Get Updates
Get notified of breaking news, exclusive insights, and must-see stories!

ಬೆಂಗಳೂರಿನ ಬಸವನಗುಡಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆಯೇ 'ಭಾಸ್ಕರ್‌ ರಾವ್‌'? ಇಲ್ಲಿದೆ ಇನ್‌ಸೈಡ್‌ ಸ್ಟೋರಿ

ಬೆಂಗಳೂರು ನಗರ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಆಮ್‌ ಆದ್ಮಿ ಪಕ್ಷ ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರಿಗೆ ಬಿಜೆಪಿಯಿಂದ ಟಿಕೆಟ್‌ ದೊರೆಯುವುದೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ. ಇಲ್ಲಿದೆ ಇನ್‌ಸೈಡ್‌ ಸ್ಟೋರಿ

ಬೆಂಗಳೂರು, ಮಾರ್ಚ್‌ 03: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೆರಡು ತಿಂಗಳು ಬಾಕಿ ಇದೆ. ಈ ಸಂದರ್ಭ ರಾಜ್ಯ ರಾಜಕಾರಣವು ಹಲವು ಮಹತ್ವದ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಿದೆ. ಬೆಂಗಳೂರು ನಗರ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಆಮ್‌ ಆದ್ಮಿ ಪಕ್ಷ ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರಿಗೆ ಬಿಜೆಪಿಯಿಂದ ಟಿಕೆಟ್‌ ದೊರೆಯುವುದೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ.

 ಎಎಪಿ ಸೇರಿದ್ದ ಭಾಸ್ಕರ್‌ ರಾವ್‌

ಎಎಪಿ ಸೇರಿದ್ದ ಭಾಸ್ಕರ್‌ ರಾವ್‌

ಒಂದು ವರ್ಷದ ಹಿಂದೆ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ ಆಮ್‌ ಆದ್ಮಿ ಪಕ್ಷಕ್ಕೆ ಭಾಸ್ಕರ್ ರಾವ್ ಸೇರ್ಪಡೆಗೊಂಡಿದ್ದರು. ಎಎಪಿಯ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸಮ್ಮುಖದಲ್ಲಿ ಎಎಪಿಗೆ ಸೇರಿದ್ದ ಭಾಸ್ಕರ್‌ ರಾವ್‌ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದರು.

 ಅಚ್ಚರಿಗೆ ಕಾರಣವಾಗಿದ್ದ ಭಾಸ್ಕರ್‌ ರಾವ್‌ ನಡೆ

ಅಚ್ಚರಿಗೆ ಕಾರಣವಾಗಿದ್ದ ಭಾಸ್ಕರ್‌ ರಾವ್‌ ನಡೆ

ಇದಕ್ಕೂ ಮೊದಲು ಭಾಸ್ಕರ್‌ ರಾವ್‌ ಅವರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. ಆದರೆ, ಅವರು ಕೇಸರಿ ಪಾಳಯಕ್ಕೆ ಸೇರ್ಪಡೆಗೊಳ್ಳದೇ, ಎಎಪಿಗೆ ಸೇರಿದ್ದು ಸಾರ್ವಜನಿಕರ ಅಚ್ಚರಿಗೆ ಕಾರಣವಾಗಿತ್ತು. ಇದಕ್ಕೆ ಸ್ಪಷ್ಟಣೆ ನೀಡಿದ್ದ ಭಾಸ್ಕರ್‌ ರಾವ್‌ ಅವರು ದೆಹಲಿ ಮುಖ್ಯಮಂತ್ರಿ ಅವರ ಕಾರ್ಯವೈಕರಿ ಹಾಗೂ ಪ್ರಾಮಾಣಿಕತೆಯನ್ನು ಮೆಚ್ಚಿ ಎಎಪಿ ಸೇರಿದ್ದಾಗಿ ತಿಳಿಸಿದ್ದರು.

 ಅಂದು ಕೇಜ್ರಿವಾಲ್‌, ಇಂದು ಮೋದಿ

ಅಂದು ಕೇಜ್ರಿವಾಲ್‌, ಇಂದು ಮೋದಿ

ಈಗ ಬಿಜೆಪಿ ಸೇರಿರುವ ಮಾಜಿ ಐಪಿಎಸ್‌ ಅಧಿಕಾರಿ ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಮೋದಿ ಅವರ ಪ್ರಾಮಾಣಿಕತೆ ಹಾಗೂ ಕಾರ್ಯಕ್ಷಮತೆಗಳನ್ನು ಮೆಚ್ಚಿ ಬಿಜೆಪಿ ಸೇರಿರುವುದಾಗಿ ಹೇಳಿದ್ದಾರೆ. ಇದೇ ವೇಳೆ ಎಎಪಿಯನ್ನು ಟೀಕಿಸಿರುವ ಅವರು ಪಕ್ಷದಲ್ಲಿ ಯಾವುದೇ ಬೆಳವಣಿಗೆ ಇರಲಿಲ್ಲ. ಅದರಳೊಗಿನ ಜಡತ್ವವನ್ನು ತೊರೆದುಹಾಕುವ ನನ್ನ ಪ್ರಯತ್ನಗಳು ವಿಫಲವಾದವು ಎಂದೂ ಭಾಸ್ಕರ್‌ ರಾವ್‌ ತಿಳಿಸಿದ್ದಾರೆ.

