ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುಜರಾತಿನ ಸಿಕ್ಕಾ ಇನ್ಫೋಸಿಸ್ ನೂತನ ಸಿಇಒ?

By Srinath
|
Google Oneindia Kannada News

ಬೆಂಗಳೂರು, ಜೂನ್ 2: ಈ ಹಿಂದೆ ದೇಶದ ಅಗ್ರಗಣ್ಯ ಐಟಿ ಕಂಪನಿಯೆನಿಸಿದ್ದ ಇನ್ಫೋಸಿಸ್ ಕಂಪನಿಗೆ ನೂತನ ಸಿಇಒ ಯಾರಾಗುತ್ತಾರೆ ಎಂಬ ಕುತೂಹಲ ತೀವ್ರವಾಗಿದೆ.

ಈ ಮಧ್ಯೆ, ಕಂಪನಿಯ ಬಲ್ಲ ಮೂಲಗಳ ಪ್ರಕಾರ ಕಳೆದ ತಿಂಗಳು ಜರ್ಮಿನಿಯ ಸಾಫ್ಟ್ ವೇರ್ ಕಂಪನಿಯ ಉದ್ಯೋಗಕ್ಕೆ ರಾಜೀನಾಮೆ ನೀಡಿದ 47 ವರ್ಷದ ವಿಶಾಲ್ ಸಿಕ್ಕಾ ಅವರು ಇನ್ಫೋಸಿಸ್ ಕಂಪನಿಯ ನೂತನ ಸಿಇಒ ಆಗುವುದು ಬಹುತೇಕ ಖಚಿತವಾಗಿದೆ. ಇನ್ನೊಂದೆರಡು ವಾರದಲ್ಲಿ ಇವರ ನೇಮಕಾತಿ ಅಧಿಕೃತವಾಗಿ ಹೊರಬೀಳಲಿದೆ.

ಅಂದಹಾಗೆ ವಿಶಾಲ್ ಸಿಕ್ಕಾ ಅವರು ಇನ್ಫೋಸಿಸ್ ಕಂಪನಿಯ ಮುಖ್ಯಸ್ಥರಾದ ಕೆವಿ ಕಾಮತ್ ಮತ್ತು ನಾರಾಯಣ ಮೂರ್ತಿ ಅವರ ನೆಚ್ಚಿನ ಆಯ್ಕೆಯೂ ಆಗಿದ್ದಾರೆ.

will-ex-sap-executive-vishal-sikka-be-new-ceo-of-bangalore-i-t-company-infosys

ಇನ್ಫೋಸಿಸ್ ಸಿಇಒ ಸ್ಥಾನಕ್ಕೆ ನೇಮಕಾತಿ ಮಾಡುವ ಆಯ್ಕೆ ಮಂಡಳಿಯಲ್ಲಿ ಕೆವಿ ಕಾಮತ್ ಅವರು ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಬಯೋಕಾನ್ ಕಂಪನಿಯ ವ್ಯವಸ್ಥಾಪಕ ಕಿರಣ್ ಮಜೂಂದಾರ್ ಷಾ ಮತ್ತು ಅಶೋಕ್ ಲೇಲ್ಯಾಂಡಿನ ಮಾಜಿ ಎಂಡಿ ಆರ್ ಶೇಷಸಾಯಿ ಅವರು ಆಯ್ಕೆ ಮಂಡಳಿಯಲ್ಲಿರುವ ಇತರೆ ಸದಸ್ಯರು. (ಸಿಇಒ ಆಗ್ತಾರೆ ಅಂದ್ರೆ ಇನ್ಫೋಸಿಸ್ ಅನ್ನೇ ಬಿಟ್ರು)

ಅಂದಹಾಗೆ Infosys ಕಂಪನಿಯ ಸಂಭವನೀಯ CEO ವಿಶಾಲ್ ಸಿಕ್ಕಾ ಅವರು ಗುಜರಾತಿನ ವಡೋದರಾದವರು. ಇವರು ಕಂಪನಿಯ ಸಂಸ್ಥಾಪಕೇತರರ ಪೈಕಿ ಮೊದಲ ಸಿಇಒ ಆಗಲಿದ್ದಾರೆ. ವಿಶಾಲ್ ಸಿಕ್ಕಾ ಅವರು SAP (System Application & Products) ಸಂಸ್ಥೆಯ ಮೊದಲ ಪ್ರಧಾನ ತಂತ್ರಜ್ಞಾನಾಧಿಕಾರಿಯಾಗಿ ಜಾಗತಿಕ ನೈಪುಣ್ಯತೆ ಹೊಂದಿದ್ದಾರೆ.

ಇದರೊಂದಿಗೆ ಸದ್ಯಕ್ಕೆ ಕಳೆಗುಂದಿರುವ ಇನ್ಫೋಸಿಸ್ ಕಂಪನಿಗೆ ಜಾಗತಿಕ ಮಟ್ಟದ ವ್ಯಕ್ತಿಯೊಬ್ಬರು ಸಿಇಒ ಆಗುತ್ತಿರುವುದು ಕಂಪನಿಯ ಹಿತದೃಷ್ಟಿಯಿಂದ ಒಳಿತಾಗಲಿದೆ ಎಂದು ಉದ್ಯಮದ ಮಂದಿ ಅಭಿಪ್ರಾಯಪಡುತ್ತಾರೆ. ಒಟ್ಟಿನಲ್ಲಿ, ವಿಶಾಲ್ ಸಿಕ್ಕಾ ಅವರು ಎಸ್ ಡಿ ಶಿಬುಲಾಲ್ ಅವರ ಉತ್ತರಾಧಿಕಾರಿಯಾಗುತ್ತಾರಾ? ಆದರೂ ಕಂಪನಿಯನ್ನು ಮತ್ತೆ ಉಚ್ಚ್ರಾಯ ಸ್ಥಿತಿಗೆ ಕೊಂಡೊಯ್ಯುತ್ತಾರಾ? ಕಾದುನೋಡಬೇಕಿದೆ.

ಇತ್ತೀಚಿನ ದಿನಗಳಲ್ಲಿ ಇನ್ಫೋಸಿಸ್ ಕಂಪನಿಯ ವಿಷಯದಲ್ಲಿ ಒಂದೆಡೆ ಆಯಕಟ್ಟಿನ ಜಾಗಗಳಲ್ಲಿದ್ದ ಸುಮಾರು 10ಕ್ಕೂ ಹೆಚ್ಚು ಉನ್ನತಾಧಿಕಾರಿಗಳು ಗುಡ್ ಬೈ ಹೇಳಿರುವುದು ಮತ್ತು ಕಂಪನಿಯ ಪೇಲವ ತ್ರೈಮಾಸಿಕ ಫಲಿತಾಂಶಗಳು ಕಂಪನಿಯ ವರ್ಚಸ್ಸಿಗೆ ಧಕ್ಕೆ ತಂದಿವೆ ಎಂಬುದು ಉದ್ಯಮ ವಿಶ್ಲೇಷಕರ ಅನಿಸಿಕೆ.

English summary
According to industry sources and some speculations Former SAP executive Vishal Sikka be new CEO of Bangalore IT comapy Infosys. The appointment of Vadodara-born Sikka, 47, who resigned from the German business software maker early last month, is likely to be announced within the next few weeks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X