರಪ್ರದೇಶ ವಿಭಜನೆಯಾದ ಮೇಲೆ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ನಡುವೆಯೇ ಭಾರೀ ಪೈಪೋಟಿ ಇದೆ. ತೆಲಂಗಾಣಕ್ಕೆ ಹೈದರಾಬಾದ್ ರಾಜಧಾನಿಯಾಗಿದೆ. ತೆಲಂಗಾಣ ಸಾಕಷ್ಟು ಆದಾಯ ಮೂಲವನ್ನು ಹೊಂದಿದೆ. ಆದರೆ ಆಂಧ್ರಪ್ರದೇಶದಲ್ಲಿ ಐಟಿ - ಬಿಟಿ ಪೂರಕ ವಾತಾವರಣ ಇಲ್ಲ. ಇದೀಗ ಹೈದರಾಬಾದ್ ಅಭಿವೃದ್ಧಿ ಮಾಡಿದ ಚಂದ್ರಬಾಬು ನಾಯ್ಡು ಅವರೇ ಆಂಧ್ರ ಹಾಗೂ ಅಮರಾವತಿ ಅಭಿವೃದ್ಧಿಗೆ ಮುಂದಾಗಿದ್ದಾರೆ. ಆಂಧ್ರ ಪ್ರದೇಶ ಸರ್ಕಾರದ ಕಣ್ಣು ಇದೀಗ ಬೆಂಗಳೂರಿನ ಮೇಲೆ ಬಿದ್ದಿದೆ.

ಬೆಂಗಳೂರಿನಿಂದ ಕೆಲವೇ ಕಿ. ಮೀ ದೂರದಲ್ಲಿರುವ ದೇವನಹಳ್ಳಿಯ ಚನ್ನರಾಯಪಟ್ಟಣ ಜಮೀನು ಭೂಸ್ವಾಧೀನ ರದ್ದಾದ ಕೂಡಲೇ ಆಂಧ್ರಪ್ರದೇಶ ಅಲರ್ಟ್ ಆಗಿದೆ. ಏರೋಸ್ಪೇಸ್ ಉದ್ಯಮಿಗಳಿಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಅವರ ಪುತ್ರ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ನಾರಾ ಲೋಕೇಶ್ ಏರೋಸ್ಪೇಸ್ ಉದ್ಯಮಿಗಳಿಗೆ ನಮ್ಮ ರಾಜ್ಯಕ್ಕೆ ಬನ್ನಿ ಅಂತ ಆಹ್ವಾನ ಕೊಟ್ಟಿದ್ದಾರೆ. ಇದು ಕರ್ನಾಟಕದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸಂಬಂಧ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಕರ್ನಾಟಕ ಕಾಂಗ್ರೆಸ್ ಸರ್ಕಾರವು ನಮ್ಮ ರಾಜ್ಯದ ನೈಸರ್ಗಿಕ ಪ್ರಯೋಜನವನ್ನು ಹಾಳುಮಾಡುತ್ತಿದೆ. ಇದು ನಾವು ದಶಕಗಳ ಹೊಸ, ಪ್ರತಿಭೆ ಮತ್ತು ಮೂಲಸೌಕರ್ಯಗಳನ್ನು ಅಭಿವೃದ್ಧಿ ಮಾಡಿರುವ ಕ್ಷೇತ್ರವಾಗಿದೆ.
ಇಂದು, ಹೊಸ ಹೂಡಿಕೆಗಳನ್ನು ಆಕರ್ಷಿಸುವ ಬದಲು, ಅವು ನೆರೆಯ ರಾಜ್ಯಗಳಿಗೆ ಹೋಗುವುದನ್ನು ನಾವು ನೋಡುತ್ತಿದ್ದೇವೆ. ಏಕೆ? ಈ ಸರ್ಕಾರವು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ನಡುವೆ ಆಂತರಿಕ ಅಧಿಕಾರ ಹೋರಾಟಗಳಿಂದ ನಿಜವಾದ ಆಡಳಿತವನ್ನು ಮಾಡಲು ತುಂಬಾ ವಿಚಲಿತವಾಗಿದೆ. ಸಿಎಂ ಮತ್ತು ಡಿವೈಸಿಎಂ ನಿಯಂತ್ರಣಕ್ಕಾಗಿ ದೈನಂದಿನ ಹಗ್ಗಜಗ್ಗಾಟದಲ್ಲಿ ಸಿಲುಕಿರುವಾಗ, ಕನ್ನಡದ ಯುವಕರಿಗೆ ಉದ್ಯೋಗಗಳ ಬಗ್ಗೆ ಯಾರು ಯೋಚಿಸುತ್ತಾರೆ. ಹೂಡಿಕೆದಾರರನ್ನು ಯಾರು ಬೆಂಬಲಿಸಲಿದ್ದಾರೆ. ಕರ್ನಾಟಕದ ವಿಶ್ವ ದರ್ಜೆಯ ಏರೋಸ್ಪೇಸ್ ವ್ಯವಸ್ಥೆ ಯಾರು ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಅದರ ಫಲಿತಾಂಶವೆಂದರೆ ಹೂಡಿಕೆದಾರರು ಬದ್ಧತೆ ಮತ್ತು ಪೂರ್ವಭಾವಿ ನಾಯಕತ್ವ ಇರುವ ಕಡೆ ಹೋಗುತ್ತಿದ್ದಾರೆ. ನಮಗೆ ಮುಖ್ಯಮಂತ್ರಿ ಕುರ್ಚಿಗಾಗಿ ಮಾತ್ರವಲ್ಲದೆ ಕರ್ನಾಟಕದ ಭವಿಷ್ಯಕ್ಕಾಗಿ ಹೋರಾಡುವ ನಾಯಕತ್ವ ಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.












Click it and Unblock the Notifications