ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಮೋದಿ ಮತ್ತೊಮ್ಮೆ ಪ್ರಧಾನಿ ಆಗದಿದ್ದರೆ ಭಾರತ ಐವತ್ತು ವರ್ಷ ಹಿಂದಕ್ಕೆ'

|
Google Oneindia Kannada News

Recommended Video

'ಮೋದಿ ಮತ್ತೊಮ್ಮೆ ಪ್ರಧಾನಿ ಆಗದಿದ್ದರೆ ಭಾರತ ಐವತ್ತು ವರ್ಷ ಹಿಂದಕ್ಕೆ' | Oneindia Kannada

ಬೆಂಗಳೂರು, ಫೆಬ್ರವರಿ 25: ಒಂದು ವೇಳೆ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಲಿಲ್ಲ ಅಂದರೆ ದೇಶವು ಐವತ್ತು ವರ್ಷ ಹಿಂದಕ್ಕೆ ಹೋಗುತ್ತದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯ ಪಟ್ಟಿದ್ದಾರೆ.

"ನಮಗೆ ಹಿನ್ನಡೆ ಆಗಿ, ಬಲಿಷ್ಠವಾದ ಬಹುಮತದ ಸರಕಾರವನ್ನು ಕಳೆದುಕೊಂಡರೆ ನಾವು ಕನಿಷ್ಠ ಐವತ್ತು ವರ್ಷಗಳ ಕಾಲ ಹಿಂದಕ್ಕೆ ಹೋದಂತೆ ಆಗುತ್ತದೆ" ಎಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಭಾನುವಾರ ಅವರು ಹೇಳಿದ್ದಾರೆ.

ರಫೇಲ್ ಹಸ್ತಕ್ಷೇಪ : ವರದಿ ಪ್ರಕಟಿಸಿದ ಪತ್ರಿಕೆಗೆ ನಿರ್ಮಲಾ ಸವಾಲು ರಫೇಲ್ ಹಸ್ತಕ್ಷೇಪ : ವರದಿ ಪ್ರಕಟಿಸಿದ ಪತ್ರಿಕೆಗೆ ನಿರ್ಮಲಾ ಸವಾಲು

ಬಿಜೆಪಿಯು ಮಾಡಿದ ಕೆಲಸಕ್ಕಾಗಿ ಅದನ್ನು ಗುರುತಿಸದಿದ್ದಲ್ಲಿ ಭಾರತವು ಮೊದಲ ಬಾರಿಗೆ ಮತ ಚಲಾಯಿಸುವವರ ಇಷ್ಟಕ್ಕೆ ವಿರುದ್ಧವಾಗಿ ನಡೆದುಕೊಂಡಂತೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

Will be set back by 50 years if PM not voted to power, said Nirmala Sitharaman

ನಮ್ಮಲ್ಲಿ ಯಾರು ಇಪ್ಪತ್ತನೇ ಶತಮಾನದಲ್ಲಿ ಜನಿಸಿದ್ದೇವೆ, ಮೊದಲ ಬಾರಿಗೆ ಅತ ಚಲಾಯಿಸುತ್ತಿರುವವರಿಗೆ ಸರಿಯಾದ ನೆರವು ನೀಡುತ್ತಿಲ್ಲ. ನಮ್ಮ ಯುವ ಜನಾಂಗಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತೀರಾ? ಸ್ವಚ್ಛ ರಾಜಕಾರಣ ಹಾಗೂ ಬದ್ಧತೆ ಇಲ್ಲದವರ ಮೂಲಕ ದೇಶವನ್ನು ಯುವಜನರ ಎದುರಿಗೆ ತರಲು ಬಯಸುತ್ತೀರಾ ಎಂದು ಪ್ರಶ್ನಿಸಿದರು.

ಮೋದಿ ಕೆಳಗಿಳಿಸಲು ಕಾಂಗ್ರೆಸ್ ಗೆ ಪಾಕ್ ನೆರವು: ನಿರ್ಮಲಾ ಸೀತಾರಾಮನ್ ಮೋದಿ ಕೆಳಗಿಳಿಸಲು ಕಾಂಗ್ರೆಸ್ ಗೆ ಪಾಕ್ ನೆರವು: ನಿರ್ಮಲಾ ಸೀತಾರಾಮನ್

ಯಾವುದೇ ದೇಶದ ಇತಿಹಾಸದಲ್ಲಿ ಈಗ ನಿಮಗೆ ಸಿಕ್ಕಿರುವಂಥ ನಾಯಕತ್ವ ಯಾವಾಗಲೂ ಸಾಧ್ಯವಿಲ್ಲ. ಕಳೆದ ಐದು ವರ್ಷಗಳಲ್ಲಿ ಬಹಳ ಕೆಲಸಗಳಿವೆ. ಒಂದು ದಿನವೂ ಬಿಡುವು ತೆಗೆದುಕೊಳ್ಳದ ಪ್ರಧಾನಿಯನ್ನು ನೋಡಿದ್ದೀರಿ. ಕಳೆದ ಬಾರಿಗೂ ಈ ಸಲದ ಸರಕಾರಕ್ಕೂ ಗುರುತಿಸಬಹುದಾದ ಸ್ಪಷ್ಟ ವ್ಯತ್ಯಾಸ ಏನೆಂದರೆ, ಮೋದಿ ಸರಕಾರದಲ್ಲಿ ಲಂಚದ ಸದ್ದೇ ಕೇಳಿಬರುತ್ತಿಲ್ಲ. ಆ ಕಾರಣಕ್ಕೆ ರಾಹುಲ್ ಗಾಂಧಿ ಯಾವುದಾದರೂ ವಿಷಯ ಎತ್ತಾಡಬೇಕು ಅಂದುಕೊಳ್ಳುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

English summary
Defence Minister Nirmala Sitharaman has said that the country would face a setback of 50 years if Prime Minister Narendra Modi does not return to power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X