 ಕಾರ್ಯಕರ್ತನಾಗಿ ಪಕ್ಷದಲ್ಲಿ ಕೆಲಸ

ಕಾರ್ಯಕರ್ತನಾಗಿ ಪಕ್ಷದಲ್ಲಿ ಕೆಲಸ

'ನಾನು ಪಕ್ಷವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದೆ. ಸಾಕಷ್ಟು ಚರ್ಚೆಯ ನಂತರ ಬಿಜೆಪಿ ಸೇರಲು ನಿರ್ಧರಿಸಿದೆ. ನಾನು ಯಾವುದೇ ಹುದ್ದೆ ಅಥವಾ ಏನನ್ನೂ ಕೇಳಿಲ್ಲ. ನಾನು ಕಾರ್ಯಕರ್ತನಾಗಿ ಪಕ್ಷದಲ್ಲಿ ಕೆಲಸ ಮಾಡುತ್ತೇನೆ' ಎಂದು ರಾವ್ ಹೇಳಿದ್ದಾರೆ.

 ಅಶೋಕ್‌, ಕಟೀಲ್‌, ಜೋಶಿ, ಅಣ್ಣಾಮಲೈ ಭೇಟಿ

ಅಶೋಕ್‌, ಕಟೀಲ್‌, ಜೋಶಿ, ಅಣ್ಣಾಮಲೈ ಭೇಟಿ

ಎಎಪಿ ತೊರೆಯುವುದಾಗಿ ಘೋಷಿಸುವ ಮುನ್ನ ಭಾಸ್ಕರ್‌ ರಾವ್‌ ಅವರು ಕಂದಾಯ ಸಚಿವ ಆರ್ ಅಶೋಕ್‌ ಅವರ ನಿವಾಸ ಮತ್ತು ಪಕ್ಷದ ಕಚೇರಿಗೆ ಭೇಟಿ ನೀಡಿದ್ದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ಕರ್ನಾಟಕ ಉಸ್ತುವಾರಿ ಕೆ ಅಣ್ಣಾಮಲೈ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

 ಬಸವನಗುಡಿಯಿಂದ ಕಣಕ್ಕಿಳಿಸಲು ಮುಂದಾಗಿದ್ದ ಎಎಪಿ

ಬಸವನಗುಡಿಯಿಂದ ಕಣಕ್ಕಿಳಿಸಲು ಮುಂದಾಗಿದ್ದ ಎಎಪಿ

ಮುಂಬರುವ ಚುನಾವಣೆಯಲ್ಲಿ ಬಸವನಗುಡಿ ಅಥವಾ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಿಂದ ರಾವ್‌ ಅವರನ್ನು ಕಣಕ್ಕಿಳಿಸಲು ಎಎಪಿ ಮುಂದಾಗಿತ್ತು. ಎರಡು ಕ್ಷೇತ್ರಗಳಲ್ಲಿ ಬ್ರಾಹ್ಮಣ ಸಮುದಾಯದ ಮತಗಳು ಹೆಚ್ಚಾಗಿವೆ. ಹಿನ್ನೆಲೆಯಲ್ಲಿ ಭಾಸ್ಕರ್‌ ರಾವ್‌ ಅವರು ಈ ಎರಡು ಕ್ಷೇತ್ರಗಳ ಪೈಕಿ ಒಂದರಲ್ಲಿ ಅವರ ಸ್ಪರ್ಧಿಸಲಿದ್ದಾರೆ ಎಂದು ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡಿದ್ದವು.

 ಬಸವನಗುಡಿ ಕ್ಷೇತ್ರದಲ್ಲಿ ದಟ್ಟವಾದ ಶಂಕೆಗಳು

ಬಸವನಗುಡಿ ಕ್ಷೇತ್ರದಲ್ಲಿ ದಟ್ಟವಾದ ಶಂಕೆಗಳು

ಈಗ ಮತ್ತೆ ಅಂತದೇ ಮಾತುಗಳು ಕೇಳಿಬರುತ್ತಿವೆ. ಬಸವನಗುಡಿ ಕ್ಷೇತ್ರದಿಂದ ಭಾಸ್ಕರ್‌ ರಾವ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಲಿದೆಯೇ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಆದರೆ, ಬಸವನಗುಡಿಯಲ್ಲಿ ಈಗಾಗಲೇ ರವಿ ಸುಬ್ರಮಣ್ಯ ಅವರು ಮೂರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಬಸವನಗುಡಿ ಕ್ಷೇತ್ರದಲ್ಲಿ ಭದ್ರ ನೆಲೆ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಭಾಸ್ಕರ್‌ ರಾವ್‌ ಅವರಿಗೆ ಟಿಕೆಟ್‌ ಸಿಗಬಹುದೇ ಎಂಬ ಶಂಕೆಗಳನ್ನೂ ಅಲ್ಲಗಳೆಯುವಂತಿಲ್ಲ. ಒಂದು ವೇಳೆ, ಬಸವನಗುಡಿಯ ಟಿಕೆಟ್‌ ಕೈತಪ್ಪಿದರೆ, ಜಯನಗರದ ಟಿಕೆಟ್‌ಗೆ ಮಾಜಿ ಅಧಿಕಾರಿಗೆ ಬೇಡಿಕೆ ಇಡಬಹುದು ಎಂದು ರಾಜಕೀಯ ತಜ್ಞರು ಹೇಳುತ್ತಿದ್ದಾರೆ. ಮಾಜಿ ಐಪಿಎಸ್‌ ಅಧಿಕಾರಿಯ ಭವಿಷ್ಯ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+